ಶಿಕ್ಷಣ ಸಚಿವ ಎಸ್.ಆರ್. ಶ್ರೀನಿವಾಸ್ ಶೀಘ್ರವೇ ದೆಹಲಿ, ಕೇರಳ ಪ್ರವಾಸ!

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಆರ್ ಶ್ರೀನಿವಾಸ್ ಈ ವಾರಾಂತ್ಯದಲ್ಲಿ ದೆಹಲಿ ಮತ್ತು ಕೇರಳ ಪ್ರವಾಸ ಕೈಗೊಳ್ಳಲಿದ್ದಾರೆ. ..
ಎಸ್, ಆರ್ ಶ್ರೀನಿವಾಸ್
ಎಸ್, ಆರ್ ಶ್ರೀನಿವಾಸ್
Updated on
ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಆರ್ ಶ್ರೀನಿವಾಸ್ ಈ ವಾರಾಂತ್ಯದಲ್ಲಿ ದೆಹಲಿ ಮತ್ತು ಕೇರಳ ಪ್ರವಾಸ ಕೈಗೊಳ್ಳಲಿದ್ದಾರೆ. 
ದೆಹಲಿ ಮತ್ತು ಕೇರಳ ಮಾದರಿಯ ಶಿಕ್ಷಣ ನೀತಿ ನಿಯಮಗಳ ಬಗ್ಗೆ ತಿಳಿದುಕೊಳ್ಳಲು ಈ ಪ್ರವಾಸ ಹಮ್ಮಿಕೊಂಡಿರುವುದಾಗಿ ತಿಳಿಸಿದ್ದಾರೆ. ದೆಹಲಿಯಲ್ಲಿ 10 ಮತ್ತು 11 ನೇ ತರಗತಿ ಪಠ್ಯಗಳನ್ನು ಉತ್ತಮವಾಗಿ ಸಂಯೋಜಿಸಿದೆ, ಹೀಗಾಗಿ ಅಲ್ಲಿನ ಮಾದರಿ ತಿಳಿದುಕೊಂಡು ಬಂದು ಇಲ್ಲಿ ಅವುಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.
10ನೇ ತರಗತಿ ನಂತರ ಹಲವು ವಿದ್ಯಾರ್ಥಿಗಳು ಶಾಲೆಯಿಂದ ಹೊರಬಿದ್ದಿದ್ದಾರೆ, 11ನೇ ತರಗತಿ ಕಷ್ಟವಾದ್ದರಿಂದ ಈ ರೀತಿಯಾಗಿದೆ, ಅದನ್ನು ಸುಲಭವಾಗಿಸಲು ತಾಂತ್ರಿಕವಾಗಿ ಪ್ರಯತ್ನ ಮಾಡಲಾಗುತ್ತಿದೆ,  ಪಠ್ಯ ಪುಸ್ತಕಗಳಲ್ಲಿ ಸ್ಢಳೀಯ ಪ್ರಾಮುಖ್ಯತೆ ಬಗ್ಗೆ ಮಾತನಾಡಿದ ಅವರು. ರಾಜ್ಯದ ಇತಿಹಾಸಕ್ಕೂ ಪ್ರಾಮುಖ್ಯತೆ ನೀಡಲಾಗುವುದು ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com