ಬೆಂಗಳೂರಿನಲ್ಲಿ ಬಾಂಗ್ಲಾ ಉಗ್ರರು! ಎನ್ಐಎನಿಂದ ಶಂಕಿತರ ಪಿಜಿ ತಪಾಸಣೆ

ಬಾಂಗ್ಲಾದೇಶದ ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಕಾರ್ಯಕರ್ತರಿಗೆ ಬೆಂಗಳೂರು ಸುರಕ್ಷಿತ ತಾಣವಾಗಿ ಹೊರಹೊಮ್ಮುತ್ತಿದೆ - ಜಮಾಅತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶ (ಜೆಎಂಬಿ) ಮತ್ತು ಅನ್ಸರುಲ್ಲಾ ಬಾಂಗ್ಲಾ ಟೀಂ (ಎಬಿಟಿ) ಸಹಚರರು ಸಿಲಿಕಾನ್ ಸಿಟಿಯಲ್ಲಿ ನೆಲೆಯಾಗುತ್ತಿದ್ದಾರೆ 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬಾಂಗ್ಲಾದೇಶದ ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಕಾರ್ಯಕರ್ತರಿಗೆ ಬೆಂಗಳೂರು ಸುರಕ್ಷಿತ ತಾಣವಾಗಿ ಹೊರಹೊಮ್ಮುತ್ತಿದೆ - ಜಮಾಅತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶ (ಜೆಎಂಬಿ) ಮತ್ತು ಅನ್ಸರುಲ್ಲಾ ಬಾಂಗ್ಲಾ ಟೀಂ (ಎಬಿಟಿ) ಸಹಚರರು ಸಿಲಿಕಾನ್ ಸಿಟಿಯಲ್ಲಿ ನೆಲೆಯಾಗುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಹಿನ್ನೆಲೆ ಕೋಲ್ಕತ್ತಾದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳ ತಂಡವು ಶುಕ್ರವಾರ ಬೆಂಗಳೂರಿಗೆ ಆಗಮಿಸಿದೆ.

ಬೆಂಗಳೂರಿನ ಸೋಲದೇವನಹಳ್ಳಿಯ ಪಿಜಿ ಒಂದರಲ್ಲಿ  ಎಬಿಟಿ ಸದಸ್ಯ ಮಹಮೂದ್ ಹಸನ್ಗೆ ಸೇರಿದ ಡಿಜಿಟಲ್ ವಿಡಿಯೋ ರೆಕಾರ್ಡರ್ (ಡಿವಿಆರ್) ಅನ್ನು ಎನ್‌ಐಎವಶಪಡಿಸಿಕೊಂಡಿದೆ.

ಎಬಿಟಿ 2013 ಮತ್ತು 2015 ರ ನಡುವೆ ಬಾಂಗ್ಲಾದೇಶದಲ್ಲಿ ಉದಾರವಾದಿ ಚಿಂತಕರು ಮತ್ತು ಬ್ಲಾಗಿಗರನ್ನು ಕ್ರೂರವಾಗಿ ಹತ್ಯೆಗೈದಿದೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ಎಬಿಟಿ ಬೆಂಗಳೂರಿನ ಟೆಕ್ಕಿ ಯುವಕರನ್ನು ನೇಮಿಸಿಕೊಳ್ಳಲು ಮತ್ತು ಅವರಿಗೆ ಧಾರ್ಮಿಕ ಅಂಧಶ್ರದ್ದೆಗಳನ್ನು  ಉಪದೇಶಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಲಾಗಿದೆ. ಭಯೋತ್ಪಾದಕ ತಂಡ ಬಲವಾದ ಆನ್‌ಲೈನ್ ಜಾಲವನ್ನು ಹೊಂದಿದೆ. ಇದುವರೆಗೆ ಬೆಂಗಳೂರು ಮತ್ತು ಅದರ ಉಪನಗರಗಳಿಂದ ಐದು ಜೆಎಂಬಿ ಕಾರ್ಯಕರ್ತರನ್ನು ಎನ್ಐಎ ಬಂಧಿಸಿದೆ

ಬುರ್ದ್ವಾನ್ ಸ್ಫೋಟ. ಆರೋಪಿಗಳನ್ನು ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿದೆ.ಅಧಿಕೃತ ಮೂಲಗಳ ಪ್ರಕಾರ, ಎನ್ಐಎ ಕರ್ನಾಟಕದಲ್ಲಿ ಆರೋಪಿಗಳ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ ಎಂದು ಹೇಳಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com