ಬೆಂಗಳೂರು: ಒಂದೇ ದಿನದಲ್ಲಿ 13 ಮಂದಿಗೆ ಮರುಜೀವ ನೀಡಿದ ಅಂಗಾಂಗ ದಾನ

ಮೆದುಳು ನಿಷ್ಕ್ರಿಯವಾಗಿದೆ ಎಂದು ಘೊಷಿಸಲ್ಪಟ್ಟ ಇಬ್ಬರು ವ್ಯಕ್ತಿಗಳ ಕುಟುಂಬಸ್ಥರು ಅಂಗಾಂಗ ದಾನಕ್ಕೆ ತೀರ್ಮಾನಿಸುವ ಮೂಲಕ 24 ಗಂಟೆಗಳ ಅವಧಿಯಲ್ಲಿ 13 ಕ್ಕೂ ಹೆಚ್ಚು ಜನರಿಗೆ ಹೊಸ ಜೀವನವನ್ನು ನೀಡಿದರು. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮೆದುಳು ನಿಷ್ಕ್ರಿಯವಾಗಿದೆ ಎಂದು ಘೊಷಿಸಲ್ಪಟ್ಟ ಇಬ್ಬರು ವ್ಯಕ್ತಿಗಳ ಕುಟುಂಬಸ್ಥರು ಅಂಗಾಂಗ ದಾನಕ್ಕೆ ತೀರ್ಮಾನಿಸುವ ಮೂಲಕ 24 ಗಂಟೆಗಳ ಅವಧಿಯಲ್ಲಿ 13 ಕ್ಕೂ ಹೆಚ್ಚು ಜನರಿಗೆ ಹೊಸ ಜೀವನವನ್ನು ನೀಡಿದರು.

21 ವರ್ಷದ ದಿನಗೂಲಿ ಕಾರ್ಮಿಕರೊಬ್ಬರು ಅಪಘಾತಕ್ಕೀಡಾದ ಕಾರಣ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ  ಅವರ ಮೆದುಳು ನಿಷ್ಕ್ರಿಯವೆಂದು ಘೋಷಿಸಲ್ಪಟ್ಟಿದೆ. ಆದ ಆತನ  ಮೂತ್ರಪಿಂಡ, ಯಕೃತ್ತು, ಹೃದಯ,ಕಾರ್ನಿಯಾಗಳು ಸೇರಿ ಅನೇಕ ಅಂಗಾಂಗಗಳನ್ನು ದಆನ ಮಾಡಲಾಗಿದೆ.

ಇನ್ನೊಂದು ಪ್ರಕರಣದಲ್ಲಿ 30 ವರ್ಷದ ಮಹಿಳೆ ಚಿತ್ರದುರ್ಗ ಬಳಿ ಅಪಘಾತಕ್ಕೀಡಾಗಿ ಆಕೆಯನ್ನೂ ಸಹ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಅಲ್ಲಿ ಆಕೆಯ ಮೆದುಳು ನಿಷ್ಕ್ರಿಯವಾಗಿದೆ ಎಂದು ಪತ್ತೆಯಾಗಿದ್ದು ಮೂತ್ರಪಿಂಡ, ಪಿತ್ತಜನಕಾಂಗ, ಹೃದಯ ಕವಾಟ, ಕಾರ್ನಿಯಾ, ಶ್ವಾಸಕೋಶ, ಸಣ್ಣ ಕರುಳು ಮತ್ತು ಕಿಬ್ಬೊಟ್ಟೆಯ ನಾಳಗಳನ್ನು ದಾನ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com