ಚಂದ್ರಯಾನ-2 ಹಿನ್ನಡೆ: ಭಾವುಕರಾದ ಇಸ್ರೋ ಮುಖ್ಯಸ್ಥರನ್ನು ಆಲಂಗಿಸಿ, ಸಂತೈಸಿದ ಪ್ರಧಾನಿ ಮೋದಿ

ಚಂದ್ರಯಾನ-2ಗೆ ಹಿನ್ನಡೆಯುಂಟಾದ ಹಿನ್ನಲೆಯಲ್ಲಿ ಭಾವುಕರಾಗಿದ್ದ ಇಸ್ರೋ ಮುಖ್ಯಸ್ಥ ಶಿವನ್ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಲಂಗಿಸಿ, ಸಂತೈಸಿದ್ದಾರೆ. 
ಚಂದ್ರಯಾನ-2 ಹಿನ್ನಡೆ: ಭಾವುಕರಾದ ಇಸ್ರೋ ಮುಖ್ಯಸ್ಥರನ್ನು ಆಲಂಗಿಸಿ, ಸಂತೈಸಿದ ಪ್ರಧಾನಿ ಮೋದಿ
ಚಂದ್ರಯಾನ-2 ಹಿನ್ನಡೆ: ಭಾವುಕರಾದ ಇಸ್ರೋ ಮುಖ್ಯಸ್ಥರನ್ನು ಆಲಂಗಿಸಿ, ಸಂತೈಸಿದ ಪ್ರಧಾನಿ ಮೋದಿ

ಬೆಂಗಳೂರು: ಚಂದ್ರಯಾನ-2ಗೆ ಹಿನ್ನಡೆಯುಂಟಾದ ಹಿನ್ನಲೆಯಲ್ಲಿ ಭಾವುಕರಾಗಿದ್ದ ಇಸ್ರೋ ಮುಖ್ಯಸ್ಥ ಶಿವನ್ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಲಂಗಿಸಿ, ಸಂತೈಸಿದ್ದಾರೆ. 

ಇಸ್ರೋ ಸಾಧನೆ ಕುರಿತಂತೆ ಇಂದು ಬೆಳಿಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಗರದ ಇಸ್ರೋ ಕಂಟ್ರೋಲ್ ಸೆಂಟರ್ ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ್ದು, ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಕೊಂಡಾಡಿದ್ದಾರೆ. ಭಾಷಣ ಪೂರ್ಣಗೊಂಡ ಬಳಿಕ ಭಾವುಕರಾಗಿದ್ದ ಶಿವನ್ ಅವರನ್ನು ಪ್ರಧಾನಿ ಮೋದಿಯವರು ಆಲಂಗಿಸಿ, ಸಂತೈಸಿದರು. 

ಚಂದ್ರನ ಅಂಗಳದ ಮೇಲೆ ಲ್ಯಾಂಡರ್'ನ್ನು ಇಳಿಸುವ ಕೊನೆಯ 15 ನಿಮಿಷ ಭಾರೀ ಕಷ್ಟದ ಕ್ಷಣಗಳು ಎಂದು ಇಸ್ರೋ ಈ ಮೊದಲೇ ಹೇಳಿತ್ತು. ಹೀಗಾಗಿ ಮೊದಲ ಕೆಲವು ಕ್ಷಣಗಳು ಸುಸೂತ್ರವಾಗಿ ನೆರವೇರಿದರೂ ಇನ್ನೇನು ಚಂದ್ರನ ಅಂಗಳ 2.1 ಕಿಮೀ ದೂರ ಇರುವಂತೆ ಲ್ಯಾಂಡರ್ ನೌಕೆ ಸಂಪರ್ಕ ಕಡಿದುಕೊಂಡಿತು. ಈ ವೇಳೆ ಇಸ್ರೋ ಕೇಂದ್ರದಲ್ಲಿ ಆತಂಕದ ವಾತಾವರಣ ಉಂಟಾಗಿತ್ತು. 

ಸಿಗ್ನಲ್ ಗಾಗಿ ಕೆಲ ಹೊತ್ತು ನಿರೀಕ್ಷಿಸಲಾಯಿತು. ಆದರೆ, ಯಾವುದೇ ಧನಾತ್ಮಕ ಫಲ ಸಿಗಲಿಲ್ಲ. ಕೊನೆಗೆ ಇಸ್ರೋ ಅಧ್ಯಕ್ಷ ಶಿವನ್ ಅವರು ಲ್ಯಾಂಡರ್ 2.1 ಕಿಮೀವರೆಗೆ ಸುಸೂತ್ರವಾಗಿ ಕೆಲಸ ಮಾಡಿದೆ. ಆ ನಂತರ ಸಿಗ್ನಲ್ ಕಡಿತಗೊಂಡಿದೆ. ಇದರ ಡೇಟಾವನ್ನು ವಿಶ್ಲೇಷಣೆ ಮಾಡುತ್ತೇವೆಂದು ಘೋಷಣೆ ಮಾಡಿದರು.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com