ಗಣೇಶ ಚತುರ್ಥಿ: ಪಿಒಪಿ ಗಣೇಶನಿಗೆ 'ನೋ' ಎನ್ನುತ್ತಿರುವ ಬೆಂಗಳೂರು

ಈ ಬಾರಿಯ ಗಣೇಶ ಚತುರ್ಥಿಗಾಗಿ ಕೇವಲ ಪರಿಸರ ಸ್ನೇಹಿ ಗಣೇಶ ವಿಗ್ರಹಗಳನ್ನಷ್ಟೇ ಬಳಕೆ ಮಾಡಿರಿ,  ಪಾಲ್ಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ಬೇಡವೇ ಬೇಡ! ಇದು ಸಿಲಿಕಾನ್ ಸಿಟಿ ಬೆಂಗಳುರಿಗರ ಗಟ್ಟಿ ದನಿ. 
ಗಣೇಶ
ಗಣೇಶ

ಬೆಂಗಳೂರು: ಈ ಬಾರಿಯ ಗಣೇಶ ಚತುರ್ಥಿಗಾಗಿ ಕೇವಲ ಪರಿಸರ ಸ್ನೇಹಿ ಗಣೇಶ ವಿಗ್ರಹಗಳನ್ನಷ್ಟೇ ಬಳಕೆ ಮಾಡಿರಿ,  ಪಾಲ್ಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ಬೇಡವೇ ಬೇಡ! ಇದು ಸಿಲಿಕಾನ್ ಸಿಟಿ ಬೆಂಗಳುರಿಗರ ಗಟ್ಟಿ ದನಿ. ಈ ಸಂಬಂಧ ಕೆಲ ನಗರವಾಸಿಗಳು ಪಿಒಪಿ ಗಣೇಶನಿಂದಾಗುವ ಹಾನಿಕಾರಕ ಪರಿಣಾಮಗಳ ಮೇಲೆ ಜನಜಾಗ್ರತಿ ಮೂಡಿಸುತ್ತಿದ್ದು ಪರಿಸರ ಸ್ನೇಹಿ ಗಣೇಶನನ್ನೇ ಪೂಜಿಸಲು ಸಾರ್ವಜನಿಕರಿಗೆ ಮನವಿ ಮಾಡುತ್ತಿದ್ದಾರೆ.

ಈ ವರ್ಷ ಸೆಪ್ಟೆಂಬರ್ 2ಕ್ಕೆ ಗಣೇಶ ಚತುರ್ಥಿ ಇದೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಪಿಒಪಿ ವಿಗ್ರಹಗಳನ್ನು ನಿಷೇಧಿಸಿದೆ ಮತ್ತು ಮಾಲಿನ್ಯವನ್ನು ತಡೆಗಟ್ಟಲು ಅವುಗಳನ್ನು ಬಳಸದಂತೆ ಮುಂಜಾಗ್ರತೆ ಕ್ರಮ  ತೆಗೆದುಕೊಳ್ಳುತ್ತಿದೆ

ಭಾನುವಾರ, ಜಕ್ಕೂರು ಕೆರೆ ಸಂರಕ್ಷಕ ಜಲ ಪೋಷಣೆ ಸ್ವಯಂಸೇವಕರು ಮಣ್ಣಿನ ವಿಗ್ರಹಗಳ ಉಚಿತ ಕಾರ್ಯಾಗಾರವನ್ನು ನಡೆಸಿದರು, ಅಲ್ಲಿ 50 ಕ್ಕೂ ಹೆಚ್ಚು ಜನರು ಮಣ್ಣಿನ ವಿಗ್ರಹಗಳನ್ನು ಮಾಡಿದ್ದರು.

"ಕಳೆದ ವರ್ಷ ನಿಷೇಧದ ಹೊರತಾಗಿಯೂ, ಅನೇಕ ಪಿಒಪಿ ವಿಗ್ರಹಗಳನ್ನುಕೆರೆಗೆ ಹಾಕಲಾಗಿದೆ.ಈ ವರ್ಷ, ಜಕ್ಕೂರು ಕೆರೆಯಲ್ಲಿ  ಕಾರ್ಯಾಗಾರವನ್ನು ನಡೆಸುವ ಮೂಲಕ ಪಿಒಪಿ ವಿಗ್ರಹಗಳು ಜಲಮೂಲಗಳನ್ನು ಹೇಗೆ ಕಲುಷಿತಗೊಳಿಸುತ್ತವೆ ಎಂಬುದರ ಕುರಿತು ಜನರಿಗೆ ತಿಳಿಸಲು ನಾವು ಬಯಸುತ್ತೇವೆ. ಮಣ್ಣಿನ ವಿಗ್ರಹಗಳನ್ನು ಹೇಗೆ ತಯಾರಿಸಬೇಕೆಂದು ನಾವು ಅವರಿಗೆ ಕಲಿಸುತ್ತಿದ್ದೇವೆ ”ಎಂದು ಜಲ ಪೋಷಣೆ ಟ್ರಸ್ಟಿಗಳಲ್ಲಿ ಒಬ್ಬರಾದ ಅನ್ನಪೂರ್ಣ ಎಸ್ ಕಾಮತ್ ಹೇಳಿದರು.

ಅಂತೆಯೇ, ಯುನೈಟೆಡ್ ವೇ ಬೆಂಗಳೂರಿನ ಸ್ವಯಂಸೇವಕರು ಸಿಂಗಸಂದ್ರ ಮತ್ತು ಮುನ್ನೇಕುಲಾಲ ಕೆರೆ  ಬಳಿ ಉಚಿತ ಕಾರ್ಯಾಗಾರಗಳನ್ನು ನಡೆಸಿದರು, ಅಲ್ಲಿ 100 ಜನರು ಒಟ್ಟುಗೂಡಿ ಮಣ್ಣಿನ ಗಣೇಶಗಳನ್ನು ಹೇಗೆ ತಯಾರಿಸಬೇಕೆಂದು ಅರಿತರು. ಅಲ್ಲದೆ ಈ ವಿಗ್ರಹಗಳು ಕೆರೆ ನೀರಲ್ಲಿ ಹೇಗೆ ಬೆರೆತು ಹೋಗುತ್ತದೆ ಎಂಬುದನ್ನು ಕಂಡುಕೊಂಡರು. ನಮಗೆ ಸಾಧ್ಯವಾದಷ್ಟು ಕೆರೆಗಳ  ಬಳಿ ಜನರಿಗೆ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದೇವೆ. ಮಣ್ಣಿನ ವಿಗ್ರಹಗಳನ್ನು ಹೇಗೆ ತಯಾರಿಸಬೇಕೆಂಬುದರ ಬಗ್ಗೆ 3,000 ಕ್ಕೂ ಹೆಚ್ಚು ಜನರಿಗೆ ಕಲಿಸುವುದು ನಮ್ಮ ಗುರಿಯಾಗಿದೆ, ಇದರಿಂದ ಅವರು ಸರಿಯಾದ ಮಾರ್ಗದರ್ಶನ ಪಡೆಯಲಿದ್ದಾರೆ ಎಂದು  ಕಾರ್ಯಕ್ರಮದ ಮುಖ್ಯಸ್ಥ ಡೇವಿಡ್ ಕುಮಾರ್ ಹೇಳಿದರು.

ಅಲಸೂರು ಸಮೀಪದ ಕೆಲವು ನಿವಾಸಿಗಳು ಅಲಸೂರು ಕೆರೆಗೆ ತೆರಳಿ ಜಾಗೃತಿ ಮೂಡಿಸಿದರು. "ನಾವು 20 ಮಕ್ಕಳಿಗೆ ಕೆರೆಯ ಬಳಿ ಗಣೇಶ ವಿಗ್ರಹಗಳನ್ನು ಮಾಡಲು ಕಲಿಸಿದ್ದೇವೆ ಮತ್ತು ಪಿಒಪಿ ಗಣೇಶನನ್ನು ಪೂಜಿಸಬಾರದೆಂದು ಹೇಳಿದ್ದೇವೆ" ಎಂದು ಅಲಸೂರು ನಿವಾಸಿಯಾದ ರಾಜು ಟಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com