ಶಾಲಾ ಕಟ್ಟಡಗಳ ನವೀಕರಣಕ್ಕೆ ಸರ್ಕಾರಕ್ಕೆ ಲೋಕಾಯುಕ್ತ ಸೂಚನೆ 

ರಾಜ್ಯದ ಏಳು ಜಿಲ್ಲೆಗಳ ಸುಮಾರು 3 ಸಾವಿರದ 175 ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು, ಮಕ್ಕಳು ಹಾಗೂ ಶಿಕ್ಷಕರ ಪ್ರಾಣಪಾಯದ ಆತಂಕ ಎದುರಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು:  ರಾಜ್ಯದ ಏಳು ಜಿಲ್ಲೆಗಳ ಸುಮಾರು 3 ಸಾವಿರದ 175 ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು, ಮಕ್ಕಳು ಹಾಗೂ ಶಿಕ್ಷಕರ ಪ್ರಾಣಪಾಯದ ಆತಂಕ ಎದುರಾಗಿದೆ. 

ಸಾರ್ವಜನಿಕ ಶಿಕ್ಷಣ ಇಲಾಖೆ ಲೋಕಾಯುಕ್ತಕ್ಕೆ ಸಲ್ಲಿಸಿರುವ ಮಾಹಿತಿಯಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ . ಮಾಹಿತಿ ಪ್ರಕಾರ ನಾಲ್ಕು ಜಿಲ್ಲೆಗಳ 2, 008 ಶಾಲಾ ಕೊಠಡಿಗಳನ್ನು ಕೂಡಲೇ ಧ್ವಂಸಗೊಳಿಸಿ ನವೀಕರಿಸಬೇಕಾಗಿದೆ. ಇದಲ್ಲದೇ ಮೂರು ಜಿಲ್ಲೆಗಳ 1, 167 ಶಾಲಾ ಕಟ್ಟಡಗಳನ್ನು ದುರಸ್ತಿ ಮಾಡಬೇಕಾಗಿದೆ. 

ಈ ಶಾಲಾ ಕಟ್ಟಡಗಳನ್ನು ಆದಷ್ಟು ಬೇಗ ನವಿಕರೀಸುವಂತೆ ಸರ್ಕಾರಕ್ಕೆ ಲೋಕಾಯುಕ್ತ ಸೂಚನೆ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com