ನೀರಿನ ದರ ಹೆಚ್ಚಿಸಲು ಬಿಡಬ್ಲ್ಯೂಎಸ್ ಎಸ್ ಬಿ ಚಿಂತನೆ

ವಿದ್ಯುತ್ ದರ ಹೆಚ್ಚಳದ ಬೆನ್ನಲ್ಲೇ ಈಗ ನೀರಿನ ದರವನ್ನು ಹೆಚ್ಚಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಚಿಂತನೆ ನಡೆಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ವಿದ್ಯುತ್ ದರ ಹೆಚ್ಚಳದ ಬೆನ್ನಲ್ಲೇ ಈಗ ನೀರಿನ ದರವನ್ನು ಹೆಚ್ಚಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಚಿಂತನೆ ನಡೆಸಿದೆ.

ವಿದ್ಯುತ್ ದರ ಹೆಚ್ಚಳದಿಂದಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಹೊಡೆತ ಬಿದಿದ್ದು, ರಾಜ್ಯದಲ್ಲಿ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಿಗೆ  ಈಗಾಗಲೇ  ತಿಂಗಳಿಗೆ 48 ಕೋಟಿ ರೂಪಾಯಿಯನ್ನು ಪಾವತಿಸುತ್ತಿದೆ.

ಮಂಡ್ಯದಲ್ಲಿನ . ಟಿ. ಕೆ. ಹಳ್ಳಿಯಿಂದ ನಗರಕ್ಕೆ ನೀರನ್ನು ಪಂಪ್ ಮಾಡಲು ಪ್ರಾರಂಭಿಸಿದ ನಂತರ ತಿಂಗಳಿಗೆ ಅಂದಾಜು ಶೇ. 43. 5 ರಂತೆ 110 ಕೋಟಿ ರೂಪಾಯಿ ಆದಾಯವನ್ನು  ವಿದ್ಯುತ್ ಗಾಗಿಯೇ ವೆಚ್ಚ ಮಾಡಲಾಗುತ್ತಿದೆ.

ವಿದ್ಯುತ್ ದರ ಹೆಚ್ಚಳದಿಂದ ನಮ್ಮ ಮೇಲೆ ಸ್ವಲ್ಪ ಪ್ರಮಾಣದ ಪರಿಣಾಮ ಬೀರಿದೆ. ಆದಾಗ್ಯೂ. ನಗರದಾದ್ಯಂತ ನೀರಿನ ದರವನ್ನು ಹೆಚ್ಚಿಸಲು ಈಗಾಗಲೇ ನಿರ್ಧರಿಸಲಾಗಿದೆ ಎಂದು ಬಿಡಬ್ಲ್ಯೂ ಎಸ್ ಎಸ್ ಬಿ ಮುಖ್ಯಸ್ಥ ತುಷಾರ್ ಗಿರಿನಾಥ್ ಹೇಳಿದ್ದಾರೆ.

ನೀರಿನ ದರ ಹೆಚ್ಚಳ ಕುರಿತ ಪ್ರಸ್ತಾವ ಮಂಡಳಿ ಮುಂದಿದೆ. ಆದರೆ, ಸ್ವೀಕರಿಸಿಲ್ಲ , ಜೂನ್ ತಿಂಗಳ ಮಧ್ಯಭಾಗದಲ್ಲಿ ಪರಿಷ್ಕರಿಸುವ ಸಾಧ್ಯತೆ ಇದೆ ಎಂದು ಹೇಳಿದ ಗಿರಿನಾಥ್ , ಪ್ರಸ್ತಾವಿತ ನೀರಿನ ದರ  ಹೆಚ್ಚಳದ ಪ್ರಸ್ತಾವನೆ ಸಂಬಂಧ ಯಾವುದೇ ಮಾಹಿತಿಯನ್ನು ನೀಡಲಿಲ್ಲ.

ಪ್ರಸ್ತಾವಕ್ಕೆ ಮಂಡಳಿಯ ಅನುಮೋದನೆ ಪಡೆದ ನಂತರ ರಾಜ್ಯ ಸರ್ಕಾರದ ಅನುಮೋದನೆ ಅಗತ್ಯವಾಗಿರುತ್ತದೆ. ಬೆಂಗಳೂರಿಗೆ ಕಾವೇರಿ ನೀರು ಹರಿಸಲು 42 ಕೋಟಿ ರೂಪಾಯಿಯನ್ನು ಪಾವತಿಸಲಾಗುತ್ತಿದೆ. ಅದಲ್ಲದೇ ಹೆಚ್ಚುವರಿಯಾಗಿ 6 ಕೋಟಿ ರೂಪಾಯಿ ಬೇಕಾಗುತ್ತದೆ. ಚಾಮುಂಡೇಶ್ವರಿ ವಿದ್ಯುತ್ ಪೂರೈಕೆ ಕಂಪನಿ ನಿಯಮಿತ ಹಾಗೂ ಬೆಸ್ಕಾಂ ಈ ಬಿಲ್ ಗಳನ್ನು ಪಾವತಿಸುತ್ತಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com