ಬೆಂಗಳೂರು: ಪಾರಂಪರಿಕತೆ ಉಳಿಸಿಕೊಂಡೇ ಸ್ಮಾರ್ಟ್ ಆಗಲು ತಯಾರಾದ ಕೆಆರ್ ಮಾರ್ಕೆಟ್

ಶತಮಾನಕ್ಕೆ ಹತ್ತಿರವಾಗಿರುವ ಬೆಂಗಳೂರು ಕೃಷ್ಣರಾಜೇಂದ್ರ ಮಾರುಕಟ್ಟೆ (ಕೆಆರ್ ಮಾರುಕಟ್ಟೆ), ಅದರ ಸೌಂದರ್ಯದ ಗುಣಲಕ್ಷಣಗಳನ್ನು ಉಳಿಸಿಕೊಂಡೇ ಆಧುನಿಕ ಮಾಲ್ ಸ್ವರೂಪ....
ಕಾಲ್ಪನಿಕ ಚಿತ್ರ
ಕಾಲ್ಪನಿಕ ಚಿತ್ರ
ಬೆಂಗಳೂರು: ಶತಮಾನಕ್ಕೆ ಹತ್ತಿರವಾಗಿರುವ ಬೆಂಗಳೂರು ಕೃಷ್ಣರಾಜೇಂದ್ರ ಮಾರುಕಟ್ಟೆ (ಕೆಆರ್ ಮಾರುಕಟ್ಟೆ), ಅದರ ಸೌಂದರ್ಯದ ಗುಣಲಕ್ಷಣಗಳನ್ನು ಉಳಿಸಿಕೊಂಡೇ ಆಧುನಿಕ ಮಾಲ್ ಸ್ವರೂಪ ಹೊಂದಲು ಒಂದು ಮಹತ್ವದ ಹೆಜ್ಜೆ ಇಟ್ಟಿದೆ.ಮಾರುಕಟ್ಟೆ ನವೀಕರಣಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕರೆದ ಟೆಂಡರ್ ಗೆ ಅಂತಿಮ ಮೊಹರು ಬಿದ್ದಿದೆ.
ಬೆಂಗಳುರಿನ ಸ್ಮಾರ್ಟ್ ಸಿಟಿ ಉಪಕ್ರಮದಡಿಯಲ್ಲಿ ಈ ಸಾಂಪ್ರದಾಯಿಕಕಟ್ಟಡದ ವಿನ್ಯಾಸವನ್ನು ಪರಿಷ್ಕರಿಸುವ ಈ ಯೋಜನೆ ಸಹ ಬರಲಿದೆ.ಕಳೆದ ಬಾರಿ ಯಾವೊಬ್ಬ ಬಿಡ್ಡರ್ ಗಳು ಮಾರುಕಟ್ಟ ಕಟ್ಟಡ ನವೀಕರಣಕ್ಕೆ ಬಂದಿಲ್ಲವಾಗಿ ಬಿಬಿಎಂಪುಇ ಈಗ ಟೆಂದರ್ ಕರೆದಿದೆ ಹಾಗೆಯೇ ಈ ಬಾರಿ ಈ ಪ್ರಕ್ರಿಯೆ ಅಂತಿಮಗೊಳಿಸಲು ಪಾಲಿಕೆ ಇಚ್ಚಿಸಿದೆ.ಒಮ್ಮೆ ಓರ್ವ ಗುತ್ತಿಗೆದಾರರು ಕೆಲಸ ಪ್ರಾರಂಭಿಸಿದರೆ ಪೂರ್ಣಗೊಳ್ಲಲು ಎರಡು ವರ್ಷಗಳ ಕಾಲ ತೆಗೆದುಕೊಳ್ಲಲಿದೆ.
14-ಎಕರೆ ವಿಸ್ತೀರ್ಣದ ಕೆಆರ್ ಮಾರುಕಟ್ಟೆಯಲ್ಲಿ ಹಣ್ಣು, ತರಕಾರಿ, ಮಾಂಸ ಮಾರಾಟ ನಡೆಯುತ್ತದೆ.ಆದಾಗ್ಯೂ, ಅಧಿಕಾರಿಗಳು ಇದೀಗ ಅತ್ಯಾಧುನಿಕ ವಿಧಾನದ ಮೂಲಕ  ಹೆಚ್ಚು ಸಂಘಟಿತ ವ್ಯವಸ್ಥೆ ರೂಪಿಸಲು ಸಾಧ್ಯವಿದೆ ಎಂದು ಹೇಳೀದ್ದಾರೆ. ಪ್ರಸ್ತುತ, ನೆಲಮಾಳಿಗೆಯ ಪಾರ್ಕಿಂಗ್ ಸೌಲಭ್ಯಕ್ಕಾಗಿನ ತಾಣ ಕಸವನ್ನು ಡಂಪ್ ಮಾಡುವ ತಾಣವಾಗಿ ಮಾರ್ಪಟ್ಟಿದೆ.ಅಲ್ಲಎ ಈ ಸ್ಥಳದಲ್ಲಿನ ಒಳಮಾರ್ಗಗಳು ಜಾನುವಾರುಗಳ ಅಡ್ಡೆಯಾಗಿದೆ.
ಹೊಸ ಉಪಕ್ರಮದ ಅಡಿಯಲ್ಲಿ,ಸ್ವಯಂಚಾಲಿತ ಪಾರ್ಕಿಂಗ್ ವ್ಯವಸ್ಥೆಯನ್ನು ತರಲಾಗುತ್ತದೆ. ಬೇರೆ ಬೇರೆ ಮಾಲ್ ಗಳಿಗೆ ಸಮಾನವಾಗಿ ಪಾರ್ಕಿಂಗ್ ಸ್ಥಳವನ್ನು ನವೀಕರಿಸಲಾಗುತ್ತದೆ.ಇದು ಪ್ರಸ್ತುತದಲ್ಲಿ ಸಕ್ರಿಯವಾಗಿರುವ ಪಾರ್ಕಿಂಗ್ ಮಾಫಿಯಾವನ್ನು ತಡೆಯಲು ಸಹಕಾರಿಯಾಗಲಿದೆ.ಚಿಕ್ಕಪೇಟೆ  ಮೆಟ್ರೋ ನಿಲ್ದಾಣದಿಂದ ಮಾರುಕಟ್ಟೆಗೆ ಪಾದಚಾರಿ ಮಾರ್ಗವಿರಲಿದೆ.58 ಕೋಟಿ ರೂ ವೆಚ್ಚದ ಈ ಯೋಜನೆಯು ಮಂತ್ರಿ ಮಾಲ್ ಸ್ವರೂಪದಲ್ಲಿ ತಯಾರಾಗಲಿದೆ.ಅಲ್ಲಿ ಮೆಟ್ರೋ ನಿಲ್ದಾಣದಿಂದ ಪ್ರಯಾಣಿಕರು ಮಾಲ್ ಗೆ ಪ್ರವೇಶ ಪಡೆಯಲು ಅವಕಾಶವಿದೆ.ಈ ಸ್ಥಳವು ಚಿಕ್ಪೆಪೇಟೆ  ಮೆಟ್ರೋ ನಿಲ್ದಾಣದಿಂದ ನೇರ ಪ್ರವೇಶವನ್ನು ಪಡೆಯುತ್ತದೆ. ಇದು ಪಾರ್ಕಿಂಗ್ ಮತ್ತು ಬಸ್ ನಿಲ್ದಾಣದೊಂದಿಗೆ  ಸಹ ಸಂಪರ್ಕಿಸುತ್ತದೆ.
ಆವರಣದ ಶುಚಿತ್ವವನ್ನುಕಾಪಾಡಿಕೊಳ್ಳುವುದು ಮತ್ತು ಹೆಚ್ಚಿನ ಜನರನ್ನು ಒಳಗೊಳ್ಳುವಂತಾಗಲು ಈ ಯೋಜನೆ ತಯಾರಿಸಲಾಗುತ್ತಿದೆ. ಸಧ್ಯ ಸ್ವಚ್ಛತೆ ಇಲ್ಲದಿರುವುದರಿಂದ ಅನೇಕ ಮಂದಿ ಈ ಪ್ರದೇಶಕ್ಕೆ ಭೇಟಿ ನೀಡುವುದಿಲ್ಲ ಮತ್ತು ಸಂಪರ್ಕವು ಸಹ ಸಮಸ್ಯೆಯಾಗಿದೆ.ಎಂದು , ಎಕ್ಸಿಕ್ಯುಟಿವ್ ಇಂಜಿನಿಯರ್ (ಸ್ಮಾರ್ಟ್ ಸಿಟಿ ಪ್ರಾಜೆಕ್ಟ್) ಪ್ರಕಾಶ್ ಕೆ ಎಸ್, ಪತ್ರಿಕೆಗೆ ಹೇಳಿದ್ದಾರೆ.ಮೈಸೂರು ಫ್ಲೈಓವರ್ ಮೇಲಿನಿಂದ ನೋಡಿದಲ್ಲಿ KR ಮಾರುಕಟ್ಟೆಯ ಅಸ್ತವ್ಯಸ್ಥತೆ ಅರಿವಾಗುತ್ತದೆ.ಆದರೆ ಯೋಜನೆಯು ಸರಕುಗಳ ಲೋಡ್ ಮತ್ತು ಅನ್ ಲೋಡ್ ಗೆ ಮೀಸಲಾದ ನಿಲ್ದಾಣವನ್ನೂ ಒಳಗೊಳ್ಲಲಿದೆ.ಮಾರುಕಟ್ಟೆ ಒಳಗೆ ಮಾರಾಟಗಾರರು ಈ ಸರಕುಗಳನ್ನು ತಮ್ಮದೇ ಟ್ರೇಲೀಗಳಲ್ಲಿ ತೆಗೆದುಕೊಂಡು ಹೋಗಬೇಕಾಗುವುದು.ಇನ್ನು ಸ್ಟ್ರೀಮ್ ಲೈನ್ ಮೂಲಕ ಮಾರಾಟ ಹಾಗೂ ವಿತರಣೆ ನಡೆಯುವಂತೆ ಮಾಡುವ ಉದ್ದೇಶವಿದೆ.
ಪ್ರಮುಖ ಜನಸಂದಣಿ ಪ್ರದೇಶಗಳಲ್ಲಿ ಒಂದಾದ ಮಾಂಸದ ಮಾರಾಟ ಕೇಂದ್ರವನ್ನು ಇಲ್ಲಿ ಪುನರ್ನಿರ್ಮಾಣ ಮಾಡಲಾಗುತ್ತಿದೆ. "ಇಡೀ ಮಾಂಸ ಮಾರುಕಟ್ಟೆಯನ್ನು ನಾವು ಕೆಡವಿ ಪುನರ್ನಿರ್ಮಾಣ ಮಾಡಲಿದ್ದೇವೆ.ಮಾಂಸವನ್ನು ತಾಜಾವಾಗಿರಿಸಿಕೊಳ್ಳಲು ಅನುಕೂಲವಾಗುವ ವ್ಯವಸ್ಥೆ ಕಲ್ಪಿಸಲಿದ್ದೇವೆ." ಅಧಿಕಾರಿಗಳು ಹೇಳಿದ್ದಾರೆ. ಫುಡ್ ಪ್ಲಾಝಾ ಸ್ವಚ್ಛ ಶೌಚಾಲಯಗಳು ಬರಲಿದೆ. ಪಾರಂಪರಿಕ ಕಟ್ಟಡದ  ಬಾಹ್ಯ  ಆಕಾರವನ್ನು ಹಾಗೆಯೇ ಉಳಿಸಿಕೊಳ್ಲುತ್ತೇವೆ.ಪೋಲಿಸ್ ಚೌಕಿ ಮತ್ತು ಪೋಸ್ಟಲ್ ಕಟ್ಟಡವನ್ನು ಮರುನಿರ್ಮಾಣ ಮಾಡಲಾಗುತ್ತದೆ.
ಮಾರುಕಟ್ಟೆಯ ಆವರಣದಲ್ಲಿ ಪಾದಾಚಾರಿ ಮಾರ್ಗಗಳ ಮೇಲೆ ಅತಿಕ್ರಮಣ ಮಾಡುವ ವ್ಯಾಪಾರಿಗಳಿಗೆ  ಸ್ವಚ್ಛವಾದ ನಿರ್ಮಿತ ಅಂಗಡಿಗಳೊಂದಿಗೆ ಮೀಸಲಾದ ಸ್ಥಳವನ್ನು ನೀಡಲಾಗುತ್ತದೆ. 
ಈ ಸ್ಥಳವು ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿದೆ, 1791 ರಲ್ಲಿ ಆಂಗ್ಲೋ-ಮೈಸೂರು ಯುದ್ಧದ ಸ್ಥಳ ಇದಾಗಿದೆ.ಹಾಗೆಯೇ ಈ ಜಾಗ ಕಾಲಾನಂತರದಲ್ಲಿ ಮಾರುಕಟ್ಟೆಯಾಗಿ ರೂಪುತಳೆದಿದೆ.1921ರಲ್ಲಿ ಮೈಸೂರಿನ ಒಡೆಯರ್ ಮಾರುಕಟ್ಟೆಯ ಮುಂಭಾಗದ ಪ್ರಸಿದ್ದ ರೆಡ್ ಫ್ರಂಟ್ ಸೈಡ್ ನಿರ್ಮಾಣ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com