ಟಿಎನ್ಐಇ ವರದಿ; ಬಾಲ್ಯ ವಿವಾಹ ಬಂಧನದಿಂದ ಅಪ್ರಾಪ್ತೆಯನ್ನು ಕಾಪಾಡಿದ ಅಧಿಕಾರಿಗಳು

ಬಾಲ್ಯವಿವಾಹದ ಬಂಧನಕ್ಕೊಳಗಾಗಬೇಕಾಗಿದ್ದ ಅಪ್ರಾಪ್ತ ಬಾಲಕಿಯನ್ನು ಪತ್ತೆಹಚ್ಚಿ ಮಕ್ಕಳ ಅಭಿವೃದ್ಧಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಯಾದಗಿರಿ: ಬಾಲ್ಯವಿವಾಹದ ಬಂಧನಕ್ಕೊಳಗಾಗಬೇಕಾಗಿದ್ದ ಅಪ್ರಾಪ್ತ ಬಾಲಕಿಯನ್ನು ಪತ್ತೆಹಚ್ಚಿ ಮಕ್ಕಳ ಅಭಿವೃದ್ಧಿ ಸಮಿತಿಗೆ ಜಿಲ್ಲಾಡಳಿತ ಅಧಿಕಾರಿಗಳು ಒಪ್ಪಿಸಿದ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಕಳೆದ 3ರಂದು ನಡೆಯಬೇಕಿದ್ದ ಮದುವೆಯನ್ನು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ಬಂದ ವರದಿ ನೋಡಿದ ಯಾದಗಿರಿ ಜಿಲ್ಲಾಡಳಿತದ ಅಧಿಕಾರಿಗಳು ಶಹಪುರ ತಾಲ್ಲೂಕಿನ ನೈಕಾಲ್ ಗ್ರಾಮದ ಚರ್ಚ್ ವೊಂದರಲ್ಲಿ ನಡೆಯಬೇಕಿದ್ದ ಮದುವೆಯನ್ನು ನಿಲ್ಲಿಸಿದ್ದಾರೆ.
ಬಾಲಕಿಯ ಪೋಷಕರು ಆರಂಭದಲ್ಲಿ ಬಾಲಕಿಯ ಇರುವಿಕೆಯನ್ನು ಹೇಳಲು ನಿರಾಕರಿಸಿದ್ದರು.
ಬಾಲಕಿ ಮದುವೆಯಾಗುವುದನ್ನು ರಕ್ಷಿಸಲು ವಾಡಗೆರ ಪೊಲೀಸ್ ಠಾಣೆಯ ಅಧಿಕಾರಿಗಳ ನೆರವಿನೊಂದಿಗೆ ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನೆ ನಿರ್ದೇಶಕ ರಘುವೀರ್ ಸಿಂಗ್ ರಾಥೋಡ್ ಸ್ಥಳಕ್ಕೆ ತೆರಳಿದ್ದರು. ಆದರೆ ಅಧಿಕಾರಿಗಳ ತಂಡಕ್ಕೆ ಎರಡು ದಿನ ಹುಡುಕಾಡಿದರೂ ಬಾಲಕಿ ಪತ್ತೆಯಾಗಲಿಲ್ಲ. ಇದನ್ನು ತಿಳಿದ ಗ್ರಾಮಸ್ಥರಲ್ಲಿ ಯಾರೋ, ಬಾಲಕಿಯನ್ನು ಯಾದಗಿರಿ ತಾಲ್ಲೂಕಿನ ಕೊವ್ಲೂರು ಗ್ರಾಮದ ಆಕೆಯ ಮನೆಯಲ್ಲಿ ಬಂಧಿಸಿಡಲಾಗಿದೆ ಎಂದು ಪತ್ರಿಕೆ ಪ್ರತಿನಿಧಿಗೆ ತಿಳಿಸಿದ್ದರು.
ಪತ್ರಿಕೆ ಪ್ರತಿನಿಧಿ ಜಿಲ್ಲಾಧಿಕಾರಿ ಕುರ್ಮಾ ರಾವ್ ಅವರಿಗೆ ವಿಷಯ ತಿಳಿಸಿದರು, ಅವರು ತಕ್ಷಣವೇ ಅಧಿಕಾರಿಗಳ ತಂಡವನ್ನು ಕಳೆದ ಸೋಮವಾರ ಮನೆಗೆ ಕಳುಹಿಸಿದರು. ಮನೆಗೆ ಅಧಿಕಾರಿಗಳ ತಂಡ ದಾಳಿ ನಡೆಸಿದಾಗ ಬಾಲಕಿಯ ಪೋಷಕರು ಮತ್ತು ಮದುವೆಯಾದ ವರನು ಇದ್ದನು.
ಮೂರನೇ ದಿನ ಬಾಲಕಿಯ ಮನೆಯಲ್ಲಿ ಪತ್ತೆಯಾಗಿದ್ದು ಆಕೆಯ ಪೋಷಕರು ಮತ್ತು ಮದುವೆಯಾಗುವ ಹುಡುಗನಿದ್ದನು.
ಆದರೆ ಅಧಿಕಾರಿಗಳು ಸ್ಥಳದಿಂದ ನಿರ್ಗಮಿಸಿದ ನಂತರ ಮದುವೆ ನಡೆದಿದೆ ಎಂದು ಬಾಲಕಿಯ ಸಂಬಂಧಿಕರು ಹೇಳುತ್ತಿದ್ದಾರೆ. ಪೋಷಕರನ್ನು ಬಾಲ್ಯ ವಿವಾಹ ಕಾಯ್ದೆಯಡಿ ದೂರು ದಾಖಲಿಸಲು ಮದುವೆ ನಡೆದಿದ್ದ ಬಗ್ಗೆ ಫೋಟೋ ದಾಖಲೆಗಳನ್ನು ಕೇಳುತ್ತಿದ್ದೇವೆ ಎಂದು ರಘುವೀರ್ ಸಿಂಗ್ ರಾಥೋಡ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com