ಮುಂಬೈ ಮೂಲದ ಬರಹಗಾರ ಬೆಂಗಳೂರಿನಲ್ಲಿ ಶಂಕಾಸ್ಪದ ಸಾವು

43 ವರ್ಷದ ಮುಂಬೈ ಮೂಲದ ವ್ಯಕ್ತಿಯೊಬ್ಬ ಬೆಂಗಳೂರು ಬಾಣಸವಾಡಿಯ ತನ್ನ ಮನೆಯಲ್ಲಿ ಕುಳಿತಿರುವ ಭಂಗಿಯಲ್ಲೇ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾನೆ
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: 43 ವರ್ಷದ ಮುಂಬೈ ಮೂಲದ ವ್ಯಕ್ತಿಯೊಬ್ಬ ಬೆಂಗಳೂರು ಬಾಣಸವಾಡಿಯ ತನ್ನ ಮನೆಯಲ್ಲಿ ಕುಳಿತಿರುವ ಭಂಗಿಯಲ್ಲೇ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾನೆ. ಮೃತನನ್ನು ಕೃಷ್ಣ ಶ್ರೀರಾಮ್ ಎಂದು ಗುರುತಿಸಲಾಗಿದ್ದು ಈತ ಬರಹಗಾರನಾಗಿದ್ದರು. ಕಳೆದ ಒಂದು ವರ್ಷದಿಂದ ಬೆಂಗಳುರಿನಲ್ಲಿ ನೆಲೆಸಿದ್ದ ಇವರ ದೇಹವನ್ನು ಇರುವೆಗಳು ತಿಂದಿವೆ, ಅಲ್ಲದೆ ಕಳೆದ ಕೆಲ ದಿನಗಳಿಂದ ಮನೆ ಸ್ವಚ್ಚವಾಗಿಸಿಲ್ಲ ಎಂದು ಪೋಲೀಸರು ಹೇಳೀದ್ದಾರೆ. ಮೃತರು ಬಾಡಿಗೆ ಮನೆಯಲ್ಲಿದ್ದರು. ಅವರ ತಾಯಿ ಯುಎಸ್ ನಲ್ಲಿ ಎನ್ ಆರ್ ಐ ಆಗಿದ್ದಾರೆ.
ಬುಧವಾರ ಮನೆಯ ಮಾಲೀಕರಾದ ಜ್ಞಾನಪ್ರಕಾಶ್ ಬಾಡಿಗೆ ಸಂಗ್ರಹಕ್ಕಾಗಿ ಆಗಮಿಸುವಾಗ ಶ್ರೀರಾಮ್ ಮರಣಿಸಿರುವುದು ಪತ್ತೆಯಾಗಿದೆ.ಜ್ಞಾನಪ್ರಕಾಶ್ ಅನೇಕ ಬಾರಿ ಕರೆಗಂಟೆಯನ್ನು ಒತ್ತಿದರೂ ಬಾಗಿಲು ತೆರೆಯಲಿಲ್ಲ. ಆಗ ಒಳಗಿನಿಂಡ ಬಾಗಿಲು ಲಾಕ್ ಆಗಿರುವುದು ಕಂಡ ಜ್ಞಾನಪ್ರಕಾಶ್ ಪುಣೆಯಲ್ಲಿ ವಾಸವಿದ್ದ ಶ್ರೀರಾಮ್ ಅವರ ಸಂಬಂಧಿಗಳಿಗೆ ಕರೆ ಮಾಡಿದ್ದಾರೆ. ಆಗ ಆ ಸಂಬಂಧಿಗಳು ಸಹ ಶ್ರೀರಾಮ್ ಅವರ ಫೋನ್ ಗೆ ಕರೆ ಮಾಡಿದರೂ ಸಂಪರ್ಕ ಸಾಧ್ಯವಾಗಿಲ್ಲ. ಇದೀಗ ಬಲವಾಗಿ ಅನುಮಾನಗೊಂಡ ಮಾಲೀಕರು ಪೋಲೀಸರಿಗೆ ವಿಚಾರ ತಿಳಿಸಿದ್ದಾರೆ.
ಕೆಲವು ತಿಂಗಳಿನಿಂದ ಮನೆ ಆವರಣ ಶುಚಿಯಾಗಿಲ್ಲ.  ಅಡುಗೆಮನೆಯಲ್ಲಿ ಪಾತ್ರೆಗಳೂ ತೊಳೆಯದೆ ಇದ್ದ ಕಾರಣ ಕೆಟ್ಟ ವಾಸನೆ ಹೊರಬರುತ್ತಿತ್ತು. ಮೃತರ ಸಾವಿಗೆ ನಿಖರ ಕಾರಣ ಪತ್ತೆಯಾಗಿಲ್ಲವಾದರೂ ಸರಿಯಾದ ಆರೈಕೆ ಇಲ್ಲದೆ, ನೈರ್ಮಲ್ಯದ ಕೊರತೆಯಿಂದಾಗಿ ವ್ಯಕ್ತಿ ಸಾವಿಗೀಡಾಗಿದ್ದಾರೆ ಎಂದು ಪೋಲೀಸರು ಶಂಕಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com