ರಾಜ್ಯದ ಕೊಟ್ಟಿಗೆಹಾರದಲ್ಲಿ ದಾಖಲೆ ಪ್ರಮಾಣದ ಮಳೆ

ಕರ್ನಾಟಕದಾದ್ಯಂತ ವ್ಯಾಪಕ ಮಳೆ ಮುಂದುವರೆದಿದ್ದು, ಚಾರ್ಮಾಡಿ ಘಾಟ್ ಬಳಿಯ ಕೊಟ್ಟಿಗೆ ಹಾರದಲ್ಲಿ ದಾಖಲೆ ಪ್ರಮಾಣದ ಮಳೆಯಾಗಿದ್ದು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ರಾಜ್ಯದ ಕೊಟ್ಟಿಗೆಹಾರದಲ್ಲಿ ದಾಖಲೆ ಪ್ರಮಾಣದ ಮಳೆ

ಬೆಂಗಳೂರು: ಕರ್ನಾಟಕದಾದ್ಯಂತ ವ್ಯಾಪಕ ಮಳೆ ಮುಂದುವರೆದಿದ್ದು, ಚಾರ್ಮಾಡಿ ಘಾಟ್ ಬಳಿಯ ಕೊಟ್ಟಿಗೆ ಹಾರದಲ್ಲಿ ದಾಖಲೆ ಪ್ರಮಾಣದ ಮಳೆಯಾಗಿದ್ದು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.


ಪ್ರಸಕ್ತ ಸಾಲಿನ ಮಳೆಗಾಲ ಅಕ್ಷರಶಃ ಸಾವಿನ ಮಳೆಯಾಗಿ ಮಾರ್ಪಟ್ಟಿದ್ದು, ಕರ್ನಾಟಕದ 17 ಜಿಲ್ಲೆಗಳ 70 ಗ್ರಾಮಗಳು ಪ್ರವಾಹ ಪೀಡಿತ ಎಂದು ಘೋಷಣೆಯಾಗಿವೆ. ಈ ನಡುವೆ ರಾಜ್ಯಾದ್ಯಂತ ಭಾರಿ ಮಳೆ ಮುಂದುವರೆದಿದ್ದು, ರಾಜ್ಯದ ದಕ್ಷಿಣ ಹಾಗೂ ಉತ್ತರ ಒಳನಾಡು ಮತ್ತು ಕರಾವಳಿಯಲ್ಲಿ ನೈಋತ್ಯ ಮುಂಗಾರು ಸಕ್ರಿಯವಾಗಿದೆ.


ಇನ್ನು ರಾಜ್ಯದ ವಿವಿಧೆಡೆ ಸುರಿದಿರುವ ಮಳೆ ಕುರಿತು ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ಚಾರ್ಮಾಡಿ ಘಾಟ್ ಬಳಿಯ ಕೊಟ್ಟಿಗೆ ಹಾರದಲ್ಲಿ ದಾಖಲೆ ಪ್ರಮಾಣದ ಮಳೆಯಾಗಿದ್ದು, ಇಲ್ಲಿ 57 ಮಿಲಿ ಮೀಟರ್ ಮಳೆಯಾಗಿದ್ದು, ಇದು ಪ್ರಸಕ್ತ ಸಾಲಿನ ಗರಿಷ್ಠ ಪ್ರಮಾಣದ ಮಳೆಯಾಗಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.


ಉಳಿದಂತೆ ಹುಂಚದಕಟ್ಟೆ 39 ಮಿ.ಮೀ, ಕಳಸ 32 ಮಿ.ಮೀ, ಮೂಡಿಗರೆ 31 ಮಿ.ಮೀ, ಲಿಂಗನಮಕ್ಕಿ 27 ಮಿ.ಮೀ, ಭಾಗಮಂಡಲ 26 ಮಿ.ಮೀ, ಧರ್ಮಸ್ಥಳ, ಹೊಸನಗರದಲ್ಲಿ ತಲಾ 23 ಮಿ.ಮೀ, ಬೆಳ್ತಂಗಡಿ 22 ಮಿ.ಮೀ, ಸಿದ್ದಾಪುರ, ಕಮ್ಮರಡಿ, ಜಯಪುರದಲ್ಲಿ ತಲಾ 21ಮಿ.ಮೀಟರ್ ಗೂ ಅಧಿಕ ಮಳೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com