ಬಸ್ಸು, ರೈಲಿನಲ್ಲಿ ನಿದ್ರಿಸುವವರೇ ಹುಷಾರ್: ಸಹ ಪ್ರಯಾಣಿಕರ ಹೆಗಲ ಮೇಲೆ ತೂಕಡಿಸಿ ಬೀಳದಿರಿ!

ರೈಲಿನಲ್ಲಿ ಪ್ರಯಾಣಿಸುವ ವೇಳೆ ನಿದ್ದೆಯಿಂದ ಪದೇ ಪದೇ ವ್ಯಕ್ತಿಯೊಬ್ಬರ ಭುಜದ ಮೇಲೆ ಬೀಳುತ್ತಿದ್ದ ಸಹ ಪ್ರಯಾಣಿಕನಿಗೆ ಚಾಕುವಿನಿಂದ ಇರಿದಿರುವ ಘಟನೆ ...

Published: 12th February 2019 12:00 PM  |   Last Updated: 12th February 2019 02:57 AM   |  A+A-


Representational image

ಸಾಂದರ್ಭಿಕ ಚಿತ್ರ

Posted By : SD SD
Source : The New Indian Express
ಬೆಂಗಳೂರು: ರೈಲಿನಲ್ಲಿ ಪ್ರಯಾಣಿಸುವ ವೇಳೆ ನಿದ್ದೆಯಿಂದ ಪದೇ ಪದೇ ವ್ಯಕ್ತಿಯೊಬ್ಬರ ಭುಜದ ಮೇಲೆ ಬೀಳುತ್ತಿದ್ದ ಸಹ ಪ್ರಯಾಣಿಕನಿಗೆ ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರಿನ ಪೂರ್ವ ರೈಲ್ವೆ ವಿಭಾಗದಲ್ಲಿ ನಡೆದಿದೆ,

ಎಲಿಲ್ ಅರಸಮ್ ರೈಲಿನ ಸೀಟಿನವಲ್ಲಿ ಕುಳಿತು ನಿದ್ದೆ ಮಾಡುತ್ತಿದ್ದ, ಆಗಾಗ್ಗೆ ಪಕ್ಕದಲ್ಲಿ ಕುಳಿತಿದ್ದ ಸಹ ಪ್ರಯಾಣಿಕನ ಭುಜದ ಮೇಲೆ ತೂಕಡಿಸಿ ಬೀಳುತ್ತಿದ್ದ, ಇದರಿಂದ ಕಿರಿಕಿರಿಗೊಂಡ ಆತ ಜಗಳ ಆರಂಭಿಸಿದ್ದಾನೆ. ಇಬ್ಬರ ನಡುವೆ ಜೋರಾದ ವಾಗ್ವಾದ ನಡೆದಿದೆ, 

ಅರಸಮ್ ತನ್ನ ನಿಲ್ದಾಣ ಬಂದು ಇಳಿದಾಗ, ತನ್ನ ಸಹ ಪ್ರಯಾಣಿಕ ಮತ್ತು ಆತನ ಸ್ನೇಹಿತರು ಅರಸಮ್ ಮೇಲೆ ಹಲ್ಲೆ ನಡೆಸಿದ್ದಾರೆ,ಆರ್ ಟಿ ನಗರದ ಕಾವಲ್ ಭೈರಸಂದ್ರದ ನಿವಾಸಿಯಾಗಿರುವ ಎಲಿಲ್ ಅರಸನ್ ಮೇಲೆ ಫೆಬ್ರವರಿ 4 ರಂದು ಹಲ್ಲೆ ನಡೆದಿದ್ದು, ಘಟನೆ ನಡೆದ 5 ದಿನಗಳ ನಂತರ ಪುಲಕೇಶಿ ನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ,

ತಮಿಳುನಾಡಿನಲ್ಲಿರುವ ಅಂಗಾಳ ಪರಮೇಶ್ವರಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ಅರಸಮ್ ಕಟ್ಪಾಡಿಯಿಂದ ಹೊರಡುವ ಮೈಸೂರು ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ,  ತುಂಬಾ ದಣಿದಿದ್ದ ಆತನಿಗೆ ರೈಲು ಹತ್ತಿದ ತಕ್ಷಣವೇ ನಿದ್ದೆ ಬಂದಿತ್ತು, ರೈಲು ಬಂಗಾರಪೇಟೆ ತಲುಪಿತ್ತು, ಅಷ್ಟರಲ್ಲಿ ಅರಸಮ್ ತಮ್ಮ ಸಹ ಪ್ರಯಾಣಿಕನ ಭುಜದ ಮೇಲೆ ಹಲವು ಬಾರಿ ಬಿದ್ದಿದ್ದ, ಇದಕ್ಕಾಗಿ ಆತ ಕೋಪಗೊಂಡು ಬೈಯ್ದಿದ್ದ, ತಾನು ದಣಿದಿದ್ದು ನಿದ್ದೆಯಲ್ಲಿ ನಿನ್ನ ಮೇಲೆ ಬಿದ್ದಿದ್ದು ಗೊತ್ತಾಗಲಿಲ್ಲ ಎಂದು ಹೇಳಿದ್ದಾನೆ,

ರೈಲು ಕೆ.ಆರ್ ಪುರಂ ತಲುಪಿದಾಗ ನನ್ನ ಸಂಬಂಧಿ ದಯಾಳ್ ಗೆ ಕರೆ ಮಾಡಿ ನನ್ನನ್ನು ಕರೆದುಕೊಂಡು ಹೋಗುವಂತೆ ಹೇಳಿದೆ, ನಾನು ಮಾತನಾಡುವುದನ್ನು ಕೇಳಿಸಿಕೊಂಡ ಆತ ನಾನು ರೈಲಿನಿಂದ ಇಳಿಯುತ್ತಿರುವುದನ್ನು ತಿಳಿದುಕೊಂಡಿದ್ದಾನೆ,  ನಾನು ರೈಲಿನಿಂದ ಇಳಿದ ಕೂಡಲೇ ಆತ ತನ್ನ ಸ್ನೇಹಿತರಿಗೆ ಕರೆ ಮಾಡಿ ಕರೆಸಿ ಅವರ ಜೊತೆಗೂಡಿ  ನನ್ನ ಮೇಲೆ ಹಲ್ಲೆ ನಡೆಸಿದ ಎಂದು ಅಸರಾಮ್ ಪೊಲೀಸರಿಗೆ ತಿಳಿಸಿದ್ದಾನೆ, ರಾತ್ರಿ 8.10ರ ಸುಮಾರಿಗೆ ಈ ಘಟನೆ ನಡೆದಿದ್ದು, ಅವರು ನನಗೆ ಕೊಲ್ಲುವ ಬೆದರಿಕೆ ಹಾಕಿದರು,  ಅವರಿಂದ ನಾನು ಬಚಾವ್ ಆಗಿ ಬಂದೆ, ಅಲ್ಲಿಗೆ ಬಂದ ದಯಾಳ್ ನನ್ನನ್ನು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ ಎಂದು ಹೇಳಿದ್ದಾನೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp