ಬೆಂಗಳೂರು: ನಾಯಿ, ಕಸದ ವಿಚಾರಕ್ಕೆ ಗಲಾಟೆ, ನೆರೆಯವರಿಂದ ದಂಪತಿ ಮೇಲೆ ಹಲ್ಲೆ

ನಾಯಿ ಹಾಗೂ ಕಸದ ವಿಚಾರಕ್ಕೆ ಗಲಾಟೆ ನಡೆದು, ಪಕ್ಕದ ಮನೆಯವರು ದಂಪತಿ ಮೇಲೆ ಹಲ್ಲೆ ನಡೆಸಿರುವ ಘಟನೆ ಟಿ. ದಾಸರಹಳ್ಳಿಯ ಮಲ್ಲಸಂದ್ರದಲ್ಲಿ ನಡೆದಿದೆ

Published: 23rd April 2019 12:00 PM  |   Last Updated: 23rd April 2019 02:03 AM   |  A+A-


Casual Photo

ಸಾಂದರ್ಭಿಕ ಚಿತ್ರ

Posted By : ABN ABN
Source : The New Indian Express
ಬೆಂಗಳೂರು: ನಾಯಿ ಹಾಗೂ ಕಸದ ವಿಚಾರಕ್ಕೆ ಗಲಾಟೆ ನಡೆದು, ಪಕ್ಕದ ಮನೆಯವರು ದಂಪತಿ ಮೇಲೆ ಹಲ್ಲೆ ನಡೆಸಿರುವ ಘಟನೆ ಟಿ. ದಾಸರಹಳ್ಳಿಯ ಮಲ್ಲಸಂದ್ರದಲ್ಲಿ ನಡೆದಿದೆ

ರಮೇಶ್ ಹಾಗೂ  ಭಾಗ್ಯಮ್ಮ  ಹಲ್ಲೆಗೊಳಗಾದವರು. ಈ ದಂಪತಿ ಮಲ್ಲಸಂದ್ರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದು, ಪಕ್ಕದ ಮನೆಯವರಾದ ವೆಂಕಟೇಶ್ ಪತ್ನಿ ಸುಧಾ ಕಸವನ್ನೆಲ್ಲಾ ಭಾಗ್ಯಮ್ಮ ಮನೆ ಎದುರಿಗೆ ಎಸೆಯುತ್ತಿದ್ದರಂತೆ. ಇದರಿಂದ ರೋಸಿಹೋದ ಭಾಗ್ಯಮ್ಮ ಸುಧಾ ಅವರ ವರ್ತನೆ ಬಗ್ಗೆ ದೂರು ನೀಡಿದ್ದಾರೆ. ಆಗ ಗಲಾಟೆ ನಡೆದಿದ್ದು, ಸುಧಾ ಬೈದಿದ್ದಾರೆ.

ಶನಿವಾರ ಬೆಳಗ್ಗೆ ಭಾಗ್ಯಮ್ಮ ತಮ್ಮ ಮನೆಯ ಮುಂಭಾಗ ಸ್ವಚ್ಛಗೊಳಿಸುತ್ತಿದ್ದಾಗ ನಾಯಿಯ ಅವ್ಯವಸ್ಥೆ ಕಂಡುಬಂದಿದೆ. ಇದನ್ನು ಕಂಡು ಆಕ್ರೋಶಗೊಂಡ ಭಾಗ್ಯಮ್ಮ, ಸ್ವಚ್ಛಗೊಳಿಸಿ ಸಾಕಾಗಿ ಹೋಗಿದೆ. ನಾಯಿಯನ್ನು ಬೇರೆ ಕಡೆಗೆ ಕಟ್ಟಿಹಾಕುವಂತೆ ಹೇಳಿದ್ದಾರೆ. ಆಗ ಸುಧಾ ಭಾಗ್ಯಮ್ಮ ಜೊತೆಗೆ ವಾಗ್ಯುದ್ಧ ಆರಂಭಿಸಿದ್ದಾರೆ. ಆದರೆ, ಮಧ್ಯ ಪ್ರವೇಶಿಸಿದ ರಮೇಶ್ ನಾನೇ ಅದನ್ನು ಸ್ವಚ್ಛಗೊಳಿಸುವುದಾಗಿ ಹೇಳಿದ್ದಾರೆ.

ನಂತರ ಸಂಜೆ ವೆಂಕಚೇಶ್ ಹಾಗೂ ಇಬ್ಬರು ಬಂದು ಭಾಗ್ಯಮ್ಮ ಅವರ ಕೂದಲನ್ನು ಹಿಡಿದು ಎಳೆದಾಡಿದ್ದು, ಬಟ್ಟೆ ಹರಿದು ಹಾಕಿದ್ದಾರೆ. ನಂತರ ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಆಕೆ ಅಳುವುದನ್ನು ನೋಡಿ ಅಲ್ಲಿಗೆ ಬಂದ ರಮೇಶ್ ಮೇಲೂ  ಹಲ್ಲೆ ನಡೆಸಲಾಗಿದೆ.

ರಮೇಶ್ ತಲೆಗೆ ತೀವ್ರ ರಕ್ತಸ್ರಾವವಾದ್ದರಿಂದ ಗಾಬರಿಗೊಂಡ ಭಾಗ್ಯಮ್ಮ ಪೊಲೀಸರಿಗೆ ಕರೆ ಮಾಡಿದ್ದಾರೆ, ಹೊಯ್ಸಳ ಪೊಲೀಸರು ಬರುವವರೆಗೂ ಆ ಮೂವರು ಹೂ ಕುಂಡಗಳ ಮೇಲೆ ನಿರಂತವಾಗಿ  ಹಲ್ಲೆ ನಡೆಸಿದ್ದಾರೆ. ನಂತರ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ವೆಂಕಟೇಶ್ ಹಾಗೂ ಅವರ ಸಂಬಂಧಿಕರನ್ನು ಬಂಧಿಸಿ, ನಂತರ ಜಾಮೀನು ಮೇಲೆ ಬಿಡುಗಡೆ ಮಾಡಲಾಗಿದೆ. ರಮೇಶ್ ಹಾಗೂ ಅವರ ಕುಟುಂಬದಿಂದ ದೂರ ಇರುವಂತೆ ತಿಳಿಸಲಾಗಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp