ತಾಯಿ ಜತೆ ಅಂಕಲ್​ ರಾಸಲೀಲೆ: ರೊಚ್ಚಿಗೆದ್ದ ಮಗನಿಂದ ಪ್ರಿಯಕರನ ಬರ್ಬರ ಕೊಲೆ!

ತನ್ನ ತಾಯಿಯೊಂದಿಗೆ ನೆರೆಮನೆಯವನ ರಾಸಲೀಲೆ ಕಂಡು ಬೇಸತ್ತು ಹೋಗಿದ್ದ ಮಗ ಆಕೆಯ ಪ್ರಿಯಕರನ್ನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜ್ಯೋತಿಗೌಡನಪುರದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಚಾಮರಾಜನಗರ: ತನ್ನ ತಾಯಿಯೊಂದಿಗೆ ನೆರೆಮನೆಯವನ ರಾಸಲೀಲೆ ಕಂಡು ಬೇಸತ್ತು ಹೋಗಿದ್ದ ಮಗ ಆಕೆಯ ಪ್ರಿಯಕರನ್ನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜ್ಯೋತಿಗೌಡನಪುರದಲ್ಲಿ ನಡೆದಿದೆ.

56 ವರ್ಷದ ಮರಿಸ್ವಾಮಿ ತನ್ನ ಎದುರು ಮನೆಯ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಹಲವು ವರ್ಷಗಳಿಂದ ಸಾಗುತ್ತಿದ್ದ ಇವರ ಅಕ್ರಮ ಸಂಬಂಧದ ಬಗ್ಗೆ ಮಹಿಳೆಯ ಮಗ ಮಹಾದೇವಸ್ವಾಮಿಗೆ ತಿಳಿದಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮಹಾದೇವಸ್ವಾಮಿ ಹಾಗೂ ಮರಿಸ್ವಾಮಿ ನಡುವೆ ಜಗಳವಾಗಿತ್ತು. ಬಳಿಕ ಸಂಧಾನ ಮಾಡಲಾಗಿತ್ತು ಎನ್ನಲಾಗ್ತಿದೆ. ಎಷ್ಟೇ ಗಲಾಟೆಯಾದರೂ ಮರಿಸ್ವಾಮಿ ಆ ಮಹಿಳೆಯೊಂದಿಗೆ ಸಂಬಂಧ ಮುಂದುವರೆಸಿದ್ದ ಎನ್ನಲಾಗಿದೆ. 

ಇದೇ ವಿಚಾರ ಸಂಬಂಧ ಮತ್ತೆ ಇಬ್ಬರ ಮಧ್ಯೆ ಜಗಳ ನಡೆದಿದ್ದು, ಅದು ಅತಿರೇಕಕ್ಕೆ ಹೋಗಿ ಮರಿಸ್ವಾಮಿ ತಲೆಗೆ ಮಹಾದೇವಸ್ವಾಮಿ ರಾಡ್​ನಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾನೆ.

ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಪರಿಶೀಲನೆ ನಡೆಸಿದರು. ಬಳಿಕ ಮರಿಸ್ವಾಮಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.

ಈ ಸಂಬಂಧ ರಾಮಸಮುದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ಐ ಪುಟ್ಟಸ್ವಾಮಿ ಆರೋಪಿ ಮಹಾದೇವಸ್ವಾಮಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ .

ವರದಿ: ಗೂಳಿಪುರ ನಂದೀಶ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com