ಕಳ್ಳತನ ಮಾಡಬೇಡಿ ಎಂದಿದ್ದ ಸೂಪರ್‌ವೈಜರ್ ಕೊಲೆ: ನಾಲ್ವರ ಬಂಧನ

ಕಬ್ಬಿಣದ ಪೈಪ್ ಕಳವಿನಲ್ಲಿ ತೊಡಗಿದ್ದವರ ವಿರುದ್ಧ ದೂರು ನೀಡಲು ಮುಂದಾಗಿದ್ದ ಸೂಪರ್‌ವೈಜರ್ ನ್ನನ್ನು ಕೊಲೆ ಮಾಡಿದ್ದ ಆರೋಪದಡಿ ಬೆಂಗಳೂರು ಪೋಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಕಳ್ಳತನ ಮಾಡಬೇಡಿ ಎಂದಿದ್ದ ಸೂಪರ್‌ವೈಜರ್ ಕೊಲೆ: ನಾಲ್ವರ ಬಂಧನ
ಕಳ್ಳತನ ಮಾಡಬೇಡಿ ಎಂದಿದ್ದ ಸೂಪರ್‌ವೈಜರ್ ಕೊಲೆ: ನಾಲ್ವರ ಬಂಧನ
ಬೆಂಗಳೂರು: ಕಬ್ಬಿಣದ ಪೈಪ್ ಕಳವಿನಲ್ಲಿ ತೊಡಗಿದ್ದವರ ವಿರುದ್ಧ ದೂರು ನೀಡಲು ಮುಂದಾಗಿದ್ದ ಸೂಪರ್‌ವೈಜರ್ ನ್ನನ್ನು ಕೊಲೆ ಮಾಡಿದ್ದ ಆರೋಪದಡಿ ಬೆಂಗಳೂರು ಪೋಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ಗಾಂಧಿನಗರದ ಮಹಮದ್ ಏಜಾಜ್ ಷರೀಫ್, ಮಹಮದ್ ಪ್ಯಾರು, ಸುಹೇಲ್ ಅಹಮದ್ ಹಾಗೂ ಸುಬ್ರಮಣ್ಯಪುರ ನಿವಾಸಿ ಇಸ್ಮಾಯಿಲ್ ಎನ್ನುವವರನ್ನು ಕಗ್ಗಲಿಪುರ ಪೋಲೀಸರು ಬಂಧಿಸಿದ್ದಾರೆ.

ಕನಕಪುರ ಮುಖ್ಯರಸ್ತೆ ಕಗ್ಗಲೀಪುರ ಟೌನ್ ಕೆರೆ ಸಮೀಪದ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿಉದ್ದ ವೇಳೆ ಫೆ.7ರಂದು ಅಪರಿಚಿತ ವ್ಯಕ್ತಿಯ ಮೃತದೇಹವೊಇಂದು ಗೊಣಿ ಚೀಲದಲ್ಲಿ ಪತ್ತೆಯಾಗಿತ್ತು. ವ್ಯಕ್ತಿಯ ಎರಡು ಕಾಲನ್ನು ಕತ್ತರಿಸಿ ಗೋಣಿಚೀಲದಲ್ಲಿ ತುಂಬಿಸಿ ದುಷ್ಕರ್ಮಿಗಳು ಎಸೆದು ಹೋಗಿದ್ದರು. 

ಘಟನೆಯ ಕುರಿತು ತನಿಖೆ ಕೈಗೊಂಡ ಕಗ್ಗಲಿಪುರ ಪೋಲೀಸರಿಗೆ ಆತ ಆಂಧ್ರಪ್ರದೇಶ ಕಡಪ ಜಿಲ್ಲೆ ಪುಲಿವೆಂದಲ ತಾಲೂಕಿನ ಗಂಗಾರಪುವಂಡ್ಲಪಲ್ಲಿ ಗ್ರಾಮದ ಸಗಿಲಿ ನಾಗೇಶ್ವರರೆಡ್ಡಿ (32)  ಎಂದು ತಿಳಿದು ಬಂದಿದೆ.ರಸ್ತೆ ಅಗಲೀಕರಣ ಕಾಮಗಾರಿ ನಡೆಸುವ ಸ್ಥಳದಲ್ಲಿ ಜೀಪ್ ಚಾಲಕನಾಗಿದ್ದ ಏಜಾಜ್ ಕಾಮಗಾರಿಗೆ ಬಳಸುವ ಕಬ್ಬಿಣದ ಪೈಪ್ ಗಳನ್ನು ಕಳವು ಮಾಡುತ್ತಿದ್ದ. ಈತ ಇತರೆ ಮೂವರೊಡನೆ ಸೇರಿ ಈ ರೀತಿ ಕಬ್ಬಿಣದ ವಸ್ತುಗಳನ್ನು ಕದ್ದು ಮಾರಾಟ ಮಾಡುತ್ತಿದ್ದ. ಇದರ ಕುರಿತು ತಿಳಿದ ಸೂಪರ್‌ವೈಜರ್ ನಾಗೇಶ್ವರರೆಡ್ಡಿ ಈ ರೀತಿ ಕಳವು ಮಾಡಬೇಡಿ ಎಂದು ಹೇಳಿದ್ದಲ್ಲದೆ ಹೀಗೊಮ್ಮೆ ಮುಂದುವರಿದರೆ ಆತನನ್ನು ಕೆಲಸದಿಂದ ಬಿಡಿಸಿ ಪೋಲೀಸರಿಗೆ ದೂರು ಸಲ್ಲಿಸುವುದಾಗಿ ಎಚ್ಚರಿಸಿದ್ದ. ಇದರಿಂದ ಬೇಸತ್ತ ನಾಲ್ವರೂ ಸೇರಿ ನಾಗೇಶ್ವರರೆಡ್ಡಿಯನ್ನು ಸಂಚು ರೂಪಿಸಿ ಕೊಂದು ಹಾಕಿದ್ದಾರೆ.

ಕೃತ್ಯ ಹೊರಗೆ ಬರಬಾರದೆಂದು ಶವದ ಕಾಲನ್ನು ಕತ್ತರಿಸಿ ಮ್ಯಾನ್ ಹೋಲೆಗೆ ಎಸೆದ ದುಷ್ಕರ್ಮಿಗಳು ಮೃತದೇಹವನ್ನು ಚೀಲದಲ್ಲಿ ತುಂಬಿ ಕಗ್ಗಲಿಪುರ ಕೆರೆ ಸಮೀಪ ಎಸೆದು ಹೋಗೊದ್ದರು.

ಪ್ರಕರಣ ಬೇಧಿಸಿರುವ ಪೋಲೀಸರು ಇದೀಗ ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ವಾಹನ, ಆಯುಧ ಸೇರಿ ಕಳ್ಳತನವಾಗಿದ್ದ ಸುಮಾರು ಮೂರೂವರೆ ಟನ್ ತೂಕದ ಕಬ್ಬಿಣದ ಸಾಮಾನುಗಳನ್ನೂ ವಶಕ್ಕೆ ಪಡೆಇದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com