ಬೆಂಗಳೂರಿಗೆ ಶರಾವತಿ ನೀರು: ಯೋಜನೆಗೆ ನನ್ನ ವಿರೋಧವಿದೆ ಎಂದ ಮದು ಬಂಗಾರಪ್ಪ

ಶರಾವತಿಯಿಂದ ಬೆಂಗಳೂರಿಗೆ ನೀರೊದಗಿಸುವ ಯೋಜನೆಗೆ ನನ್ನ ವಿರೋಧವಿದೆ ಮಲೆನಾಡಿನಲ್ಲಿಯೇ ನೀರಿಗೆ ಹಾಹಾಕಾರ ಎದ್ದಿದೆ. ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗುತ್ತಿರು....
ಮದು ಬಂಗಾರಪ್ಪ
ಮದು ಬಂಗಾರಪ್ಪ
ಶಿವಮೊಗ್ಗ: ಶರಾವತಿಯಿಂದ ಬೆಂಗಳೂರಿಗೆ ನೀರೊದಗಿಸುವ ಯೋಜನೆಗೆ ನನ್ನ ವಿರೋಧವಿದೆ ಮಲೆನಾಡಿನಲ್ಲಿಯೇ ನೀರಿಗೆ ಹಾಹಾಕಾರ ಎದ್ದಿದೆ. ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗುತ್ತಿರುವುದರಿಂದ ಇದೊಂದು ಯೋಜನೆ ಪ್ರಸ್ತಾಪವಾಗಿರಬಹುದು. ಒಂದು ವೇಳೆ ಈ ಯೋಜನೆಯ ಅನುಷ್ಠಾನಕ್ಕೆ ಮುಂದಾದರೆ ಹೋರಾಟ ಅನಿವಾರ್ಯವಾಗುತ್ತದೆ ಎಂದು ಮಧು ಬಂಗಾರಪ್ಪ ತಿಳಿಸಿದರು.
ನಗರದಲ್ಲಿ ನಡೆದ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಮಧುಬಂಗಾರಪ್ಪ, ಶಿವಮೊಗ್ಗ ಮತದಾರರು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿದ್ದಾರೆ. ವಿಐಎಸ್​ಎಲ್​ ಕಾರ್ಖಾನೆಯನ್ನು ಮುಚ್ಚಲು ಕೇಂದ್ರ ಸರ್ಕಾರ ಮುಂದಾಗಿದೆ. ಜಿಲ್ಲೆಯ ಪ್ರಮುಖ ಸಮಸ್ಯೆಯಾದ ಬಗರ್​ ಹುಕುಂ ಹಾಗೂ ಅರಣ್ಯ ಭೂಮಿ ಹಕ್ಕು ಸಮಸ್ಯೆಗಳ ಬಗ್ಗೆ ಸಂಸದ ರಾಘವೇಂದ್ರ ಅವರು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುವುದು ಗೊತ್ತಿಲ್ಲ. 
"ನಾನು ಜನರ ಪರ ಹೋರಾಟಕ್ಕೆ ಸದಾ ಸಿದ್ಧನಾಗಿರುತ್ತೇನೆ. ಯಾವ ಸಮಸ್ಯೆಯಿದ್ದರೂ ನನ್ನ ಗಮನಕ್ಕೆ ತರಬಹುದು ಸಮ್ಮಿಶ್ರ ಸರ್ಕಾರ ನಮ್ಮದಲ್ಲ, ನಿಮ್ಮದು ಎಂದು ಜನರಿಗೆ ಭರವಸೆ ನೀಡಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com