ಬೆಳಗಾವಿ: ಮಾಜಿ ಶಾಸಕ ಪರಶುರಾಮ್ ನಂದಿಹಳ್ಳಿ ಸಾವಿನ ಪ್ರಕರಣವನ್ನು ತನಿಖಾ ತಂಡ ಭೇಧಿಸಿದೆ, ಆಕಸ್ಮಿಕವಾಗಿ ಅರುಣ್ ತಮ್ಮನ್ನು ತಾವೇ ಕೊಂದುಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಅರುಣ್ ನಂದಿಹಳ್ಳಿ ಸಾವು ಕೊಲೆ ಅಥವಾ ಆತ್ಮಹತ್ಯೆಯಲ್ಲ ಎಂದು ಪೊಲೀಸರು ತಿಳಿಸಿದ್ದಾರೆ, ಮಾರ್ಚ್ 19 ರಂದು ಅರುಣ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಮೊದಲು ಅರುಣ್ ಸಾವು ಕೊಲೆ ಎಂದು ಭಾವಿಸಲಾಗಿತ್ತು, ಹೀಗಾಗಿ ಬೆಳಗಾವಿಯಲ್ಲಿ ಉದ್ವಿಘ್ನ ವಾತಾವಾರಣ ಮೂಡಿತ್ತು.
ಪ್ರಕರಣ ಬೇಧಿಸಲು ಪೊಲೀಸರ ಮೇಲೆ ಒತ್ತಡವಿತ್ತು, ಆದರೆ ತಿಂಗಳು ಕಳೆದರು ಯಾವುದೇ ಬೆಳವಣಿಗೆ ಕಂಡು ಬಂದಿಲ್ಲ, ಸುಮಾರು 150 ಕ್ಕೂ ಹೆಚ್ಚು ಮಂದಿಯನ್ನು ಪ್ರಶ್ನಿಸಲಾಗಿತ್ತು, ಆದರೆ ಯಾವುದೇ ಸುಳಿವು ಸಿಗಲಿಲ್ಲ, ಹಾಗಾಗಿ ಪೊಲೀಸರು ಮತ್ತೊಮ್ಮೆ ಹೊಸದಾಗಿ ತನಿಖೆ ಆರಂಭಿಸಿದ್ದರು.
ತನ್ನ ಭುಜಕ್ಕೆ ಗುಂಡು ಹಾರಿಸಿಕೊಳ್ಳುವಾಗ ಆಯತಪ್ಪಿ ತಮ್ಮನ್ನು ತಾವೇ ಶೂಟ್ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೂ ಅರುಣ್ ಎರಡನೇ ಪತ್ನಿ ಗೀತಾ ವರ್ತನೆ ಬಗ್ಗೆ ಪೊಲೀಸರಿಗೆ ಅನುಮಾನ ಬಂದು ವಿಚಾರಣೆ ನಡೆಸಿದ್ದಾರೆ, ಆಕೆಯ ಸಹೋದರ ಮೋಹನ್ ಜೊತೆ ಪೊಲೀಸರು ಮಾತನಾಡಲು ಪ್ರಯತ್ನಿಸಿದ್ದಾರೆ, ಆದರೆ ತನ್ನ ಸಹೋದರ ಮುಗ್ದ ಎಂದು ಆಕೆ ತಿಳಿಸಿದ್ದಾರೆ, ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದಾಗ ಎಲ್ಲಾ ವಿಷಯ ತಿಳಿಸಿದ್ದಾರೆ.