ಗದಗ:ಈ ಶಾಲೆಯ 1 ರಿಂದ 7ನೇ ತರಗತಿಯ 90 ಮಕ್ಕಳಿಗೆ ಇರುವುದು ಎರಡೇ ಕೊಠಡಿ!
ಇತ್ತೀಚಿನ ತೀವ್ರ ಪ್ರವಾಹದ ಬಳಿಕ ಗದಗ ಜಿಲ್ಲೆಯ ಹೊಳೆಹಡಗಲಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ತೀವ್ರ ತೊಂದರೆಯುಂಟಾಗಿದೆ. ಇಲ್ಲಿನ 1ರಿಂದ 7ನೇ ತರಗತಿಯವರೆಗೆ ಕಲಿಯುತ್ತಿರುವ ಸುಮಾರು 90 ಮಕ್ಕಳನ್ನು ಎರಡು ತರಗತಿಯಲ್ಲಿ ಕೂಡಿ ಹಾಕಲಾಗಿದೆ.
Published: 31st August 2019 10:50 AM | Last Updated: 31st August 2019 04:07 PM | A+A A-

ಸಾಂದರ್ಭಿಕ ಚಿತ್ರ
ಗದಗ: ಇತ್ತೀಚಿನ ತೀವ್ರ ಪ್ರವಾಹದ ಬಳಿಕ ಗದಗ ಜಿಲ್ಲೆಯ ಹೊಳೆಹಡಗಲಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ತೀವ್ರ ತೊಂದರೆಯುಂಟಾಗಿದೆ. ಇಲ್ಲಿನ 1ರಿಂದ 7ನೇ ತರಗತಿಯವರೆಗೆ ಕಲಿಯುತ್ತಿರುವ ಸುಮಾರು 90 ಮಕ್ಕಳನ್ನು ಎರಡು ತರಗತಿಯಲ್ಲಿ ಕೂಡಿ ಹಾಕಲಾಗಿದೆ.
ಹೊಳೆಹಡಗಲಿ ಗ್ರಾಮದ ಈ ಶಾಲೆಯ ಏಳು ತರಗತಿಗಳು ಪ್ರವಾಹಕ್ಕೆ ಕೊಚ್ಚಿ ಹೋಗಿದ್ದವು. ಶಾಲೆಯ ಪ್ರಯೋಗಾಲಯ ಉಪಕರಣಗಳು, ಲೈಬ್ರೆರಿ, ದಾಖಲಾತಿಗಳು ಮತ್ತು ಇತರ ಪೀಠೋಪಕರಣಗಳು ಕೊಚ್ಚಿ ಹೋಗಿವೆ. ಹೀಗಾಗಿ ಶಾಲೆಯ ಮಕ್ಕಳನ್ನು ಹೊಳೆಹಡಗಲಿಯ ಮತ್ತೊಂದು ಶಾಲೆಗೆ ವರ್ಗಾಯಿಸಲಾಗಿದೆ. ಇಲ್ಲಿನ ಅನೇಕ ಕುಟುಂಬಗಳನ್ನು ಕೂಡ ಹೊಸ ಗ್ರಾಮಕ್ಕೆ ವರ್ಗಾಯಿಸಲಾಗಿದೆ.
ಮಕ್ಕಳಿಗೆ ಇದರಿಂದ ತೀವ್ರ ಬೇಸರವಾಗುತ್ತಿದೆ. ನಮಗೆ ಹಳೆಯ ಶಾಲೆಯೇ ಉತ್ತಮವಾಗಿತ್ತು. ಪ್ರವಾಹದಿಂದ ಅದು ಕೊಚ್ಚಿ ಹೋಗಿರುವುದರಿಂದ ಈಗ ಹೊಸ ಶಾಲೆಗೆ ಬಂದಿದ್ದೇವೆ, ಇಲ್ಲಿ ಕೇವಲ ಎರಡೇ ರೂಂ ಇದೆ, ನಮಗೆ ಸಾಕಾಗುವುದಿಲ್ಲ. ಶಿಕ್ಷಕರು ಒಂದು ತರಗತಿಯ ಮಕ್ಕಳಿಗೆ ಪಾಠ ಮಾಡುವಾಗ ಇನ್ನೊಂದು ತರಗತಿ ಮಕ್ಕಳಿಗೆ ಗಮನ ಕೊಡಲು ಆಗುವುದಿಲ್ಲ ಎಂದು ವಿದ್ಯಾರ್ಥಿಗಳು ಹೇಳುತ್ತಾರೆ.
ಶಾಲಾ ಪ್ರಾಂಶುಪಾಲ ಟಿ ಎ ದಾಸರ್, ಪ್ರವಾಹದಲ್ಲಿ ಎಲ್ಲವೂ ಕೊಚ್ಚಿ ಹೋಗಿದೆ. ಜಿಲ್ಲಾ ಮಟ್ಟದಲ್ಲಿ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದವರ ಪ್ರಶಸ್ತಿಗಳೆಲ್ಲವೂ ಹಾಳಾಗಿ ಹೋಗಿದೆ. ಪ್ರಮುಖ ದಾಖಲಾತಿಗಳು ಕೂಡ ನೀರಿನಲ್ಲಿ ಕೊಚ್ಚಿ ಹೋಗಿದೆ. ನಾವು ಎಲ್ಲಾ ವಿದ್ಯಾರ್ಥಿಗಳನ್ನು ಎರಡು ತರಗತಿಗಳಲ್ಲಿ ಇರುವಂತೆ ವ್ಯವಸ್ಥೆ ಮಾಡಿದ್ದೇವೆ ಎಂದರು.
ಸದ್ಯದಲ್ಲಿಯೇ ಇಲಾಖೆ ಸಭೆ ನಡೆಸಿ ಸಮಸ್ಯೆ ಬಗೆಹರಿಸಲಿದೆ ಎಂದು ರೋಣ ವಲಯ ಶಿಕ್ಷಣಾಧಿಕಾರಿ ನಂಜುಂಡಯ್ಯ ತಿಳಿಸಿದ್ದಾರೆ.