ರಸ್ತೆ ಬದಿ ಬಿದ್ದಿದ್ದ ನವಜಾತ ಶಿಶುವಿಗೆ ಎದೆಹಾಲು ಉಣಿಸಿ ಮಾನವೀಯತೆ ಮೆರೆದ ಪೇದೆ!

ರಸ್ತೆ ಬದಿ ಬಿದ್ದಿದ್ದ ಒಂದು ದಿನದ ಹಸುಗೂಸಿಗೆ ಎದೆಹಾಲು ಉಣಿಸುವ ಮೂಲಕ ಬೆಂಗಳೂರಿನ ಮಹಿಳಾ ಪೋಲೀಸ್ ಪೇದೆಯೊಬ್ಬರು ಮಾನವೀಯತೆ ಮೆರೆದ ಪ್ರಕರಣ ನಡೆದಿದೆ.
ರಸ್ತೆ ಬದಿ ಬಿದ್ದಿದ್ದ ನವಜಾತ ಶಿಶುವಿಗೆ ಎದೆಹಾಲು ಉಣಿಸಿ ಮಾನವೀಯತೆ ಮೆರೆದ ಪೇದೆ!
ರಸ್ತೆ ಬದಿ ಬಿದ್ದಿದ್ದ ನವಜಾತ ಶಿಶುವಿಗೆ ಎದೆಹಾಲು ಉಣಿಸಿ ಮಾನವೀಯತೆ ಮೆರೆದ ಪೇದೆ!
ಬೆಂಗಳೂರು: ರಸ್ತೆ ಬದಿ ಬಿದ್ದಿದ್ದ ಒಂದು ದಿನದ ಹಸುಗೂಸಿಗೆ ಎದೆಹಾಲು ಉಣಿಸುವ ಮೂಲಕ ಬೆಂಗಳೂರಿನ ಮಹಿಳಾ ಪೋಲೀಸ್ ಪೇದೆಯೊಬ್ಬರು ಮಾನವೀಯತೆ ಮೆರೆದ ಪ್ರಕರಣ ನಡೆದಿದೆ.
ಒಂದು ದಿನದ ಹಿಂದೆ ಜನಿಸಿದ್ದ ಹೆಣ್ಣು ಮಗುವೊಂದನ್ನು ಯಾರೋ ಅಪರಿಚಿತರು ಯಲಹಂಕದ ಜಿಕೆವಿಕೆ ಕ್ಯಾಂಪಸ್ ಸಮೀಪ ರಸ್ತೆ ಬದಿ ಎಸೆದು ಹೋಗಿದ್ದಾರೆ.ಇದನ್ನು ಕಂಡ ರಸ್ತೆಯಲ್ಲಿ ಸಂಚರಿಸುತ್ತಿದ್ದ ದಾರಿಹೋಕರೊಬ್ಬರು ಶಿಶುವಿನ ರಕ್ಷಣಾ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದ ಕಾರ್ಯಕರ್ತರು ಸ್ಥಳಕ್ಕಾಗಮಿಸಿ ನವಜಾತ ಶಿಶುವನ್ನುಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು.
ಈ ವೇಳೆ ಆಸ್ಪತ್ರೆಗೆ ಆಗಮಿಸಿದ್ದ ಯಲಹಂಕ ಠಾಣೆಯ ಮಹಿಳಾ ಪೇದೆ  ಸಂಗೀತಾ ಎಸ್‌ ಹಲಿಮನಿ ಮಗುವನ್ನು ಎತ್ತಿಕೊಂಡು ಎದೆಹಾಲು ಉಣಿಸಿದ್ದಾರೆ. ಈಕೆ ತಾವು ಸ್ವತಃಅ ಹತ್ತು ತಿಂಗಳ ಹೆಣ್ಣು ಮಗುವಿನ ತಾಯಿಯಾಗಿದ್ದು ಸಂಗೀತಾ ಅವರ ಕಾರ್ಯಕ್ಕೆ ಆಸ್ಪತ್ರೆಯ ವೈದ್ಯರು ಮೆಚ್ಚುಗೆ ಸೂಚಿಸಿದ್ದಾರೆ.
ಇದಕ್ಕೆ ಮುನ್ನ ಮಗುವಿಗೆ ಫಾರ್ಮುಲಾ ಹಾಲು ನೀಡಲಾಗಿತ್ತು ಎಂದು ವೈದ್ಯರು ಮಾಹಿತಿ ನೀಡಿದರು. 
"ಮಗು ನನ್ನ ಮಗಳನ್ನೇ ನೆನಪಿಗೆ ತಂದಿತ್ತು, ನಾನು ವೈದ್ಯರ ಸಮತಿ ಪಡೆದು ಹಾಲೂಡಿಸಿದ್ದೇನೆ. ಮಗು ಆರೋಗ್ಯವಾಗಿದೆ" ಸಂಗೀತಾ ಹೇಳಿದ್ದಾರೆ.
ಸದ್ಯ ಮಗುವಿನ ಆರೋಗ್ಯ ಸ್ಥಿತಿ ಸುಧಾರಿಸಿದ್ದು ಇದೀಗ ಮಗುವನ್ನು ವಾಣಿವಿಲಾಸ ಆಸ್ಪತ್ರೆಗೆ ದಾಖಲಿಸಲಾಗಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com