ಬೆಂಗಳೂರು: ದಕ್ಷ ಟ್ರಾಫಿಕ್ ಅಧಿಕಾರಿ ಬಿಪಿ ನಾಗರಾಜು ವರ್ಗಾವಣೆ, ಸ್ಥಳೀಯರ ಆಕ್ರೋಶ

ಖಡಕ್ ಅಧಿಕಾರಿ ಬಿ.ಎಂ. ನಾಗರಾಜು2 2017ರಲ್ಲಿ ಕುಮಾರಸ್ವಾಮಿ ಟ್ರಾಫಿಕ್ ಪೊಲೀಸ್ ಠಾಣೆ ಸರ್ಕಲ್ ಇನ್ಸ್ ಪೆಕ್ಟರ್ ಆಗಿ ಅಧಿಕಾರ ವಹಿಸಿಕೊಂಡಾಗಿನಿಂದ , ಕನಕಪುರ, ಬನಶಂಕರಿ ಮತ್ತು ಸುತ್ತಮುತ್ತಲ ಪ್ರದೇಶ....
ಬೆಂಗಳೂರು: ದಕ್ಷ ಟ್ರಾಫಿಕ್ ಅಧಿಕಾರಿ ಬಿಪಿ ನಾಗರಾಜು ವರ್ಗಾವಣೆ, ಸ್ರ್ಗಳೀಯರ ಆಕ್ರೋಶ
ಬೆಂಗಳೂರು: ದಕ್ಷ ಟ್ರಾಫಿಕ್ ಅಧಿಕಾರಿ ಬಿಪಿ ನಾಗರಾಜು ವರ್ಗಾವಣೆ, ಸ್ರ್ಗಳೀಯರ ಆಕ್ರೋಶ
ಬೆಂಗಳೂರು: ಖಡಕ್ ಅಧಿಕಾರಿ ಬಿ.ಪಿ. ನಾಗರಾಜು2 2017ರಲ್ಲಿ ಕುಮಾರಸ್ವಾಮಿ ಟ್ರಾಫಿಕ್ ಪೊಲೀಸ್ ಠಾಣೆ ಸರ್ಕಲ್ ಇನ್ಸ್ ಪೆಕ್ಟರ್ ಆಗಿ ಅಧಿಕಾರ ವಹಿಸಿಕೊಂಡಾಗಿನಿಂದ , ಕನಕಪುರ, ಬನಶಂಕರಿ ಮತ್ತು ಸುತ್ತಮುತ್ತಲ ಪ್ರದೇಶದ ನಿವಾಸಿಗಳು ತಮ್ಮ ಸಂಚಾರ ಸಮಸ್ಯೆಗಳಿಂದ ತ್ವರಿತಗತಿಯಲ್ಲಿ ಪಾರಾಗಿದ್ದಾರೆ.ನಾಗರಾಜು ಕೇವಲ ಟ್ರಾಫಿಕ್ ಪೋಲೀಸರ ಕೆಲಸವನ್ನಷ್ತೇ ಮಾಡಿದವರಲ್ಲ, ಅವರು ರಸ್ತೆ ಗುಂಡಿಗಳನ್ನು ಮುಚ್ಚಿ ದೊಡ್ಡ ರಸ್ತೆಗಳ ಸುರಕ್ಷತೆಗೆ ಸಹ ಗಮನ ನೀಡುತ್ತಿದ್ದರು.ಇದಕ್ಕಾಗಿ ಅವರು ಬಿಬಿಎಂಪಿ, ಬಿಎಂಆರ್ ಸಿಎಲ್ ಇಂಜಿನಿಯರ್ ಗಳ ಮೇಲೆ ಒತ್ತಡ ಹೇರಿದ್ದರು.
ಆದರೆ ಈಗ ಈ ಅಧಿಕಾರಿ ಬೇರೆ ಪ್ರದೇಶಕ್ಕೆ ವರ್ಗವಾಗಿದ್ದಾರೆ.ಇದರಿಂದಾಗಿ ಈ ಪ್ರದೇಶದ ನಿವಾಸಿಗಳು ಆಘಾತಗೊಂಡಿದ್ದಾರೆ.ಈ ಸಂಬಂಧ ಯುನೈಟೆಡ್ ಫೆಡರೇಶನ್ ಆಫ್ ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಷನ್ ​​(ಯುಎಫ್ಇಆರ್ಡಬ್ಲ್ಯುಎಸ್)  ಸಂಘಟನೆಯಡಿಯಲ್ಲಿ ನಿವಾಸಿಗಳು ಪ್ರತಿಭಟನೆ ನಡೆಸಲು ಚಿಂತನೆ ನಡೆಸಿದ್ದಾರೆ. ಅಧಿಕಾರಿಯ ವರ್ಗಾವಣೆ ಹಿಂಪಡೆಯುವಂತೆ ಸರ್ಕಾರವನ್ನು ಒತ್ತಾಯಿಸಲು ಅವರು ತೀರ್ಮಾನಿಸಿದ್ದಾರೆ.
"ಈ ವಿಭಾಗದಲ್ಲಿ ಸುಮಾರು ಮೂವತ್ತೈದು ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಷನ್ ಗಳಿದ್ದು ನಾಗರಾಜು ಅವರ ವರ್ಗಾವಣೆ ವಿರುದ್ಧ ಅವರುಗಳೆಲ್ಲಾ ಒಟ್ತಾಗಿ ಹೋರಾಡಲು ತೀರ್ಮಾನಿಸಿದ್ದಾರೆ.ಇದಕ್ಕೆ ಹಿಂದೆ ಬನಶಂಕರಿ ಬಸ್ ನಿಲ್ದಾಣ-ನೈಸ್ ರಸ್ತೆವರೆಗಿನ ಮಾರ್ಗ ಯಾವುದೇ ರಸ್ತೆ ನಿಯಮಾವಳಿಗಳ ಪಾಲನೆ ಇಲ್ಲದೆ ಅಶಿಸ್ತಿಗೆ ಹೆಅರಾಗಿತ್ತು. ಪಾದಚಾರಿ ಮತ್ತು ವಾಹನ ಅಪಘಾತಗಳು ಮಾಮೂಲಿಯಾಗಿದ್ದವು. ಆದರೆ ನಾಗರಾಜು ಅವರು ನೇಮಕವಾದ ಮೇಲೆ ಇದು ಗಣನೀಯ ಪ್ರಮಾಣದಲ್ಲಿ ತಗ್ಗಿದೆ"ಬಾಲಾಜಿ ಲೇಔಟ್ ನಿವಾಸಿ ವಿಕೆ ಶ್ರೀವತ್ಸ  ಹೇಳಿದ್ದಾರೆ.
"ನಾಗರಾಜು ನವೆಂಬರ್ 2017ರಲ್ಲಿ ಅಧಿಕಾರ ಸ್ವೀಕರಿಸಿದಾಗ ಅವರು ಈ ರಸ್ತೆಯಲ್ಲಿದ್ದ ಅರ್ಧದಷ್ಟು ಯು ಟರ್ನ್ ಗಳನ್ನು ಮುಚ್ಚಿದ್ದರು.ಬಿಬಿಎಂಪಿ ಜತೆ ಸೇರಿ ರಸ್ತೆಯಲ್ಲಿನ ಪಾಟ್ ಹೋಲ್ ಗಳ ಮುಚ್ಚುವಿಕೆ, ರಸ್ತೆ ವಿಭಜಕಗಳ ನಿರ್ಮಾಣವನ್ನೂ ಮಾಡಿದ್ದಾರೆ.ಅವರು ನಾಗರಿಕರೊಡನೆ ಸೇರಿ ಒಂದು ವಾಟ್ಸಪ್ ಗ್ರೂಪ್ ರಚಿಸಿದ್ದು ಕನಕಪುರ ರಸ್ತೆಯಲ್ಲಿ ಉಂತಾಗುವ ಎಲ್ಲಾ ಬಗೆಯ ಟ್ರಾಫಿಕ್ ಸಮಸ್ಯೆಗಳ ಕುರಿತು ತಕ್ಷಣ ಸಂದೇಶ ರವಾನಿಸಲು ಹೇಳಿದ್ದರು"" ಶ್ರೀವತ್ಸ ವಿವರಿಸಿದರು.
ಎರಡು ವಾರಗಳ ಹಿಂದೆ ನಾಗರಾಜು ಅವರ ವರ್ಗಾವಣೆ ವಿಚಾರ ನಿವಾಸಿಗಳ ಕಿವಿಗೆ ಬಿದ್ದಿದೆ. ಅಲ್ಲಿಂದಲೂ ಅವರು ಹಲವು ಬಾರಿ ಸಭೆ ನಡೆಸಿದ್ದು ಬೇರೆ ಬೇರೆ ಅಧಿಕಾರಿಗಳನ್ನು ಭೇಟಿಯಾಗಿ ವರ್ಗಾವಣೆ ತಡೆಗೆ ಮನವಿ ಸಲ್ಲಿಸಿದ್ದರು."ಅವರು ಪ್ರಾಮಾಣಿಕರು, ಸ್ನೇಹಪರರಾಗಿದ್ದರು.. ನಾವು ಅವರ ಸೇವೆಯನ್ನು ಕಳೆದುಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ. ಇದಕ್ಕೆ ನಮ್ಮ ವಿರೋಧವಿದೆ.ಉತ್ತಮ ಅಧಿಕಾರಿಗಳಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸುವ ಬದಲು ಅಕಾಲಿಕ ವರ್ಗಾವಣೆಗಳ ಮೂಲಕ ಅವರಿಗೆ ವೇದನೆ ನಿಡಲಾಗುತದೆ.ಕಳೆದ ಒಂದೂವರೆ ವರ್ಷದಿಂದ ಅವರು ನಮ್ಮೊಡನಿದ್ದರು. ನಮ್ಮ ಅಭಿಯಾನದ ಹೊರತೂ ಅವರನ್ನು ವರ್ಗಾವಣೆ ಮಾಡಲಾಗಿದೆ ಎನ್ನುವುದಕ್ಕೆ ನಮಗೆ ತೀವ್ರ ಅಸಮಾಧಾನವಿದೆ"ನಾಗೇಗೌಡನಪಾಳ್ಯದ ನಿವಾಸಿ ಚೈತನ್ಯ ಸುಬ್ರಹ್ಮಣ್ಯ ಹೇಳಿದ್ದಾರೆ.
"ಒಮ್ಮೆ ನಮ್ಮ ಅಪಾರ್ಟ್ ಮೆಂಟ್ ಬಳಿ ಇದ್ದ ಮೆಕ್ಯಾನಿಕ್ ಅಂಗಡಿಯವರು ರಸ್ತೆ ಮೇಲೆ ಚೂಪಾದ ಗಾಜಿನ ಚೂರುಗಳನ್ನು ಹಾಕುತ್ತಿದ್ದರು. ಅದರಿಂದ ಅಲ್ಲಿ ಓಡಾಡುವ ವಾಹನಗಳ ಟಯರ್ ಪಂಕ್ಚರ್ ಆಗಿ ಅವರು ಅದೇ ಅಂಗಡಿಯಲ್ಲಿ ರಿಪೇರಿ ಮಾಡಿಸಿಕೊಳ್ಲುವ ಅನಿವಾರ್ಯತೆ ಸೃಷ್ಟಿಯಾಗುತ್ತಿತ್ತು. ಆಗ ನಾವು ನಾಗರಾಜು ಅವರಿಗೆ ಈ ವಿಚಾರ ತಿಳಿಸಿದ್ದೆವು. ಅವರು ಕೆಲ ಕಾನ್ಸ್ಟೇಬಲ್ ಜತೆ ಆಗಮಿಸಿ ರಸ್ತೆ ಮೇಲಿದ್ದ ಚೂಪಾದ ವಸ್ತುಗಳನ್ನು ತೆಗೆದದ್ದಲ್ಲದೆ ಮೆಕ್ಯಾನಿಕ್ ಶಾಪ್ ನವರಿಗೆ ಎಚ್ಚರಿಕೆಯನ್ನೂ ನಿಡಿದ್ದರು. ಅಲ್ಲಿಂದೀಚೆಗೆ ನಮಗೆ ಯಾವುದೇ ಸಮಸ್ಯೆಗಳಿರಲಿಲ್ಲ" ಚೈತನ್ಯ ಅಧಿಕಾರಿಯ ಪ್ರಾಮಾಣಿಕ ಕರ್ತವ್ಯ ನಿಷ್ಠೆ ಬಗ್ಗೆ ವಿವರಿಸಿದ್ದಾರೆ.
ರಾಜಕೀಯ ಒತ್ತಡವು ಅವರ ವರ್ಗಾವಣೆಗೆ ಕಾರಣವಾಯಿತು ಎಂದು ನಿವಾಸಿಗಳು ದೂರಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com