ಎಂಥಾ ಕಾಲ ಬಂತಪ್ಪಾ! ಕೆರೆ ನೀರಿಗೆ ಪೊಲೀಸ್ ಕಾವಲು!

ರಾಜ್ಯದ ಹಲವು ಭಾಗಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ, ಹೀಗಾಗಿ ಜಿಲ್ಲಾಡಳಿತ ನಂಬಲು ಸಾಧ್ಯವಾಗದ ಅಭೂತ ಪೂರ್ವ ಕ್ರಮಗಳನ್ನು ಕೈಗೊಂಡಿದೆ.
ದಾವಣಗೆರೆಯ ಶಾಂತಿ ಸಾಗರ ಕೆರೆ
ದಾವಣಗೆರೆಯ ಶಾಂತಿ ಸಾಗರ ಕೆರೆ
ದಾವಣಗೆರೆ: ರಾಜ್ಯದ ಹಲವು ಭಾಗಗಳಲ್ಲಿ  ನೀರಿನ ಸಮಸ್ಯೆ ಎದುರಾಗಿದೆ, ಹೀಗಾಗಿ ಜಿಲ್ಲಾಡಳಿತ  ನಂಬಲು ಸಾಧ್ಯವಾಗದ ಅಭೂತ ಪೂರ್ವ ಕ್ರಮಗಳನ್ನು ಕೈಗೊಂಡಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಶಾಂತಿ ಸಾಗರ ಕೆರೆ ಮತ್ತು ಚಿತ್ರದುರ್ಗದ ಕೆರೆಗಳಿಗೆ ಸುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ,. ಅಡಿಕೆ ಬೆಳೆಗಾರರಿಂದ ಕೆರೆಯ ನೀರನ್ನು ರಕ್ಷಿಸಲು  ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ.
ಸೆಕ್ಷನ್ 144ರ ಪ್ರಕಾರ ಶಾಂತಿ ಸಾಗರ ಮತ್ತು ಸೂಳೆಕೆರೆ ಗಳ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವುದನ್ನು ನಿಷೇಧಿಸಲಾಗಿದೆ,  ಸುಮಾರು 6,550 ಎಕರೆ ಜಾಗದಲ್ಲಿರುವ ಶಾಂತಿ ಸಾಗರ ಕೆರೆಯಲ್ಲಿ 2.70 ಟಿಎಂಸಿ ನೀರಿದೆ, ಇದರಿಂದ 65 ಗ್ರಾಮಗಳಿಗೆ ನೀರು ಸರಬರಾಜು ಮಾಡಲಾಗುತ್ತದೆ, 
ಕಳೆದ 10 -15  ವರ್ಷಗಳಿಂದ ಜನರು ಶಾಂತಿ ಸಾಗರ ಕೆರೆ.. ನೀರನ್ನು ಕದಿಯುತ್ತಿದ್ದಾರೆ, ಕೆರೆಯಿಂದ 5-6 ಸಾವಿರ  ಲೀಟರ್ ನೀರು ತುಂಬಿಸಿಕೊಂಡು ಹೋಗಿ 5ರಿಂದ 6 ಸಾವಿರ ರು,ಗೆ ಮಾರಾಟ ಮಾಡುತ್ತಾರೆ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಪಟೇಲ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com