ಬೆಂಗಳೂರು: ದೈಹಿಕ ಸಂಬಂಧ ಹೊಂದದ ಪತಿ ವಿರುದ್ಧ ಮಹಿಳೆ ದೂರು

ನನ್ನ ಪತಿ ಮದುವೆಯಾದಾಗಿನಿಂದ ನನ್ನೊಂದಿಗೆ ದೈಹಿಕ ಸಂಬಂಧ ಹೊಂದಿಲ್ಲ ಎಂದು ಆರೋಪಿಸಿ ಮಹಿಳೆಯೊಬ್ಬರು ಪತಿ...
ಬೆಂಗಳೂರು: ನನ್ನ ಪತಿ ಮದುವೆಯಾದಾಗಿನಿಂದ ನನ್ನೊಂದಿಗೆ ದೈಹಿಕ ಸಂಬಂಧ ಹೊಂದಿಲ್ಲ ಎಂದು ಆರೋಪಿಸಿ ಮಹಿಳೆಯೊಬ್ಬರು ಪತಿ, ಅತ್ತೆ ಹಾಗೂ ಮಾವನ ವಿರುದ್ಧ ಕೇಸ್ ದಾಖಲಿಸಿದ್ದಾರೆ.
ಬಾಣಸವಾಡಿ ಠಾಣಾ ವ್ಯಾಪ್ತಿಯ ನಿವಾಸಿ 37 ವರ್ಷದ ಮಹಿಳೆ ತನ್ನ ಪತಿ, ಅತ್ತೆ ಹಾಗೂ ಮಾವನ ವಿರುದ್ಧ 11ನೇ ಎಸಿಎಂಎಂ ಕೋರ್ಟ್ ನಲ್ಲಿ ಕೇಸ್ ದಾಖಲಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್, ದೂರು ಆಧರಿಸಿ ತನಿಖೆ ನಡೆಸುವಂತೆ ಪೊಲೀಸರಿಗೆ ಆದೇಶಿಸಿದೆ.
ಕೋರ್ಟ್ ಆದೇಶದನ್ವಯ ಬಾಣಸವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
2012 ರಲ್ಲಿ ನನ್ನ ಮದುವೆಯಾಯಿತು. ಅಂದಿನಿಂದಲೂ ಪತಿ ದೈಹಿಕ ಸಂಪರ್ಕ ಮಾಡಲೇ ಇಲ್ಲ.. ಆ ಬಗ್ಗೆ ಏನೂ ಹೇಳಲೂ ಇಲ್ಲ. ಒಂದು ದಿನ ಟೇಬಲ್ ಡ್ರಾಯರ್ ನಲ್ಲಿ ಮೆಡಿಕಲ್ ವರದಿಯೊಂದು ಸಿಕ್ಕಿತು. ಪತಿಗೆ ಎಚ್‌ಬಿಆರ್ ಕಾಯಿಲೆ ಇದ್ದು ಲೈಂಗಿಕ ಸಂಪರ್ಕ ಸಾಧಿಸಲು ಅಸಾಧ್ಯ ಎಂಬ ಸ್ಥಿತಿ ಗೊತ್ತಾಯಿತು. 
ಪತಿ ಮತ್ತು ಪತಿ ಮನೆಯವರು ಈ ವಿಚಾರವನ್ನು ಮುಚ್ಚಿಟ್ಟು ನನ್ನನ್ನು ಮನೆ ತುಂಬಿಸಿಕೊಂಡಿದ್ದಾರೆ. ವಂಚನೆಯಾಗಿದ್ದು ಕಾನೂನು ರೀತಿ ನ್ಯಾಯ ದೊರಕಿಸಿ ಕೊಡಬೇಕು ಎಂದು ಮಹಿಳೆ ದೂರಿನಲ್ಲಿ ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com