ಮಹಾರಾಷ್ಟ್ರ ಚುನಾವಣೆ: ಯಡಿಯೂರಪ್ಪ, ಲಕ್ಷ್ಮಣ್ ಸವದಿಗೆ ಮುಖಭಂಗ

ಕನ್ನಡಿಗರ ಪ್ರಭಾವ ಇರುವ ಹಾಗೂ ನೆರೆಪೀಡಿತವಾಗಿರುವ ಕರ್ನಾಟಕ ಗಡಿಯ ಸಾಂಗ್ಲಿ ಹಾಗೂ ಕೊಲ್ಹಾಪುರ ಜಿಲ್ಲೆಗಳಲ್ಲಿ ಬಿಜೆಪಿಗೆ ಸೋಲಾಗಿದ್ದು, ಇಲ್ಲಿ ವ್ಯಾಪಕ ಪ್ರಚಾರ ಮಾಡಿದ್ದ ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಉಪ ಮುಖ್ಯಮಂತ್ರಿ ಲಕ್ಷ್ಣಣ್ ಸವದಿಯವರಿಗೆ ತೀವ್ರ ಮುಖಭಂಗವಾಗಿದೆ. 
ಯಡಿಯೂರಪ್ಪ ಮತ್ತು ಸವದಿ
ಯಡಿಯೂರಪ್ಪ ಮತ್ತು ಸವದಿ

ಸಾಂಗ್ಲಿ: ಕನ್ನಡಿಗರ ಪ್ರಭಾವ ಇರುವ ಹಾಗೂ ನೆರೆಪೀಡಿತವಾಗಿರುವ ಕರ್ನಾಟಕ ಗಡಿಯ ಸಾಂಗ್ಲಿ ಹಾಗೂ ಕೊಲ್ಹಾಪುರ ಜಿಲ್ಲೆಗಳಲ್ಲಿ ಬಿಜೆಪಿಗೆ ಸೋಲಾಗಿದ್ದು, ಇಲ್ಲಿ ವ್ಯಾಪಕ ಪ್ರಚಾರ ಮಾಡಿದ್ದ ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಉಪ ಮುಖ್ಯಮಂತ್ರಿ ಲಕ್ಷ್ಣಣ್ ಸವದಿಯವರಿಗೆ ತೀವ್ರ ಮುಖಭಂಗವಾಗಿದೆ. 

ಲಿಂಗಾಯತರ ಪ್ರಭಾವ ಇರುವ ಕೊಲ್ಹಾಪುರ, ಸಾಂಗ್ಲಿ ಭಾಗದಲ್ಲಿ ಯಡಿಯೂರಪ್ಪ ಅವರು ಪ್ರಚಾರ ಮಾಡಿದ್ದರು. ಅಲ್ಲದೆ, ಈ ಎರಡೂ ಜಿಲ್ಲೆಗಳ ಅಭ್ಯರ್ಥಿಗಳ ಆಯ್ಕೆ ಹೊಣೆ ಸವದಿಗೆ ವಹಿಸಲಾಗಿದ್ದ ಕಾರಣ ಅವರನ್ನು ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿಗೂ ಸೇರಿಸಿತ್ತು. ಆದರೆ, ಇವರ ಪ್ರಯತ್ನ ಇಲ್ಲಿ ಯಶಸ್ಸು ಕಂಡಿಲ್ಲ. 

ಈ ಎರಡು ಜಿಲ್ಲೆಗಳ 18 ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ-ಶಿವಸೇನೆ ಕೂಟ ಕೇವಲ 4ರಲ್ಲಿ ಗೆದ್ದಿದೆ. ಕಾಂಗ್ರೆಸ್-ಎನ್'ಸಿಪಿ 11 ಸ್ಥಾನಗಳಲ್ಲಿ ಜಯಗಳಿಸಿವೆ. ಇದೇ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ಎಂ.ಬಿ.ಪಾಟೀಲ ಹಾಗೂ ಮುಂತಾದ ಕರ್ನಾಟಕ ಕಾಂಗ್ರೆಸ್ ನಾಯಕರು ಪ್ರಚಾರ ಮಾಡಿದ್ದರು. ಇವರ ಪ್ರಚಾರ ಫಲ ಕೊಟ್ಟಿದ್ದು, ಅವರು ಫಲಿತಾಂಶದ ಬಗ್ಗೆ ಹರ್ಷದ ವ್ಯಕ್ತಪಡಿಸಿದ್ದಾರೆ. 

ಅಥಣಿಯಲ್ಲಿ ಪ್ರವಾಹ ಎದುರಾಗಿ ಜನರು ಸಂಕಷ್ಟ ಎದುರಿಸುತ್ತಿದ್ದು, ಸವಡಿಯವರು ಅಥಣಿಯತ್ತ ಗಮನಹರಿಸಲು ಬಿಜೆಪಿ ಅವಕಾಶ ನೀಡದೆ, ಪ್ರಚಾರ ಕಾರ್ಯದ ಜವಾಬ್ದಾರಿಯನ್ನು ವಹಿಸಿತ್ತು. ಅಥಣಿಯಲ್ಲಿ ಪ್ರವಾಹ ಎದುರಾದ ಹಿನ್ನಲೆಯಲ್ಲಿ ಲಕ್ಷಾಂತರ ಜನರನ್ನು ಗ್ರಾಮದಿಂದ ಸ್ಥಳಾಂತರ ಮಾಡಲಾಗಿದೆ.  ಜನರು ಸಂಕಷ್ಟದಲ್ಲಿದ್ದರೂ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸವದಿ ಏಕೆ ಮಹಾರಾಷ್ಟ್ರ ಚುನಾವಣೆಯಲ್ಲಿ ಪಾಲ್ಗೊಂಡರು ಎಂಬುದನ್ನು ಕಾಂಗ್ರೆಸ್ ನಾಯಕರು ಹಾಗೂ  ಮಾಜಿ ಶಾಸಕ ಮೋಹನ್  ಶಾ, ಶಹ್ಜಹಾನ್ ಡೊಂಗರ್ಗಾಂವ್ ಸವದಿಯವರ ಮಹಾರಾಷ್ಟ್ರ ಪ್ರಚಾರವನ್ನು ಪ್ರಶ್ನಿಸಿದ್ದರು. 

ಉತ್ತರ ಕರ್ನಾಟಕದಲ್ಲಿ ಸಂದಿಗ್ಧ ಪರಿಸ್ಥಿತಿ ಏರ್ಪಟ್ಟಿದ್ದರೂ, ಸವದಿ ಕನಿಷ್ಟ ಕೆಲ ಗಂಟೆಗಳಾದರೂ ಪ್ರವಾಹ ಪೀಡಿತ ಜನರೊಂದಿಗೆ ಕಾಲ ಕಳೆಯಲಿಲ್ಲ. ಕೊಲ್ಹಾಪುರ ಹಾಗೂ ಸಾಂಗ್ಲಿ ಜಿಲ್ಲೆಗಳಲ್ಲಿ ಸವದಿಯವರನ್ನು ಪ್ರಚಾರ ಕಾರ್ಯಕ್ಕೆ ನೇಮಿಸಿದ್ದು ಬಿಜೆಪಿ ಮೂರ್ಖತನ. ತಮ್ಮ ಕ್ಷೇತ್ರದಲ್ಲಿಯೇ ಸವದಿ ಗೆಲುವು ಸಾಧಿಸಲಿಲ್ಲ. ಇತರೆ ಅಭ್ಯರ್ಥಿಗಳ ಗೆಲುವುಗೆ ಸವದಿ ಪ್ರಚಾರ ಹೇಗೆ ಲಾಭವಾಗುತ್ತದೆ ಎಂದು ಬಿಜೆಪಿ ತಿಳಿಯಿತು? ಅದೂ ಕೂಡ ಬೇರೆ ರಾಜ್ಯದ ಚುನಾವಣೆಗೆ? ಎಂದು ಮೋಹನ್ ಶಾ ಅವರು ಹೇಳಿದ್ದಾರೆ. 

ಮಹಾರಾಷ್ಟ್ರದಲ್ಲಿ ಲಿಂಗಾಯತರ ಮತಗಳಿಗಾಗಿ ಬಿಜೆಪಿ ಸವದಿ ಹಾಗೂ ಯಡಿಯೂರಪ್ಪ ಅವರನ್ನು ಪ್ರಚಾರಕ್ಕೆ ನೇಮಿಸಿದೆ. ಸಾಮಾನ್ಯವಾಗಿ ವಿಧಾನಸಭಾ ಚುನಾವಣೆಯಲ್ಲಿ ಜನರು ಸ್ಥಳೀಯ ಹಾಗೂ ಪ್ರಾದೇಶಿಕ ವಿಚಾರಗಳ ಬಗ್ಗೆ ಪಕ್ಷಗಳು ಗಮನಹರಿಸುವುದನ್ನು ನೋಡುತ್ತಾರೆ. ಪಕ್ಷದ ನಾಯಕರ ಹಾದಿ ತಪ್ಪಿಸುವಲ್ಲಿ ಸವದಿ ಹಾಗೂ ಅವರ ತಂಡ ಯಶಸ್ವಿಯಾಗಿರಬಹುದು. ಆದರೆ, ಜನರನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. 

ಪ್ರವಾಹ ಪೀಡಿತ ಸಾಂಗ್ಲಿ ಹಾಗೂ ಕೊಲ್ಹಾಪುರ ಜನರ ಸಂಕಷ್ಟ ಆಲಿಸುವಲ್ಲಿ ಕೇಂದ್ರ ಹಾಗೂ ಮಹಾರಾಷ್ಟ್ರ ಸರ್ಕಾರ ವಿಫಲವಾಗಿದ್ದು, ಹೀಗಾಗಿ ಬಿಜೆಪಿ ಫಲಿತಾಂಶ ಕೆಟ್ಟದಾಗಿ ಬಂದಿದೆ ಎಂದು ಶಾಸಕ ಉಮೇಶ್ ಕತ್ತಿಯವರು ಹೇಳಿದ್ದಾರೆ. ಆದರೆ, ಸವದಿ ಪ್ರಚಾರ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 

ಪಕ್ಷದ ಬಲವಾಗಿದ್ದ ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ, ಅಭಯ್ ಪಾಟೀಲ್ ಹಾಗೂ ಇನ್ನಿತರೆ ನಾಯಕರನ್ನು ಬಿಜೆಪಿ ನಾಯಕತ್ವ ನಿರ್ಲಕ್ಷ್ಯ ಮಾಡಿದ್ದು, ಫಲಿತಾಂಶ ಹಿನ್ನಲೆಯಲ್ಲಿ ಇದೀಗ ಸವದಿಯವರನ್ನು ಉಪ ಮುಖ್ಯಮಂತ್ರಿ ಸ್ಥಾನದಿಂದ ತೆಗೆದು ಹಾಕುವವಂತೆ ಒತ್ತಡ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com