ಆರ್ ಟಿಐ ಅಡಿಯಲ್ಲಿ ಮಾಹಿತಿ ನೀಡದಿದ್ದಕ್ಕೆ ತಹಸೀಲ್ದಾರ್ ಗೆ 30 ಸಾವಿರ ದಂಡ

ಆರ್ ಟಿಐ ಅಡಿಯಲ್ಲಿ ಮಾಹಿತಿ ನೀಡದಿದ್ದಕ್ಕೆ ತಹಸೀಲ್ದಾರ್ ಒಬ್ಬರಿಗೆ ರಾಜ್ಯ ಮಾಹಿತಿ ಆಯುಕ್ತರು 30 ಸಾವಿರ ರೂಪಾಯಿ ದಂಡ ವಿಧಿಸಿರುವ ಘಟನೆ ಶ್ರೀರಂಗಪಟ್ಟಣದಲ್ಲಿ ನಡೆದಿದೆ.
ವಿಶ್ವನಾಥ್
ವಿಶ್ವನಾಥ್
Updated on: 
ಬೆಂಗಳೂರು: ಆರ್ ಟಿಐ ಅಡಿಯಲ್ಲಿ ಮಾಹಿತಿ ನೀಡದಿದ್ದಕ್ಕೆ ತಹಸೀಲ್ದಾರ್ ಒಬ್ಬರಿಗೆ ರಾಜ್ಯ ಮಾಹಿತಿ ಆಯುಕ್ತರು 30 ಸಾವಿರ ರೂಪಾಯಿ ದಂಡ ವಿಧಿಸಿರುವ ಘಟನೆ ಶ್ರೀರಂಗಪಟ್ಟಣದಲ್ಲಿ ನಡೆದಿದೆ.
73 ವರ್ಷದ ಮಾಜಿ ರಣಜಿ ಟ್ರೋಫಿ ಕ್ರಿಕೆಟ್ ಆಟಗಾರ ವಿಶ್ವನಾಥ್  ಮೊದಲು ಅಮಾಯಕರಂತೆ  ಮಾಹಿತಿ ಕೇಳಿದ್ದಾಗ ನೀಡಿರಲಿಲ್ಲ. ಆದರೆ, 2016ರಲ್ಲಿ ರಾಜ್ಯ ಮಾಹಿತಿ ಆಯೋಗವನ್ನು ಕೋರಿದ ನಂತರ ಅಂತಿಮವಾಗಿ ಮಾಹಿತಿ ನೀಡದ ತಹಸೀಲ್ದಾರ್ ಗೆ ದಂಡ ವಿಧಿಸಲಾಗಿದೆ.
ತಹಸೀಲ್ದಾರ್ ನಾಗೇಶ್ ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಹೆಚ್ ವಿ ಸತ್ಯನಾರಾಯಣ ಅವರಿಗೆ ಮಾಹಿತಿ ಆಯೋಗ ನೋಟಿಸ್ ಜಾರಿ ನೀಡಿದ್ದು, ವಿಚಾರಣೆಗೆ ಸತ್ಯನಾರಾಯಣ್ ಹಾಜರಾದರೆ ನಾಗೇಶ್ ಗೈರಾಗಿದ್ದರು. ವಿಶ್ವನಾಥ್ ಕೇಳಿದ್ದ  2006ರಿಂದ 2007ರವರೆಗಿನ ಮಾಹಿತಿಯನ್ನು ನೀಡಲು ಸಂಬಂಧಿತ  ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.
ತಹಸೀಲ್ದಾರ್ ನಾಗೇಶ್ ಅವರಿಗೆ ಮೂರು ದೂರುಗಳಿಗೆ ಸಂಬಂಧಿಸಿದಂತೆ ತಲಾ 10 ಸಾವಿರದಂತೆ  30 ಸಾವಿರ ದಂಡ ವಿಧಿಸಿದ್ದು, ಪ್ರತಿತಿಂಗಳು 5 ಸಾವಿರ ಸಂಬಳವನ್ನು ಕಡಿತಗೊಳಿಸುವಂತೆ ಕಂದಾಯ ಇಲಾಖೆಗೆ ರಾಜ್ಯ ಮಾಹಿತಿ ಆಯುಕ್ತ ಎಸ್.ಎಲ್. ಪಾಟೀಲ್ ಆದೇಶಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com