ಬೆಂಗಳೂರು: ರಿಯಾಲಿಟಿ ಶೋ ನಲ್ಲಿ ಸಿಗದ ಅವಕಾಶ; ನೊಂದ ಯುವಕ ಆತ್ಮಹತ್ಯೆ 

ಖಾಸಗಿ ಚಾನೆಲ್ ನಡೆಸುವ ರಿಯಾಲಿಟಿ ಶೋನಲ್ಲಿ ಅವಕಾಶ ಸಿಗದ ಹಿನ್ನೆಲೆಯಲ್ಲಿ ನೊಂದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೊಸಕೋಟೆ ಹೊರವಲಯದಲ್ಲಿ ನಡೆದಿದೆ.
ಯುವಕ ಆತ್ಮಹತ್ಯೆ
ಯುವಕ ಆತ್ಮಹತ್ಯೆ

ಬೆಂಗಳೂರು: ಖಾಸಗಿ ಚಾನೆಲ್ ನಡೆಸುವ ರಿಯಾಲಿಟಿ ಶೋನಲ್ಲಿ ಅವಕಾಶ ಸಿಗದ ಹಿನ್ನೆಲೆಯಲ್ಲಿ ನೊಂದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೊಸಕೋಟೆ ಹೊರವಲಯದಲ್ಲಿ ನಡೆದಿದೆ.

ಹೊಸಕೋಟೆ ತಾಲೂಕಿನ ಕಂಬಳಿಪುರ ಗ್ರಾಮದ ಕಿರಣ್ ಮೃತ ದುರ್ದೈವಿ. ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಟಿಕ್ ಟಾಕ್ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದ.

ಕಿರಣ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಖಾಸಗಿ ಚಾನೆಲ್ ನಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸಿ ಹೀರೋ ಆಗಬೇಕು ಎಂದು ಕನಸು ಕಂಡಿದ್ದನು. ಅಲ್ಲದೆ ಜೊತೆಗೆ ಅದಕ್ಕಾಗಿ ಸಾಕಷ್ಟು ತಯಾರಿ ಕೂಡ ನಡೆಸಿದ್ದನು. 

ಈ ಬಾರಿ ನನಗೂ ಒಂದು ಚಾನ್ಸ್ ಸಿಕ್ಕಿಯೇ ಸಿಗುತ್ತದೆ ಎಂದು ಮಧ್ಯವರ್ತಿಗಳ ಸಹಾಯದಿಂದ ಕಾದು ಕುಳಿತಿದ್ದನು. ಆದರೆ ಕೊನೆ ಕ್ಷಣದಲ್ಲಿ ಚಾನ್ಸ್ ಸಿಗಲಿಲ್ಲ ಎಂದು ಮಧ್ಯವರ್ತಿಗಳು ಕೈ ಎತ್ತಿದ್ದರು. ಇದರಿಂದ ಮನನೊಂದ ಯುವಕ, ಬುಧವಾರ ರಾತ್ರಿ ಹೊಸಕೋಟೆಗೆ ಬಂದು ಲಾಡ್ಜ್ ನಲ್ಲಿ ರೂಂ ಬಾಡಿಗೆಗೆ ಪಡೆದು ಟಿಕ್‍ಟಾಕ್ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ರಿಯಾಲಿಟಿ ಶೋ ನಲ್ಲಿ ಏನಾದರೂ ಮಾಡಿ ಚಾನ್ಸ್ ತಗೆದುಕೊಳ್ಳಬೇಕು ಎಂದು ಕಿರಣ್ ಅಂದುಕೊಂಡಿದ್ದನು. ಇದೇ ವೇಳೆ ರಿಯಾಲಿಟಿ ಶೋನಲ್ಲಿ ಚಾನ್ಸ್ ಕೊಡಿಸುತ್ತೇನೆ ಎಂದು ವಂಚಕರು ಹೇಳಿದ ಮಾತು ನಂಬಿ ಒಂದು ಲಕ್ಷಕ್ಕೂ ಅಧಿಕ ಹಣವನ್ನು ನೀಡಿದ್ದಾನೆ.

ಆದರೆ ಕಿರಣ್‍ನಿಂದ ಚಾನ್ಸ್ ಕೊಡಿಸುವುದಾಗಿ ಹಣ ಪಡೆದವರು ಕೊನೆ ಕ್ಷಣದವರೆಗೂ ಚಾನ್ಸ್ ಸಿಕ್ಕಿದೆ ಎಂದು ಹೇಳಿದ್ದರು. ಬಳಿಕ ಈ ಬಾರಿ ನಿನಗೆ ಚಾನ್ಸ್ ಸಿಕ್ಕಿಲ್ಲ ಹಣ ವಾಪಸ್ ಕೊಡುತ್ತೇನೆ ಎಂದು ಹೇಳಿದ್ದರು. ಇದರಿಂದ ಮನನೊಂದ ಕಿರಣ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com