ಮೈಸೂರಿನಿಂದ ಗೋವಾ, ಹೈದರಾಬಾದ್ ಗೆ ವಿಮಾನ ಸಂಪರ್ಕ

ಇಲ್ಲಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಹೈದರಾಬಾದ್, ಕೊಚ್ಚಿ ಮತ್ತು ಗೋವಾ ನಗರಗಳಿಗೆ ವಿಮಾನಯಾನ ಸಂಪರ್ಕ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮೈಸೂರು: ಇಲ್ಲಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಹೈದರಾಬಾದ್, ಕೊಚ್ಚಿ ಮತ್ತು ಗೋವಾ ನಗರಗಳಿಗೆ ವಿಮಾನಯಾನ ಸಂಪರ್ಕ ಇದೇ ತಿಂಗಳ 19ರಿಂದ ಕೇಂದ್ರ ಸರ್ಕಾರದ ಉಡಾನ್ 3 ಯೋಜನೆಯಡಿ ಆರಂಭವಾಗಲಿದೆ. ಏರ್ ಇಂಡಿಯಾದ ಅಂಗಸಂಸ್ಥೆ ಅಲೈಯನ್ಸ್ ಏರ್ ವಿಮಾನ ಹಾರಾಟ ನಡೆಸಲಿದೆ.
ಈ ಮೂಲಕ ಮೈಸೂರಿನಿಂದ ಈ ನಗರಗಳಿಗೆ ಪ್ರತಿದಿನ 5 ವಿಮಾನಗಳು ಹಾರಾಟ ನಡೆಸಲಿದ್ದು 10 ವಿಮಾನಗಳು ದಿನಂಪ್ರತಿ ಆಗಮನ-ನಿರ್ಗಮನವಾಗಲಿದೆ. ಮೈಸೂರಿನಿಂದ ಈಗಾಗಲೇ ಉಡಾನ್ ಯೋಜನೆಯಡಿ ಬೆಂಗಳೂರು ಮತ್ತು ಚೆನ್ನೈಗೆ ವಿಮಾನ ಸೇವೆಯಿದೆ.
ವಿಮಾನ ನಿಲ್ದಾಣಗಳು ಸಾಮಾಜಿಕೃಆರ್ಥಿಕ ಬೆಳವಣಿಗೆ ಸೇರಿದಂತೆ ಕೈಗಾರಿಕೆ ಹಾಗೂ ಪ್ರತಿ ವಲಯಗಳಲ್ಲಿ ಬೆಳವಣಿಗೆಗೆ ಸಹಾಯ ಮಾಡುತ್ತದೆ ಎಂದು ಮೈಸೂರು ವಿಮಾನ ನಿಲ್ದಾಣ ನಿರ್ದೇಶಕ ಆರ್ ಮಂಜುನಾಥ್ ತಿಳಿಸಿದ್ದು, ಪ್ರವಾಸೋದ್ಯಮಕ್ಕೆ ಕೂಡ ನೆರವಾಗಲಿದೆ.
ಹೈದರಾಬಾದ್ ಗೆ ಮೈಸೂರಿನಿಂದ ಸಾಯಂಕಾಲ 7.20ಕ್ಕೆ ವಿಮಾನ ಹೊರಟು ಹೈದರಾಬಾದ್ ಗೆ ರಾತ್ರಿ 9.05ಕ್ಕೆ ತಲುಪಲಿದೆ. ಹೈದರಾಬಾದ್ ನಿಂದ ಮರುದಿನ ಬೆಳಗ್ಗೆ 6.05ಕ್ಕೆ ಹೊರಟು ಮೈಸೂರಿಗೆ ಬೆಳಗ್ಗೆ 7.50ಕ್ಕೆ ತಲುಪಲಿದೆ.
ಕೊಚ್ಚಿಗೆ ಹೊರಡುವ ವಿಮಾನ ಮೈಸೂರಿನಿಂದ ಬೆಳಗ್ಗೆ 8.15ಕ್ಕೆ ಹೊರಟು ಕೊಚ್ಚಿಗೆ ಬೆಳಗ್ಗೆ 9.45ಕ್ಕೆ ತಲುಪಲಿದೆ. ಕೊಚ್ಚಿಯಿಂದ ಬೆಳಗ್ಗೆ 10.10ಕ್ಕೆ ಹೊರಟು ಮೈಸೂರಿಗೆ 11.40ಕ್ಕೆ ತಲುಪಲಿದೆ.
ಗೋವಾಗೆ ಅಪರಾಹ್ನ 3.20ಕ್ಕೆ ಹೊರಟು ಮೈಸೂರಿನಿಂದ ಹೊರಟರೆ 4.50ಕ್ಕೆ ತಲುಪಲಿದೆ.ಗೋವಾದಿಂದ ಸಾಯಂಕಾಲ 5.20ಕ್ಕೆ ಹೊರಟು ಮೈಸೂರಿಗೆ 6.50ಕ್ಕೆ ತಲುಪಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com