ಲಿಂಗನಮಕ್ಕಿಯಿಂದ ನೀರು ತರಲು ಮಾರ್ಗ ಪರಿಶೀಲನೆ; ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ

ಬೆಂಗಳೂರು ನಗರದಲ್ಲಿ ಕುಡಿಯುವ ನೀರಿನ ಕೊರತೆ ನೀಗಿಸಲು ಲಿಂಗನಮಕ್ಕಿ ಜಲಾಶಯದಿಂದ ನೀರು ತರಲು ಮಾರ್ಗ ಪರಿಶೀಲಿಸಲಾಗುತ್ತಿದೆ ಎಂದು ...
ಪರಮೇಶ್ವರ್
ಪರಮೇಶ್ವರ್
ಬೆಂಗಳೂರು: ಬೆಂಗಳೂರು ನಗರದಲ್ಲಿ ಕುಡಿಯುವ ನೀರಿನ ಕೊರತೆ ನೀಗಿಸಲು ಲಿಂಗನಮಕ್ಕಿ ಜಲಾಶಯದಿಂದ ನೀರು ತರಲು ಮಾರ್ಗ ಪರಿಶೀಲಿಸಲಾಗುತ್ತಿದೆ ಎಂದು ಉಪಮುಖ್ಯತ್ರಿ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ಡಾ.ಬಾಬು ಜಗಜೀವನ್‌ರಾಮ್ ಅವರ 33 ನೇ ಪುಣ್ಯ ಸ್ಮರಣೆ ದಿನ ಅಂಗವಾಗಿ ಇಂದು ವಿಧಾನಸೌಧ ಎದುರು ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಮಾತನಾಡಿದ ಅವರು, ಕೆಆರ್‌ಎಸ್‌ನಲ್ಲಿ ಕೇವಲ 80 ಅಡಿ ನೀರಿದ್ದು, ಒಂದು ತಿಂಗಳ ಅವಧಿಗೆ ಮಾತ್ರ ಬೆಂಗಳೂರಿಗೆ ನೀರು ಹರಿಸಲು ಸಾಧ್ಯ ಎಂದು ಹೇಳಿದ್ದಾರೆ.
ಮಳೆ ಬಾರದೆ, ಒಳಹರಿವು ಹೆಚ್ಚಾಗದೇ ಬೆಂಗಳೂರಿಗೆ ನೀರು ಸಿಗುವುದೇ ಕಷ್ಟವಾಗಿದೆ. ಲಿಂಗನಮಕ್ಕಿಯಿಂದ ನೀರು ತರಿಸಲು ಸಮಗ್ರ ಯೋಜನಾ ವರದಿ(ಡಿಪಿಆರ್‌) ಸಿದ್ದಪಡಿಸಲಾಗುತ್ತಿದೆ. ಶಿವಮೊಗ್ಗ, ಚಿತ್ರದುರ್ಗ, ವಾಣಿವಿಲಾಸದಿಂದ ನಗರಕ್ಕೆ ನೀರು ತರಲು ಮಾರ್ಗ ಗುರುತಿಸಲಾಗಿದೆ ಎಂದು ಹೇಳಿದರು.
ಲಿಂಗನ ಮಕ್ಕಿಯಿಂದ ನೀರನ್ನು ಯಾವ ಕಡೆಯಿಂದ ನೀರು ತರಬಹುದು. ಶಿವಮೊಗ್ಗ- ಚಿತ್ರದುರ್ಗ- ವಾಣಿ ವಿಲಾಸ- ಹೆಸರಘಟ್ಟ ದ ಮೂಲಕ ನೀರು ತರುವ ಬಗ್ಗೆ ಪರಿಶೀಲನೆ ಮಾಡುತ್ತಿದ್ದಾರೆ. ಒಂದು ವೇಳೆ ಇದು ಸಾಧ್ಯತೆ ಇದ್ದರೆ ಆ ಬಳಿಕ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.
ಬೆಂಗಳೂರು: ಕೃಷ್ಣ ರಾಜಸಾಗರದ ಅಣೆಕಟ್ಟಿನಲ್ಲಿ(ಕೆಆರ್‍ಎಸ್) 80 ಅಡಿ ನೀರು ಇದೆ. ಹೀಗಾಗಿ ಇನ್ನು ಒಂದು ತಿಂಗಳು ಮಾತ್ರ ಬೆಂಗಳೂರಿಗೆ ಕುಡಿಯವ ನೀರು ಕೊಡುವ ಸಾಧ್ಯತೆ ಇದೆ. ಒಂದು ವೇಳೆ ಮಳೆ ಬರದೇ ಇದ್ದಲ್ಲಿ ಅಥವಾ ಒಳ ಹರಿವು ಬರದೇ ಹೋದಲ್ಲಿ ಬೆಂಗಳೂರಿಗೆ ನೀರು ಕೊಡಲು ಸಾಧ್ಯವಿಲ್ಲ. ಇಂತಹ ಪರಿಸ್ಥಿಗೆ ನಾವು ಬಂದಿದ್ದೇವೆ ಎಂದು ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com