ಅಡ್ಯಾಪ್ಟ್ ಎ-ಸ್ಟ್ರೀಟ್ ಯೋಜನೆಗೆ ಬಿಬಿಎಂಪಿ ಚಾಲನೆ : ವಿಶೇಷ ಆಯುಕ್ ರಂದೀಪ್ ನೇತೃತ್ವದಲ್ಲಿ ಸಭೆ

ನಗರದ ರಸ್ತೆಗಳನ್ನು ಸ್ವಚ್ಛವಾಗಿಡುವ ನಿಟ್ಟಿನಲ್ಲಿ “ಅಡಾಪ್ಟ್-ಎ ಸ್ಟ್ರೀಟ್" ಹೆಸರಿನಲ್ಲಿ ರಸ್ತೆ ದತ್ತು ಪಡೆಯುವ ಯೋಜನೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚಾಲನೆ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಗರದ ರಸ್ತೆಗಳನ್ನು ಸ್ವಚ್ಛವಾಗಿಡುವ ನಿಟ್ಟಿನಲ್ಲಿ “ಅಡಾಪ್ಟ್-ಎ ಸ್ಟ್ರೀಟ್" ಹೆಸರಿನಲ್ಲಿ ರಸ್ತೆ ದತ್ತು ಪಡೆಯುವ ಯೋಜನೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚಾಲನೆ ನೀಡಿದೆ.

ಈ ಸಂಬಂಧ ಪಾಲಿಕೆ ಕೇಂದ್ರ ಕಛೇರಿ ಸಭಾಂಗಣ-1 ರಲ್ಲಿ ಇಂದು ವಿಶೇಷ ಆಯುಕ್ತರು(ಘನತ್ಯಾಜ್ಯ) ಶ್ರೀ ರಂದೀಪ್ ರವರ ನೇತೃತ್ವದಲ್ಲಿ ವಿವಿಧ 25 ಸಂಘ-ಸಂಸ್ಥೆಗಳ ಪ್ರತಿನಿಧಿಗಳ ಜೊತೆ 30ಕ್ಕೂ ಹೆಚ್ಚು ರಸ್ತೆಗಳನ್ನು ದತ್ತು ಪಡೆಯುವ ಕುರಿತು ಸಭೆ ನಡೆಯಿತು.

ಬೆಂಗಳೂರನ್ನು ಸುಂದರ ನಗರವನ್ನಾಗಿಸುವ ಉದ್ದೇಶದಿಂದ ರಸ್ತೆ ದತ್ತು ಪಡೆಯು ವ ಯೋಜನೆಗೆ ಪಾಲಿಕೆ ಚಾಲನೆ ನೀಡಿದ್ದು, ಈಗಾಗಲೇ ಇಂಡಿಯಾ ರೈಸಿಂಗ್ ಟ್ರಸ್ಟ್ 10 ರಸ್ತೆಗಳನ್ನು ದತ್ತು ಪಡೆದು ಆ ರಸ್ತೆಗಳನ್ನು ಸ್ವಚ್ಛವಾಗಿಡುವ ಕಾರ್ಯ ನಡೆಯುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com