ಯುವಕರು ಹೇಮಾವತಿ ನದಿಪಾಲು
ರಾಜ್ಯ
ಹಾಸನ: ಮೂವರು ಯುವಕರು ಹೇಮಾವತಿ ನದಿಪಾಲು
ಮೂವರು ಯುವಕರು ಹೇಮಾವತಿ ನದಿಪಾಲಾಗಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹುಣಸವಾಲಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಹಾಸನ: ಮೂವರು ಯುವಕರು ಹೇಮಾವತಿ ನದಿಪಾಲಾಗಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹುಣಸವಾಲಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ರಥನ್ (22), ಭೀಮ್‌ರಾಜ್ (27) ಮತ್ತು ಮನು (27) ಎಂಬವರು ಪವಿತ್ರ ಸ್ಥಾನಕ್ಕಾಗಿ ಹೇಮಾವತಿ ನದಿಗೆ ಇಳಿದಾಗ ಈ ದುರ್ಘಟನೆ ಸಂಭವಿಸಿದೆ. ನದಿಯಲ್ಲಿ ಭಾರೀ ಒಳಹರಿವು ಇದ್ದುದರಿಂದ ಅವರು ನೀರಿನಲ್ಲಿ ಕೊಚ್ಚಿ ಹೋದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಪ್ರತ್ಯಕ್ಷ ದರ್ಶಿಗಳು ತಿಳಿಸಿರುವಂತೆ ಮೊದಲು ರತನ್ ನೀರಿಗೆ ಧುಮುಕಿದ್ದು, ನಂತರ ಆತನನ್ನು ಹಿಂಬಾಲಿಸಿ ಭೀಮರಾಜ್ ಮತ್ತು ಮನು ಹೋಗಿದ್ದಾರೆ. ನದಿಯ ನೀರು ರಭಸದಿಂದ ಹರಿಯುತ್ತಿರುವ ಕಾರಣ, ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಸ್ಥಳಕ್ಕೆ ಆಲೂರು ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ