ವಿಜಯಪುರ: ಸೊಸೆಯನ್ನು ಥಳಿಸಿದ ಗಂಡನ ಮನೆಯವರನ್ನು ಕಟ್ಟಿ ಹಾಕಿ ಥಳಿಸಿದ ಗ್ರಾಮಸ್ಥರು!

ತವರು ಮನೆಯಲ್ಲಿದ್ದ ಪತ್ನಿಯನ್ನು ಕರೆದುಕೊಂಡು ಹೋಗಲು ಬಂದಿದ್ದ ಗಂಡನ ಮನೆಯವರು ಆಕೆಯನ್ನು ಥಳಿಸಿದ್ದರಿಂದ ಆಕ್ರೋಶಗೊಂಡ ಗ್ರಾಮಸ್ಥರು 9 ಮಂದಿಯನ್ನು ಹಗ್ಗದಿಂದ ಕಟ್ಟಿಹಾಕಿ ಥಳಿಸಿರುವ ಘಟನೆ ನಡೆದಿದೆ.

Published: 30th December 2019 01:17 PM  |   Last Updated: 30th December 2019 01:17 PM   |  A+A-


villagers tied People And Beat in Vijayapura

ಹಲ್ಲೆಯ ದೃಶ್ಯ

Posted By : vishwanath
Source : Online Desk

ವಿಜಯಪುರ: ತವರು ಮನೆಯಲ್ಲಿದ್ದ ಪತ್ನಿಯನ್ನು ಕರೆದುಕೊಂಡು ಹೋಗಲು ಬಂದಿದ್ದ ಗಂಡನ ಮನೆಯವರು ಆಕೆಯನ್ನು ಥಳಿಸಿದ್ದರಿಂದ ಆಕ್ರೋಶಗೊಂಡ ಗ್ರಾಮಸ್ಥರು 9 ಮಂದಿಯನ್ನು ಹಗ್ಗದಿಂದ ಕಟ್ಟಿಹಾಕಿ ಥಳಿಸಿರುವ ಘಟನೆ ನಡೆದಿದೆ. 

ಮುದ್ದೇಬಿಹಾಳ ತಾಲೂಕಿನ ಆಲಕೊಪ್ಪ ಗ್ರಾಮದಲ್ಲಿನ ಈ ಘಟನೆ ನಡೆದಿದೆ. ಗಂಡನ ಜೊತೆ ಜಗಳ ಮಾಡಿಕೊಂಡಿದ್ದ ಪತ್ನಿ ಕಮಲವ್ವ ವಡ್ಡರ ತಾಯಿ ಮನೆಗೆ ಬಂದಿದ್ದರು. ಆಕೆಯನ್ನು ಕರೆಯಲು ಗಂಡನ ಮನೆಯಿಂದ ಮೂವರು ಮಹಿಳೆ ಮತ್ತು 6 ಮಂದಿ ಪುರುಷರು ಬಂದಿದ್ದರು. 

ಈ ವೇಳೆ ಗಂಡನ ಮನೆಗೆ ಬರುವುದಿಲ್ಲ ಎಂದು ಕಮಲವ್ವ ಹೇಳಿದ್ದರಿಂದ ಆಕ್ರೋಶಗೊಂಡ ಗಂಡನ ಮನೆಯವರು ಆಕೆಯನ್ನು ಹಗ್ಗದಿಂದ ಕಟ್ಟಿ ಹಾಕಿ ಥಳಿಸಿದ್ದಾರೆ. ಇದನ್ನು ಕಂಡ ಗ್ರಾಮಸ್ಥರು 9 ಮಂದಿಯನ್ನು ಕಟ್ಟಿಹಾಕಿ ಥಳಿಸಿದ್ದಾರೆ. 

ಸುದ್ದಿ ತಿಳಿದ ಕೂಡಲೇ ಮುದ್ದೇಬಿಹಾಳ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. 

Stay up to date on all the latest ರಾಜ್ಯ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp