ಬೆಂಗಳೂರು: ಮಗನಿಗೆ ಮೊಬೈಲ್‌ ಕೊಟ್ಟು ತಗ್ಲಾಕೊಂಡ ಅಪ್ಪ, ಅಕ್ರಮ ಸಂಬಂಧ ಬಯಲು!

43 ವರ್ಷದ ವ್ಯಕ್ತಿಯೊಬ್ಬ ತನ್ನ ಮಗನಿಗೆ ಗೇಮ್ ಆಡಲು ಮೊಬೈಲ್‌ ಕೊಟ್ಟು ತನ್ನ 15 ವರ್ಷದ ದಾಂಪತ್ಯ ಜೀವನವನ್ನೇ ಮುರಿದುಕೊಳ್ಳುವಂತಾಗಿದೆ.....

Published: 20th July 2019 12:00 PM  |   Last Updated: 20th July 2019 04:16 AM   |  A+A-


Playing games on dad’s mobile, boy stumbles upon affair

ಸಾಂದರ್ಭಿಕ ಚಿತ್ರ

Posted By : LSB LSB
Source : Online Desk
ಬೆಂಗಳೂರು: 43 ವರ್ಷದ ವ್ಯಕ್ತಿಯೊಬ್ಬ ತನ್ನ ಮಗನಿಗೆ ಗೇಮ್ ಆಡಲು ಮೊಬೈಲ್‌ ಕೊಟ್ಟು ತನ್ನ 15 ವರ್ಷದ ದಾಂಪತ್ಯ ಜೀವನವನ್ನೇ ಮುರಿದುಕೊಳ್ಳುವಂತಾಗಿದೆ. 

ಬೆಂಗಳೂರಿನ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ತಂದೆಯ ಅಕ್ರಮ ಸಂಬಂಧವನ್ನು 14 ವರ್ಷದ ಪುತ್ರ ಬಯಲುಗೊಳಿಸಿದ್ದು, ತನ್ನ ತಾಯಿಗೆ ವಿಷಯ ತಿಳಿಸಿದ್ದಾನೆ.

ಮಗ ಗೇಮ್ ಆಡುವುದಕ್ಕಾಗಿ ಅಪ್ಪನ ಮೊಬೈಲ್ ತೆಗೆದುಕೊಂಡಿದ್ದು, ಈ ವೇಳೆ ಅಪ್ಪನ ಅಕ್ರಮ ಸಂಬಂಧ ಪತ್ತೆಯಾಗಿದೆ. ಮೊಬೈಲ್‌ನಲ್ಲಿ ಪರಸ್ತ್ರೀ ಜೊತೆಗೆ ಅಪ್ಪ ನಡೆಸಿದ ಅಶ್ಲೀಲ ಸಂಭಾಷಣೆ ಆಡಿಯೋ, ಅಶ್ಲೀಲ ಚಿತ್ರ ಹಾಗೂ ಮೆಸೇಜ್‌ಗಳು ದೊರೆತಿವೆ. 

ಮಗ, ಅಪ್ಪನ ಅಕ್ರಮ ಸಂಬಂಧವನ್ನು ಅಮ್ಮನಿಗೆ ತಿಳಿಸಿದ್ದು, ಬಳಿಕ 39 ವರ್ಷದ ಮಹಿಳೆ ನಂದಿನಿ(ಹೆಸರು ಬದಲಾಯಿಸಲಾಗಿದೆ) ತನ್ನ ಪತಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಅಕ್ರಮ ಸಂಬಂಧ ಪ್ರಶ್ನಿಸಿದ ತನ್ನ ಮೇಲೆ ಪತಿ ಹಲ್ಲೆ ನಡೆಸಿದ್ದಾರೆ ಎಂದು  ಆರೋಪಿಸಿದ್ದಾರೆ. 

ನಂದಿನಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಟ್ಯೂಷನ್‌ ಅನ್ನೂ ಕೂಡ ನಡೆಸುತ್ತಾರೆ. ಜುಲೈ 11 ರಂದು ಸಾಮಾಜಿಕ ಸಂಸ್ಥೆಯೊಂದರ ಮುಖ್ಯಸ್ಥರಾಗಿರುವ ಪತಿ ನಾಗರಾಜು ಎಂ. ತನ್ನ ಮಗನಿಗೆ ಫೋನ್‌ ನೀಡಿದರು. ಆ ವೇಳೆ ಮೊಬೈಲ್ ಫೋನ್‌ನಲ್ಲಿ ಆಟವಾಡುತ್ತಿದ್ದ ಬಾಲಕ, ಆಕಸ್ಮಿಕವಾಗಿ ಫೋನ್‌ ರೆಕಾರ್ಡರ್‌ ತೆರೆದು ನೋಡಿದಾಗ ಹಾಗೂ ವಾಟ್ಸ್‌ಆ್ಯಪ್‌ನಲ್ಲಿ ಚಾಟ್‌ ಸಂಭಾಷಣೆಗಳು ಹಾಗೂ ಅಶ್ಲೀಲ ಸಂದೇಶಗಳು, ಆಡಿಯೋಗಳನ್ನು ನೋಡಿದ. ತನ್ನ ತಂದೆ ಹಾಗೂ ಮತ್ತೊಬ್ಬ ಮಹಿಳೆಯೊಂದಿಗಿನ ಈ ಸಂಭಾಷಣೆಗಳನ್ನು ನೋಡಿದ ಬಳಿಕ ತಕ್ಷಣ ತನ್ನ ತಾಯಿಗೆ ತೋರಿಸಿದ್ದಾನೆ ಎಂದು ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು ತಿಳಿಸಿದ್ದಾರೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp