ಮಂಗಳೂರು: ಮಿಥುನ್ ರೈಗೆ ಜೀವ ಬೆದರಿಕೆ ಹಾಕಿದ ಮೂವರ ಬಂಧನ

ಭಜರಂಗ ದಳ ಕಾರ್ಯಕರ್ತರಿಂದ ತಮಗೆ ಜೀವಬೆದರಿಕೆಯಿದೆ ಎಂದು ದಕ್ಷಿಣ ಕನ್ನಡದ ಕಾಂಗ್ರೆಸ್...
ಮಿಥುನ್ ರೈ
ಮಿಥುನ್ ರೈ
Updated on
ಮಂಗಳೂರು: ಭಜರಂಗ ದಳ ಕಾರ್ಯಕರ್ತರಿಂದ ತಮಗೆ ಜೀವಬೆದರಿಕೆಯಿದೆ ಎಂದು ದಕ್ಷಿಣ ಕನ್ನಡದ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಮಿಥುನ್ ರೈ ದೂರು ನೀಡಿದ್ದ ಹಿನ್ನಲೆಯಲ್ಲಿ ಮೂವರು ಯುವಕರನ್ನು ಬಂಧಿಸಲಾಗಿದೆ.
ಬಂಧಿತರು ಬಂಟ್ವಾಳದ ಅಮ್ಮುಂಜೆ ಗ್ರಾಮದ ನಿಶಾಂತ್(23ವ), ಸಚಿನ್(25ವ) ಹಾಗೂ ಕಾಸರಗೋಡಿನ ಕಾರ್ತಿಕ್ (30ವ) ಎಂಬವರಾಗಿದ್ದಾರೆ.
ನಳಿನ್ ಕುಮಾರ್ ಕಟೀಲ್ ಗೆದ್ದ ಬಳಿಕ ಬಂಟ್ವಾಳದ ಬಡಕಬೈಲಿನಲ್ಲಿ ರ್ಯಾಲಿ ನಡೆಸುತ್ತಿದ್ದ ವೇಳೆ ಕೆಲವು ಬಿಜೆಪಿ ಬೆಂಬಲಿಗರು ಮಿಥುನ್ ರೈಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಆರೋಪವಿದೆ. ಬಿಜೆಪಿ ಬೆಂಬಲಿಗರು ಮೇ 23ರಂದು ವಿಜಯೋತ್ಸವ ಆಚರಿಸುತ್ತಿದ್ದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ವಿಡಿಯೊದಲ್ಲಿ ಕೇಸರಿ ಶಿರೋವಸ್ತ್ರ ಧರಿಸಿ ಧ್ವಜ ಹಿಡಿದುಕೊಂಡು ಭಜರಂಗದಳ ಕಾರ್ಯಕರ್ತರು ಬೆಂಬಲಿಗರೊಂದಿಗೆ ವಿಜಯೋತ್ಸವ ಆಚರಿಸುತ್ತಾ ಮಿಥುನ್ ರೈಯನ್ನು ನಿಂದಿಸುತ್ತಿದ್ದರು. ಭಜರಂಗದಳ ಕಾರ್ಯಕರ್ತರಿಗೆ ತೊಂದರೆ ಕೊಡುವುದಾಗಲಿ ಅಥವಾ ಮಧ್ಯ ಪ್ರವೇಶಿಸುವುದಾಗಲಿ ಮಾಡಿದರೆ ನಾವು ಮಿಥುನ್ ರೈಯ ಕೈ-ಕಾಲು ಮುರಿಯುತ್ತೇವೆ, ಇನ್ನೂ ಅಗತ್ಯಬಿದ್ದರೆ ಅವರ ಕತ್ತು ಸೀಳುತ್ತೇವೆ ಎಂದು ತುಳುವಿನಲ್ಲಿ ಹೇಳಿರುವ ವಿಡಿಯೊ ವೈರಲ್ ಆಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com