ಗೌರಿ ಲಂಕೇಶ್ ಟ್ರಸ್ಟ್ ನ 7 ಕೋಟಿ ರೂ ಹಣದ ಬಗ್ಗೆ ತನಿಖೆಯಾಗಲಿ: ಇಂದ್ರಜಿತ್ ಲಂಕೇಶ್

ಗೌರಿ ಲಂಕೇಶ್ ಟ್ರಸ್ಟ್ ನಲ್ಲಿ ಅಕ್ರಮ ನಡೆದಿದ್ದು ಇದರಲ್ಲಿ ಸಂಗ್ರಹಿಸಲಾದ 7 ಕೋಟಿ ರೂ ಹಣದ ಬಗ್ಗೆ ಕೂಡಲೇ ಸರ್ಕಾರದಿಂದ  ತನಿಖೆ ನಡೆಸಬೇಕು ಎಂದು ಪತ್ರಕರ್ತ ಹಾಗೂ ನಟ ಇಂದ್ರಜಿತ್ ಲಂಕೇಶ್ ಒತ್ತಾಯಿಸಿದ್ದಾರೆ.
ಇಂದ್ರಜಿತ್ ಲಂಕೇಶ್-ಗೌರಿ
ಇಂದ್ರಜಿತ್ ಲಂಕೇಶ್-ಗೌರಿ

ಬೆಂಗಳೂರು: ಗೌರಿ ಲಂಕೇಶ್ ಟ್ರಸ್ಟ್ ನಲ್ಲಿ ಅಕ್ರಮ ನಡೆದಿದ್ದು ಇದರಲ್ಲಿ ಸಂಗ್ರಹಿಸಲಾದ 7 ಕೋಟಿ ರೂ ಹಣದ ಬಗ್ಗೆ ಕೂಡಲೇ ಸರ್ಕಾರದಿಂದ  ತನಿಖೆ ನಡೆಸಬೇಕು ಎಂದು ಪತ್ರಕರ್ತ ಹಾಗೂ ನಟ ಇಂದ್ರಜಿತ್ ಲಂಕೇಶ್ ಒತ್ತಾಯಿಸಿದ್ದಾರೆ.

ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ನನ್ನ ಅಕ್ಕ ಹಾಗೂ ನನ್ನ ಹೆಸರು ಕೇಳಿ ಬಂದಿರುವುದರಿಂದ ಸ್ಪಷ್ಟನೆ ನೀಡುತ್ತಿದ್ದು, ಟ್ರಸ್ಟಗೂ ತಮಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದರು. 

ತಮ್ಮ ತಂದೆ ಪ್ರಾರಂಭಿಸಿದ ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇನೆ. ಮಾಧ್ಯಮ ಆಯ್ತು, ಸಿನಿಮಾ ಆಯ್ತು ಎಂದು ನನ್ನ ಪಾಡಿಗೆ ನಾನು ಇದ್ದೇನೆ.  ಟ್ರಸ್ಟ್ ನಲ್ಲಿ ಯಾರು ಹಣ ಸಂಗ್ರಹಿಸುತ್ತಿದ್ದಾರೆ. ಇದರ ಉದ್ದೇಶ ಏನು ಎಂದು ತಿಳಿಯಬೇಕಿದೆ. 

ಕವಿತಾ ಲಂಕೇಶ್ ಹೇಳಿಕೆಗೂ ನನಗೂ ಯಾವುದೇ ರೀತಿಯಲ್ಲೂ ಸಂಬಂಧವಿಲ್ಲ. ‌ಆದ್ದರಿಂದ ಈ ಕುರಿತು ಸಂಪೂರ್ಣವಾಗಿ ತನಿಖೆ‌ ನಡೆಯಬೇಕಿದೆ ಎಂದು ಆಗ್ರಹಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com