ದಕ್ಷಿಣ ರಾಜ್ಯಗಳ ಭದ್ರತೆ ಕುರಿತು ಮಾತುಕತೆಯ ಅವಶ್ಯಕತೆಯಿದೆ: ಟಿ.ಎಂ.ವಿಜಯಭಾಸ್ಕರ್

ಕರಾವಳಿ ಬದ್ರತೆ ಹಾಗೂ ಸೈಬರ್ ಯುದ್ಧ ಕಳವಳಕಾರಿಯಾಗಿದ್ದು, ದಕ್ಷಿಣ ರಾಜ್ಯಗಳ ಭದ್ರತೆ ಕುರಿತು ಮಾತುಕತೆ ನಡೆಸುವ ಅವಶ್ಯಕತೆಯಿದೆ ಎಂದು ಸರ್ಕಾರ ಮುಖ್ಯ ಕಾರ್ಯದರ್ಶಿ ಟಿಎಂ. ವಿಜಯ ಭಾಸ್ಕರ್ ಅವರು ಗುರುವಾರ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಡಿಸಿಎಂ ಅಶ್ವತ್ಥ್ ನಾರಾಯಣ್ ಹಾಗೂ ಇನ್ನಿತರೆ ಅಧಿಕಾರಿಗಳು ಹಾಜರಿರುವುದು.
ಕಾರ್ಯಕ್ರಮದಲ್ಲಿ ಡಿಸಿಎಂ ಅಶ್ವತ್ಥ್ ನಾರಾಯಣ್ ಹಾಗೂ ಇನ್ನಿತರೆ ಅಧಿಕಾರಿಗಳು ಹಾಜರಿರುವುದು.
Updated on

ಬೆಂಗಳೂರು: ಕರಾವಳಿ ಬದ್ರತೆ ಹಾಗೂ ಸೈಬರ್ ಯುದ್ಧ ಕಳವಳಕಾರಿಯಾಗಿದ್ದು, ದಕ್ಷಿಣ ರಾಜ್ಯಗಳ ಭದ್ರತೆ ಕುರಿತು ಮಾತುಕತೆ ನಡೆಸುವ ಅವಶ್ಯಕತೆಯಿದೆ ಎಂದು ಸರ್ಕಾರ ಮುಖ್ಯ ಕಾರ್ಯದರ್ಶಿ ಟಿಎಂ. ವಿಜಯ ಭಾಸ್ಕರ್ ಅವರು ಗುರುವಾರ ಹೇಳಿದ್ದಾರೆ. 

ಬೆಂಗಳೂರು ಅಭಿವೃದ್ಧಿ ಸಂಬಂಧಿಸಿದಂತೆ ಬಿಎಂಆರ್'ಡಿಎ ಕಚೇರಿಯಲ್ಲಿ ಗುರುವಾರ ಆಯೋಜಿಸಲಾಗಿದ್ದ 360 ಡಿಗ್ರಿ ಭದ್ರತಾ ಸಮಾವೇಶದಲ್ಲಿ ಮಾತನಾಡಿರುವ ಅವರು, ಗಡಿ ರಹಿತವಾಗಿರುವ ಸೈಬರ್ ಯುದ್ಧವನ್ನು ಎದುರಿಸುವಲ್ಲಿ ಬೆಂಗಳೂರು ನಗರ ಮುಂಚೂಣಿಯಲ್ಲಿರಬೇಕು. ಸೈಬಲ್ ಸೆಕ್ಯುರಿಟಿ ಸೆಲ್ ಮತ್ತು ಇದಕ್ಕೆ ಸಂಬಂಧ ಪಟ್ಟಂತಹ ಪೊಲೀಸ್ ಠಾಣೆಯನ್ನು ಹೊಂದಿರುವ ದೇಶದ ಮೊದಲ ರಾಜ್ಯ ಕರ್ನಾಟಕವಾಗಿದೆ. ರಾಷ್ಟ್ರೀಯ ಗಡಿಗಳಿಂದ ಬೆಂಗಳೂರು ದೂರವಿರುವುದು ನಿಜ. ಹೀಗಾಗಿ ಇಲ್ಲಿನ ಭದ್ರತೆಯು ರಾಷ್ಟ್ರಕ್ಕೆ ಅಷ್ಟೊಂದು ಮುಖ್ಯವಾಗಿಲ್ಲ. ಆದರೂ, ಕರಾವಳಿ ಭದ್ರತೆ ಹಾಗೂ ಸೈಬರ್ ಯುದ್ಧ ವಿಚಾರಗಳು ಕಳವಳಕಾರಿಯಾಗಿದೆ. ಈ ಬಗ್ಗೆ ಮಾತುಕತೆ ನಡೆಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ. 

ದೆಹಲಿ, ಮುಂಬೈ ಹಾಗೂ ಕೋಲ್ಕತಾ ಭದ್ರತೆ ಬಗ್ಗೆ ಸಾಕಷ್ಟು ಮಾತುಕತೆಗಳನ್ನು ನಡೆಸಲಾಗಿದೆ. ದಕ್ಷಿಣ ರಾಜ್ಯಗಳಲ್ಲಿ ಇಂತಹ ಮಾತುಕತೆಗಳ ಅಗತ್ಯವಿದೆ ಎಂದಿದ್ದಾರೆ. 

ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಅಶ್ವತ್ಶ್ ನಾರಾಯಣ್, ಸಿನೇರ್ಜಿಯಾ ಸಂಸ್ಥಾಪಕ ಸೇರಿ ಹಲವು ಅಧಿಕಾರಿಗಳು ಹಾಜರಿದ್ದರು. 

ರಕ್ಷಣಾ ವಸ್ತುಗಳನ್ನು ರಫ್ತು ಮಾಡಲು ಭಾರತ ಚಿಂತನೆ 
ರಾಷ್ಟ್ರದ ಭವಿಷ್ಯದ ಭದ್ರತೆ ಕುರಿತು ಮಾತನಾಡಿರುವ ರಕ್ಷಣಾ ಇಲಾಖೆಯ ಜಂಟಿ ಕಾರ್ಯದರ್ಶಿ ಸಂಜಯ್ ಜಾಜು ಅವರು, ಕಳೆದ 5 ವರ್ಷಗಳಿಂದ ರಕ್ಷಣಾ ಪರವಾನಗಿಗಗಳನ್ನು ಪಡೆದ ಕಂಪನಿಗಳ ಸಂಖ್ಯೆ ದ್ವಿಗುಣಗೊಂಡಿದೆ. ಪ್ರಸ್ತುತ ನಾವು ರಕ್ಷಣಾ ಪರವಾನಗಿ ಪಡೆದ 414 ಕಂಪನಿಗಳನ್ನು ಹೊಂದಿದ್ದೇವೆ. ಈ  ಕಂಪನಿಗಳು ರಕ್ಷಣಾ ಮತ್ತು ವಾಯುಪಡೆ ಕ್ಷೇತ್ರದಲ್ಲಿ ಅತ್ಯುನ್ನತ ರಕ್ಷಣಾ ವಸ್ತುಗಳನ್ನು ಉತ್ಪಾದಿಸುತ್ತಿವೆ. ರಕ್ಷಣಾ ಇಲಾಖೆ ಕೂಡ ದೇಶದ ಆರ್ಥಿಕತೆಗೆ ಸಹಕಾರಿಯಾಗಿದೆ. ರಕ್ಷಣಾ ಇಲಾಖೆಯಿಂದ ದೇಶಕ್ಕೆ 25 ಬಿಲಿಯನ್ ಡಾಲರ್ ನಷ್ಟು ಆರ್ಥಿಕತೆಯನ್ನು ತಂದೊಡ್ಡಲಿದೆ. ವಿಶ್ವದ ಅತೀದೊಡ್ಡ ರಕ್ಷಣಾ ಆಮದುದಾರರಲ್ಲಿ ಒಬ್ಬರಾಗಿರುವುದರಿಂದ ಕಳೆದ 2 ವರ್ಷಗಳಲ್ಲಿ ಹೆಚ್ಚಿನ ರಫ್ತುಗಳು ಕಂಡು ಬರುತ್ತಿವೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com