ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹೊಸ ಸಂಚಾರ ನಿಯಮ ಉಲ್ಲಂಘನೆ ದಂಡ ಯಾವಾಗ ಜಾರಿ; ಪೊಲೀಸ್ ಇಲಾಖೆಯಲ್ಲಿಯೇ ಗೊಂದಲ

ವಾಹನ ಸವಾರರೇ ಇನ್ನು ಮುಂದೆ ರಸ್ತೆ ಸಂಚಾರ ನಿಯಮ ಉಲ್ಲಂಘಿಸಿದರೆ ಭಾರೀ ದಂಡ ಕಟ್ಟಲು ಸಿದ್ದವಾಗಿರಿ. 

ಬೆಂಗಳೂರು: ವಾಹನ ಸವಾರರೇ ಇನ್ನು ಮುಂದೆ ರಸ್ತೆ ಸಂಚಾರ ನಿಯಮ ಉಲ್ಲಂಘಿಸಿದರೆ ಭಾರೀ ದಂಡ ಕಟ್ಟಲು ಸಿದ್ದವಾಗಿರಿ. 

ಮೋಟಾರು ವಾಹನಗಳ ತಿದ್ದುಪಡಿ ಕಾಯ್ದೆ 2019ನ್ನು ಕೇಂದ್ರ ಸರ್ಕಾರ ಪುನರಾವರ್ತಿಸಿದ್ದು, ಸಂಚಾರ ನಿಯಮ ಉಲ್ಲಂಘನೆಗೆ ಬೃಹತ್ ಮೊತ್ತದ ದಂಡ ಹಾಕಲಾಗುತ್ತದೆ. ಆದರೆ ಕೇಂದ್ರ ಸರ್ಕಾರದ ನಿಯಮದ ಪ್ರತಿ ಇನ್ನೂ ಸಂಚಾರಿ ಪೊಲೀಸ್ ಇಲಾಖೆಗೆ ಸಿಗದಿರುವುದರಿಂದ ಇಲಾಖೆಯ ಪೊಲೀಸ್ ಅಧಿಕಾರಿಗಳಲ್ಲಿ ಗೊಂದಲವಿದೆ. 


ಹೊಸ ನಿಯಮ ಸೆಪ್ಟೆಂಬರ್ 1ರಿಂದ ಜಾರಿಗೆ ಬರುತ್ತದೆ ಎಂದು ಹೇಳಲಾಗುತ್ತಿದ್ದರೂ ಕೂಡ ಅಧಿಕಾರಿಗಳಿಂದ ಸ್ಪಷ್ಟ ಅಧಿಸೂಚನೆ ಬಂದಿಲ್ಲದಿರುವುದರಿಂದ ಇನ್ನು ಕೆಲ ದಿನಗಳ ಮಟ್ಟಿಗೆ ನೂತನ ದಂಡದ ಮೊತ್ತ ಜಾರಿಗೆ ಬರುವುದಿಲ್ಲ. ಹೀಗಾಗಿ ಸದ್ಯಕ್ಕೆ ವಾಹನ ಸವಾರರು ಬಚಾವಾಗಬಹುದು. 


ಕಳೆದ ಶನಿವಾರ ರಾತ್ರಿ ಮದ್ಯಪಾನ ಸೇವಿಸಿ ವಾಹನ ಸಂಚಾರ ಮಾಡುವವರನ್ನು ಪತ್ತೆಹಚ್ಚುವ ಕುರಿತು ವಿಶೇಷ ಅಭಿಯಾನವನ್ನು ಸಂಚಾರಿ ಪೊಲೀಸ್ ಇಲಾಖೆ ಕೈಗೊಂಡಿತ್ತು. ಮದ್ಯಪಾನ ಮಾಡಿ ಸಿಕ್ಕಿಬಿದ್ದಿದ್ದರೂ ಅವರಿಗೆ ದಂಡ ಹಾಕಿರಲಿಲ್ಲ. ದಂಡದ ಬಗ್ಗೆ ನೊಟೀಸ್ ನೀಡಿ ಕೋರ್ಟ್ ಗೆ ಹಾಜರಾಗಿ ನ್ಯಾಯಾಲಯದ ಆದೇಶದಂತೆ ದಂಡ ಕಟ್ಟಿ ಎಂದು ಹೇಳಲಾಗಿತ್ತು. 


ಸದ್ಯಕ್ಕೆ ಹಳೆಯ ದಂಡದ ಮೊತ್ತವನ್ನೇ ನಾವು ನಿಯಮ ಉಲ್ಲಂಘಿಸಿದವರಿಗೆ ಹಾಕುತ್ತಿದ್ದು ನಮಗೆ ಆದೇಶ ಬಂದ ಕೂಡಲೇ ಹೊಸ ದಂಡದ ಮೊತ್ತ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇವೆ ಎಂದು ಹಿರಿಯ ಸಂಚಾರಿ ಪೊಲೀಸ್ ಅಧಿಕಾರಿ ಹೇಳುತ್ತಾರೆ. 


ಹೊಸ ವಾಹನ ಸಂಚಾರ ನಿಯಮ ಎಂದು ಜಾರಿಗೆ ಬರಲಿದೆ ಎಂಬ ಬಗ್ಗೆ ಬೆಂಗಳೂರು ಸೇರಿದಂತೆ ಬಹುತೇಕ ಮೆಟ್ರೊ ನಗರಗಳಲ್ಲಿ ಸಂಚಾರಿ ಪೊಲೀಸರು ಗೊಂದಲದಲ್ಲಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com