ದೇಶಾದ್ಯಂತ ವಕೀಲರ ಪ್ರತಿಭಟನೆ: ಬೆಂಗಳೂರಿನಲ್ಲಿ ಕೋರ್ಟ್ ಕಲಾಪದಿಂದ ಹೊರಗುಳಿದು ವಕೀಲರು

'ವಕೀಲರ ರಕ್ಷಣೆ ಕಾಯ್ದೆ' ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಮಂಗಳವಾರ ದೇಶಾದ್ಯಂತ ಪ್ರತಿಭಟನೆ...

Published: 12th February 2019 12:00 PM  |   Last Updated: 12th February 2019 08:53 AM   |  A+A-


BCI nationwide protest: Court proceedings affected in Bengaluru as advocates stay away

ಬೆಂಗಳೂರಿನಲ್ಲಿ ವಕೀಲರ ಪ್ರತಿಭಟನೆ

Posted By : LSB LSB
Source : The New Indian Express
ಬೆಂಗಳೂರು: 'ವಕೀಲರ ರಕ್ಷಣೆ ಕಾಯ್ದೆ' ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಮಂಗಳವಾರ ದೇಶಾದ್ಯಂತ ಪ್ರತಿಭಟನೆ ನಡೆಸಿದ್ದು, ಬೆಂಗಳೂರಿನಲ್ಲೂ ವಕೀಲರು ಕೋರ್ಟ್ ಕಲಾಪದಿಂದ ಹೊರಗುಳಿಯುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಾರ್ ಕೌನ್ಸಿಲ್ ಆಫ್ ಇಂಡಿಯಾ ನೀಡಿರುವ ಪ್ರತಿಭಟನಾ ಕರೆಗೆ ಬೆಂಗಳೂರು ವಕೀಲರ ಸಂಘ ಬೆಂಬಲ ಸೂಚಿಸಿ ಇಂದು ನಗರದಲ್ಲಿ ಪ್ರತಿಭಟನೆ ನಡೆಸಿತು. 

ಕೋರ್ಟ್ ಕಲಾಪಗಳಿಂದ ಹೊರಗುಳಿದ ವಕೀಲರು ಸಿಟಿ ಸಿವಿಲ್ ಕೋರ್ಟ್ ನಿಂದ ರಾಜಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ ವಕೀಲರ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದು, ಬಜೆಟ್ ನಲ್ಲಿ ವಕೀಲರಿಗೆ ಯಾವುದೇ ಸೌಲಭ್ಯ ನೀಡದೇ ತಮ್ಮನ್ನು ತಿರಸ್ಕರಿಸಿದೆ ಎಂದು ಆರೋಪಿಸಿ ಶಾಂತಿಯುತ ಪ್ರತಿಭಟನೆ‌ ನಡೆಸಿದರು.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp