ಬೆಂಗಳೂರು: ಕಾಲು ಜಾರಿ ರಾಜಾಕಾಲುವೆಗೆ ಬಿದ್ದಿದ್ದ ಬಾಲಕ ಸಾವು

ಕಳೆದ ಮೂರು ದಿನಗಳ ಹಿಂದೆ ಆಯ ತಪ್ಪಿ ರಾಜಕಾಲುವೆಗೆ ಬಿದ್ದಿದ್ದ ಐದು ವರ್ಷದ ಬಾಲಕ ಮೊಹಮ್ಮದ್ ಝೈನ್, ಆರ್ ಆರ್ ನಗರದ ಗ್ಲೋಬಲ್ ವಿಲೇಜ್ ಬಳಿ ಬುಧವಾರ ಶವವಾಗಿ ಪತ್ತೆಯಾಗಿದ್ದಾನೆ
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕಳೆದ ಮೂರು ದಿನಗಳ ಹಿಂದೆ ಆಯ ತಪ್ಪಿ ರಾಜಕಾಲುವೆಗೆ ಬಿದ್ದಿದ್ದ ಐದು ವರ್ಷದ ಬಾಲಕ ಮೊಹಮ್ಮದ್ ಝೈನ್, ಆರ್ ಆರ್ ನಗರದ ಗ್ಲೋಬಲ್ ವಿಲೇಜ್ ಬಳಿ ಬುಧವಾರ ಶವವಾಗಿ ಪತ್ತೆಯಾಗಿದ್ದಾನೆ

ಕಳೆದ ಮೂರು ದಿನಗಳಿಂದ ಉತ್ತರ ಅಗ್ನಿಶಾಮಕದಳ ಠಾಣೆಯ 30 ಹಾಗೂ ಬಿಬಿಎಂಪಿಯ 40 ಸಿಬ್ಬಂದಿ, ನಾಪತ್ತೆಯಾಗಿದ್ದ ಬಾಲಕನ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದರು

ಘಟನೆಯ ಹಿನ್ನೆಲೆ

ನಗರದ ಹಳೇಗುಡ್ಡದ ಹಳ್ಳಿಯ ಇಮ್ರಾನ್ ಶರೀಫ್ ಮತ್ತು ಗುಲ್ಶಾನ್ ದಂಪತಿಯ ಪುತ್ರ ಮುಹಮ್ಮದ್ ಝೈನ್, ಆಗಸ್ಟ್ 30ರಂದು ಬೆಳಗ್ಗೆ 10.30ರ ಸುಮಾರಿಗೆ ಪಕ್ಕದ ಮನೆಯ ಬಾಲಕಿಯೊಂದಿಗೆ ಕಸ ಎಸೆಯಲು ತೆರಳಿದ್ದಾಗ ಆಯ ತಪ್ಪಿ ರಾಜಕಾಲುವೆಗೆ ಬಿದ್ದಿದ್ದ. ಇದರಿಂದ  ಗಾಬರಿಗೊಂಡ ಬಾಲಕಿ  ಎರಡು ದಿನಗಳ ಕಾಲ ವಿಷಯವನ್ನುಯಾರಿಗೂ ತಿಳಿಸಿರಲಿಲ್ಲ. ಬಾಲಕ ಎಲ್ಲಿಯೂ ಕಾಣದಿರುವುದರಿಂದ ಗಾಬರಿಗೊಂಡ ಪೋಷಕರು ಮೂರು ದಿನಗಳಿಂದ ಎಲ್ಲಾ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದ್ದು, ಎಲ್ಲಿಯೂ ಬಾಲಕ ಕಾಣಸಿಗದಿದ್ದಾಗ ಜೆ.ಜೆ.ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಸ್ಥಳೀಯರು ತಮ್ಮ ಅಂಗಡಿಗಳ ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ಪಕ್ಕದ ಬಾಲಕಿಯೊಂದಿಗೆ, ಬಾಲಕ ಕಸ ಚೆಲ್ಲಲ್ಲು ತೆರಳಿದ್ದು, ವಾಪಸ್ಸಾಗುವಾಗ ಕೇವಲ ಬಾಲಕಿ ಮಾತ್ರ ಮನೆಗೆ ಬರುವ ದೃಶ್ಯ ಸೆರೆಯಾಗಿತ್ತು. ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com