ಪಠ್ಯ ಪುಸ್ತಕಗಳಿಂದ ಟಿಪ್ಪು ಸುಲ್ತಾನ್ ಅಧ್ಯಾಯಕ್ಕೆ ಕತ್ತರಿ ಇತಿಹಾಸಕ್ಕೆ ಮಾಡುವ ಅಪಚಾರ- ಬರಗೂರು 

ಶಾಲಾ ಪಠ್ಯ  ಪುಸ್ತಕಗಳಿಂದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅಧ್ಯಾಯ ಕೈ ಬಿಡುವುದು ಇತಿಹಾಸಕ್ಕೆ ಮಾಡುವ ಅಪಚಾರವಾಗಿದೆ ಎಂದು ಖ್ಯಾತ ಸಾಹಿತಿ ಹಾಗೂ 2016-17 ನೇ ಸಾಲಿನ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ಡಾ. ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಬರಗೂರು ರಾಮಚಂದ್ರಪ್ಪ
ಬರಗೂರು ರಾಮಚಂದ್ರಪ್ಪ

ಬೆಂಗಳೂರು:  ಶಾಲಾ ಪಠ್ಯ  ಪುಸ್ತಕಗಳಿಂದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಅಧ್ಯಾಯ ಕೈ ಬಿಡುವುದು ಇತಿಹಾಸಕ್ಕೆ ಮಾಡುವ ಅಪಚಾರವಾಗಿದೆ ಎಂದು ಖ್ಯಾತ ಸಾಹಿತಿ ಹಾಗೂ 2016-17 ನೇ ಸಾಲಿನ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ಡಾ. ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.

ಇದು  ಅನಗತ್ಯ ವಿವಾದವಾಗಿದೆ. ಶಾಲಾ ಪಠ್ಯ ಪುಸ್ತಕಗಳಲ್ಲಿ ಯಾವುದೇ ವಿವಾದಾತ್ಮಕ ಅಧ್ಯಾಯಗಳಿಲ್ಲ ಎಂದು ಅವರು  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಪ್ರಾಥಮಿಕ, ಮಾಧ್ಯಮಿಕ ಹಾಗೂ ಪದವಿ ಪೂರ್ವ ಮಟ್ಟದ ಪಠ್ಯ ಪುಸ್ತಕಗಳಲ್ಲಿನ ಅಧ್ಯಯನ ವಿಷಯಾಧಾರಿತವಾಗಿವೆ. ಸಾಮಾನ್ಯವಾಗಿ ಈ ಪಠ್ಯ ಪುಸ್ತಕಗಳ ವಿರುದ್ಧವಾಗಿ ನಾವು ಯಾವುದೇ ಚರ್ಚೆ ಮಾಡುವುದಿಲ್ಲ. ಕೆಲ ಇತಿಹಾಸಕಾರರು ಟಿಪ್ಪು ಸುಲ್ತಾನ್ ಪರವಾಗಿ ಬರೆದಿದ್ದರೆ, ಕೆಲವರು ವಿರುದ್ಧವಾಗಿ ಬರೆದಿದ್ದಾರೆ. ಎಲ್ಲಾ ರಾಜರು ಯುದ್ದ ಮಾಡಿದ್ದು,  ಕೆಲ ಒಳ್ಳೆಯ ಕೆಲಸ ಮಾಡಿದ್ದರೆ, ಮತ್ತೆ ಕೆಲವು ಕೆಟ್ಟ ಕೆಲಸಗಳನ್ನು ಮಾಡಿದ್ದಾರೆ. ಇಂತಹ ವಿವಾದಾತ್ಮಾಕ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಬೇಕೆ? ಎಂದು ಪ್ರಶ್ನಿಸಿದ ಅವರು, ಸಹಜವಾಗಿಯೇ ಇಂತಹ ವಿಚಾರಗಳನ್ನು ಯಾವುದೇ ಪಠ್ಯ ಪುಸ್ತಕಗಳಲ್ಲಿ ಸೇರಿಸಿಲ್ಲ ಎಂದಿದ್ದಾರೆ. 

ಟಿಪ್ಪು ಸುಲ್ತಾನ್ ಪರ ಅಥವಾ ವಿರುದ್ಧವಾಗಿ ನಾನು ಮಾತನಾಡುವುದಿಲ್ಲ, ಆದರೆ, ಶಾಲಾ ಪಠ್ಯ ಪುಸ್ತಕಗಳಲ್ಲಿ ಚೌಕಟ್ಟಿನಲ್ಲಿ ಯಾರೊಬ್ಬರ ಬಗ್ಗೆ ವಿವಾದಾತ್ಮಕ ವಿಷಯಗಳ ಬಗ್ಗೆ ನಾವು ನೀಡುವಂತಿಲ್ಲ. ಒಂದು ವೇಳೆ ಅಂತಹ ತಪ್ಪು ಮಾಹಿತಿ ಪುಠ್ಯ ಪುಸ್ತಕಗಳಲ್ಲಿ ಇದ್ದರೆ, ಅದನ್ನು ಪರಿಷ್ಕರಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ಏಳನೇ ತರಗತಿ ಪಠ್ಯ ಪುಸ್ತಕದಲ್ಲಿ ಪ್ರಮುಖ ಕ್ರಾಂತಿಕಾರಿಗಳು ಶೀರ್ಷಿಕೆಯಡಿ  ಹಿಂದುತ್ವ ಪ್ರತಿಪಾದಕ , ಸ್ವಾತಂತ್ರ್ಯ ಹೋರಾಟಗಾರ ವೀರ ಸಾರ್ವಕರ್ ಬಗ್ಗೆ ಉಲ್ಲೇಖವಿದೆ. ಒಂದು ವೇಳೆ ಕಾಂಗ್ರೆಸ್ ನಾಯಕರು ಸಾವರ್ಕರ್ ಅವರನ್ನು ಹೇಗೆ ಕ್ರಾಂತಿಕಾರಿಗಳು ಎಂದು ಕರೆಯಲಾಗುತ್ತದೆ, ಅದನ್ನು ಪಠ್ಯ ಪುಸ್ತಕದಿಂದ ತೆಗೆಯಿರಿ ಎಂದರೆ ನಾವು ಹೇಗೆ ತೆಗೆಯಲು ಸಾಧ್ಯ ? ಅದು ಆಗಲ್ಲ ಎಂದರು.

6, 7 ಹಾಗೂ 10 ನೇ ತರಗತಿಯ ಪಠ್ಯ ಪುಸ್ತಕಗಳಲ್ಲಿ ಟಿಪ್ಪು ಸುಲ್ತಾನ್ ಅಧ್ಯಯನಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಂದು ಉಲ್ಲೇಖಿಸಿಲ್ಲ, ಅವರು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದರೂ ಕೆಲವೊಂದು ಅನುಮಾನಗಳ ಕಾರಣ ಸ್ವಾತಂತ್ರ್ಯ ಹೋರಾಟಗಾರ ಎಂದು ಉಲ್ಲೇಖಿಸಿಲ್ಲ, ಟಿಪ್ಪು ಸುಲ್ತಾನ್ ಕಾಲದಲ್ಲಿ ಸುಮಾರು 500 ರಾಜಮನೆತಗಳು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿವೆ. ಸರ್ಕಾರ ಜನರಿಂದ ಆಯ್ಕೆಯಾಗಿದ್ದು, ಪಕ್ಷ ರಾಜಕೀಯಕ್ಕಿಂತಲೂ ಮೇಲಿರಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು. 

ತಾವೇ ಬರೆದಿರುವ ಬಯಲಾಟದ ಭೀಮಣ್ಣ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪಠ್ಯ ಪುಸ್ತಕದಲ್ಲಿದೆ. ಇದು ಗ್ರಾಮಗಳಿಗೆ ಸಂಬಂಧಿಸಿದ ವಿಷಯವಾಗಿದೆ. ಕೆಲ ಬಿಜೆಪಿ ಶಾಸಕರು ಇದರ ಬಗ್ಗೆ ಚರ್ಚೆ ನಡೆಸಿದ್ದಾರೆ. ಲೇಖಕ ಚದುರಂಗ ನೇತೃತ್ವದಲ್ಲಿ ಸಮಿತಿ ಪದವಿ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕವಾಗಿ ಇಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ವರದಿ ನೀಡಿದ್ದು, ಸರ್ಕಾರ ಕೂಡಾ ಆ ವರದಿಯನ್ನು ಸ್ವೀಕರಿಸಿದೆ ಎಂದು ತಿಳಿಸಿದರು.
 
ಟಿಪ್ಪು ಸುಲ್ತಾನ್ ಅಧ್ಯಯನ ಬಗ್ಗೆ ನಿರ್ಧಾರ ಮಾಡಲು ತಜ್ಞರಿಗೆ ವಹಿಸಬೇಕು, ಅದು ಸರ್ಕಾರ ನಿರ್ಧಾರ ಮಾಡಬಾರದು ಎಂದು ಸಲಹೆ ನೀಡಿದ ಬರಗೂರು ರಾಮಚಂದ್ರಪ್ಪ,  ಶಿಕ್ಷಣ ಸಚಿವ ಸುರೇಶ್ ಕುಮಾರ್ ಬಗ್ಗೆ ತುಂಬಾ ನಂಬಿಕೆ ಹೊಂದಿರುವುದಾಗಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com