ಕಾಲೊನಿ ನಿವಾಸಿ ಶಿವಮ್ಮ 30 ವರ್ಷಗಳ ಹಿಂದೆ ತನ್ನ ಕುಟುಂಬಸ್ಥರನ್ನು ತೊರೆದು ಬೇರೊಬ್ಬನ ಜೊತೆ ಓಡಿಹೋಗಿದ್ದಳು. ಅಂದಿನಿಂದ ಆಕೆಯ ಪತಿ ವೆಂಕಟರಮಣಪ್ಪ ಮತ್ತು ಮಕ್ಕಳಿಗೆ ಸಮುದಾಯದ ಮಂದಿ ಬಹಿಷ್ಕಾರ ಹಾಕಿದ್ದರು. ಅವರ ಜೊತೆ ಯಾರೂ ಮಾತನಾಡುತ್ತಿರಲಿಲ್ಲ. ಸಮುದಾಯದ ಯಾವುದೇ ಸಮಾರಂಭಗಳಿಗೆ ಸೇರಿಸುತ್ತಿರಲಿಲ್ಲ, ಕಾಲೊನಿಯ ದೇವಸ್ಥಾನದಲ್ಲಿ ಪೂಜೆ ಮಾಡಲು ಸಹ ಬಿಡುತ್ತಿರಲಿಲ್ಲ. ಕುಟುಂಬದವರು ತಮಗೆ ನ್ಯಾಯ ದೊರಕಿಸಿಕೊಡಲು ಕಂಡ ಕಂಡವರ ಸಹಾಯ ಕೋರಿದ್ದರು, ಆದರೆ ಪ್ರಯೋಜನವಾಗಿರಲಿಲ್ಲ.