ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಎಚ್ಎಎಲ್ ನಲ್ಲಿ ಮತ್ತೆ ಭದ್ರತಾ ಲೋಪ, ಲಕ್ಷಾಂತರ ಮೌಲ್ಯದ ತಾಮ್ರದ ಕೇಬಲ್ ಕಳವು

ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಆವರಣದಲ್ಲಿರಿಸಲಾಗಿದ್ದ 2.5 ಲಕ್ಷ ಮೌಲ್ಯದ ತಾಮ್ರದ ಕೇಬಲ್ ಗಳು ಕಳುವಾಗಿದೆ
ಬೆಂಗಳುರು: ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಆವರಣದಲ್ಲಿರಿಸಲಾಗಿದ್ದ 2.5 ಲಕ್ಷ ಮೌಲ್ಯದ ತಾಮ್ರದ ಕೇಬಲ್ ಗಳು ಕಳುವಾಗಿದೆ. ಈ ಮೂಲಕ ಪ್ರತಿಷ್ಠಿತ ಸಂಸ್ಥೆಯಲ್ಲಿ ಮತ್ತೆ ಭದ್ರತಾ ಲೋಪ, ಕಳ್ಳತನದ ಪ್ರಕರಣ ವರದಿಯಾಗಿದೆ. ಭಾರತ ರಕ್ಷಣಾ ಪಡೆಗಳಿಗೆ ಅಗತ್ಯವಾಗಿರುವ ವೈಮಾನೈಕ ಸಲಕರಣೆಗಳ ಉತ್ಪಾದನೆಗೆ ಹೆಸರಾಗಿರುವ ಎಚ್ಎಎಲ್ ನಲ್ಲಿ ಭದ್ರತಾ ಲೋಪ ಹಾಗೂ ಕಳ್ಳತನ ಆತಂಕಕ್ಕೆ ಕಾರಣವಾಗಿದೆ.
ಮಾವಿನ್ ಸ್ವಿಚ್ಗೀಯರ್ಸ್ ಮತ್ತು ಕಂಟ್ರೋಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ ಎಚ್.ಆರ್. ವಿಭಾಗದಲ್ಲಿ ಕೆಲಸ ಮಾಡುವ ಸುರೇಶ್ (63) ಈ ಸಂಬಂಧ ಪೋಲೀಸರಿಗೆ ದೂರು ಸಲ್ಲಿಸಿದ್ದಾರೆ.ಎಚ್ಎಎಲ್ ನ ಮೈಂಟೇನೆನ್ಸ್  ರಿಪೇರ್ ಆಂಡ್ ಆಪರೇಷನ್ಸ್ (ಎಂಆರ್ ಒ) ವಿಭಾಗದಿಂದ  2.5 ಲಕ್ಷ ರೂ. ಮೌಲ್ಯದ 580 ಮೀಟರ್ ಉದ್ದದ ತಾಮ್ರದ ಕೇಬಲ್ ಕಳವಾಗಿದೆ. ನಮ್ಮ ಸಂಸ್ಥೆಯು  ಎಚ್ಎಎಲ್ ನಲ್ಲಿ 11 ಕೆವಿ  ಕೇಬಲ್ ನೆಟ್ ವರ್ಕ್ ಸ್ಥಾಪನೆಗೆ ಟೆಂಡರ್ ಸ್ವೀಕರಿಸಿದೆ ಎಂದು ಸುರೇಶ್ ಪೋಲೀಸರಿಗೆ ಹೇಳಿದ್ದಾರೆ. ಏಪ್ರಿಲ್  2 ರಿಂದ 3ನೇ ದಿನಂಆಕದ ನಡುವೆ 16 ಚದರ / ಎಂಎಂ. x 4 ಕೋರ್ ಕ`ೇಬಲ್ ಗಳನ್ನು  ಕಳ್ಳರು ಕದ್ದಿದ್ದಾರೆ. ಏಪ್ರಿಲ್ 4 ಬೆಳಿಗ್ಗೆ  11 ಗಂಟೆಗೆ ಘಟನೆ ಬೆಳಕಿಗೆ ಬಂದಿದೆ.ಸುರೇಶ್ ಮತ್ತು ಅವರ ಕಂಪನಿಯ ಇತರ ಉದ್ಯೋಗಿಗಳು ಎಂಆರ್ ಒ  ವಿಭಾಗಕ್ಕೆ ಆಗಮಿಸಿದಾಗ ಕಳ್ಳತನದ ಬಗೆಗೆ ಅರಿವಾಗಿದೆ. ಅವರು  ಎಚ್ಎಎಲ್ ಪೊಲೀಸರಿಗೆ ದುರು ಸಲ್ಲಿಸಿದ್ದಾರೆ.
"ಕಳವಿನ ಕುರಿತು ನಮಗೆ ಮಾಹಿತಿ ಇಲ್ಲ, ಎಂಆರ್ ಒ ವಿಭಾಗದಲ್ಲಿ ಕೆಲ ಭದ್ರತಾ ಲೋಪಗಳು ಕಂಡುಬಂದಿದೆ. ಈ ಕಾರಣದಿಂದ ಮಾವಿನ್ ಸ್ವಿಚ್ಗೀಯರ್ಸ್ ಮತ್ತು ಕಂಟ್ರೋಲ್ ಪ್ರೈವೇಟ್ ಲಿಮಿಟೆಡ್ ಗೆ ನಾವು ಅವರ ಕೆಲಸ ಪೂರ್ಣವಾಗುವವರೆಗೆ ಅವರದೇ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲು ಹೇಳಿದ್ದೇವೆ, ಇದರಂತೆ ಈಗ ಭದ್ರತಾ ಸಿಬ್ಬಂದಿ ನಿಯೋಜಿಸಲ್ಪಟ್ಟಿದೆ" ಎಚ್ಎಎಲ್ ನ ತನಿಖಾಧಿಕಾರಿಗಳು ಹೇಳಿದ್ದಾರೆ.
ಭದ್ರತಾ ಉಲ್ಲಂಘನೆಯ ಬಗ್ಗೆ ವಿವರಗಳನ್ನು ಕೇಳಲು ಎಚ್ಎಎಲ್ ಅಧಿಕಾರಿಗಳಿಗೆ ನೋಟೀಸ್ ನೀಡಲಾಗುವುದು ಎಂದು ಪೋಲೀಸರು ಹೇಳೀದ್ದಾರೆ. "ನಾವು ಏಪ್ರಿಲ್ 2 ಮತ್ತು 3 ರಂದು ಕೆಲಸ ಮಾಡಿದ ಸಿಬ್ಬಂದಿಗಳ ವಿವರಗಳನ್ನು ತೆಗೆದುಕೊಳ್ಳುತ್ತೇವೆ ಮತ್ತು ಅವರನ್ನು ತನಿಖೆಗೆ ಒಳಪಡಿಸುತ್ತೇವೆ. ಅಲ್ಲದೆ ಎಂಆರ್ ಒ ವಿಭಾಗದಲ್ಲಿ ಸಿಸಿಟಿವಿ ಅಳವಡಿಸಬೇಕು. ಘಟನೆಯಲ್ಲಿ ಎಚ್ಎಎಲ್ ಗೆ ನೀರು ಸರಬರಾಜು ಮಾಡುವ, ಕಸ ತೆಗೆದುಕೊಳ್ಳಲು ಬರುವ ಕಾರ್ಮಿಕ ಕೈವಾಡ ಇರಬಹುದೆಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಸಹ ಸಿಬ್ಬಂದಿಗಳ ಪ್ರಚೋದನೆಯಿಂದ ಇಂತಹಾ ಘಟನೆಗಳಾಗಿದೆ. ಹಾಗಾಗಿ ಸಿಬಂದಿಗಳ ಕೈವಾಡವನ್ನೂ ಅಲ್ಲಗೆಳೆಯುವಂತಿಲ್ಲ ಎಂದು ಪೋಲೀಸರು ವಿವರಿಸಿದರು.

Related Stories

No stories found.

Advertisement

X
Kannada Prabha
www.kannadaprabha.com