ಸಮುದಾಯಗಳ ನಡುವಿನ ಒಗ್ಗಟ್ಟಿಗೆ ಹೆಸರಾದ ಕರಾವಳಿಯ ಮೀನು ಹಿಡಿಯುವ ಉತ್ಸವದ ಬಗ್ಗೆ ಕೇಳಿದ್ದೀರಾ?

ಇಲ್ಲಿ ನಡೆಯುವ ಮೀನು ಹಿಡಿಯುವ ಉತ್ಸವವು ಎಲ್ಲಾ ಬಗೆಯ ನಂಬಿಕೆ, ಸಂಪ್ರದಾಯದ ಜನರನ್ನೂ ಒಂದಾಗಿಸುತ್ತದೆ. ಚೆಲ್ಯಾರು ಖಂಡಿಗೆಯಲ್ಲಿರುವ ಶ್ರೀ ಧರ್ಮರಸು ಉಳ್ಳಾಯ ದೈವಸ್ಥಾನದಲ್ಲಿ....
ಸಮುದಾಯಗಳ ನಡುವಿನ ಒಗ್ಗಟ್ಟಿಗೆ ಹೆಸರಾದ ಕರಾವಳಿಯ ಮೀನು ಹಿಡಿಯುವ ಉತ್ಸವ
ಸಮುದಾಯಗಳ ನಡುವಿನ ಒಗ್ಗಟ್ಟಿಗೆ ಹೆಸರಾದ ಕರಾವಳಿಯ ಮೀನು ಹಿಡಿಯುವ ಉತ್ಸವ
ಮಂಗಳೂರು: ಇಲ್ಲಿ ನಡೆಯುವ ಮೀನು ಹಿಡಿಯುವ ಉತ್ಸವವು ಎಲ್ಲಾ ಬಗೆಯ ನಂಬಿಕೆ, ಸಂಪ್ರದಾಯದ ಜನರನ್ನೂ ಒಂದಾಗಿಸುತ್ತದೆ. ಚೆಲ್ಯಾರು ಖಂಡಿಗೆಯಲ್ಲಿರುವ ಶ್ರೀ ಧರ್ಮರಸು ಉಳ್ಳಾಯ ದೈವಸ್ಥಾನದಲ್ಲಿ ಬುಧವಾರ ನಡೆದ ವಾರ್ಷಿಕ ಮೀನು ಹಿಡಿಯುವ ಉತ್ಸವವು ಇಂತಹಾ ಒಗ್ಗಟ್ಟಿನ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ. ಈ ವೇಳೆ ಭಕ್ತರು ನಂದಿನಿ ನದಿಯಲ್ಲಿ ಮೀನುಗಳನ್ನು ಹಿಡಿದು ಸಂಭ್ರಮಿಸಿದ್ದಾರೆ.ಇದರಲ್ಲಿ ಹಿರಿಯ ನಾಗರಿಂಕರಿಂದ ಹಿಡಿದು ಮಕ್ಕಳ ವರೆಗೆ ಎಲ್ಲಾ ವಯೋಮಾನದವರೂ ಇದ್ದು ಪ್ರತಿಯೊಬ್ಬರೂ ನದಿಗಿಳಿದು ಮೀನು ಹಿಡಿಯುವುದಕ್ಕೆ ಪ್ರಯತ್ನಿಸಿ ಆ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರು.
ಸುಮಾರು ಎರಡು ಗಂಟೆಗಳ ಅವಧಿಯಲ್ಲಿ ಅವರುಗಳು ಬೀಸಿದ್ದ ಬಲೆಗೆ ನದಿಯಲ್ಲಿನ ಸಣ್ಣ, ದೊಡ್ಡ ಮೀನುಗಳದ ಪಯ್ಯ, ಇರ್ಪೆ, ಸರ್ಕಾರ್, ಮುದುವ ಹೀಗೆ ನಾನಾ ಬಗೆಯ ಮೀನುಗಳು ಸಿಕ್ಕವು. 
"ಈ ಹಬ್ಬವು ಯಾವುದೇ ನಿರ್ದಿಷ್ಟ ಸಮುದಾಯಕ್ಕೆ ಸೀಮಿತವಲ್ಲ. ಇಲ್ಲಿ ಎಲ್ಲಾ ಸಮುದಾಯದ ಜನರಿಗೆ ಪಾಲ್ಗೊಳ್ಳಲು ಅವಕಾಶವಿದೆ.ಇದು ಈ ಗ್ರಾಮದ ಅತ್ಯಂತ ಹಳೆಯ ಸಂಪ್ರದಾಯವಾಗಿದೆ"ಪಾವಂಜೆಯ ಲಾರೆನ್ಸ್ ಕುತಿನ್ಹಾ ಹೇಳಿದ್ದಾರೆ.
ಬೆಳಿಗ್ಗೆ 7 ಗಂಟೆಗೆ ನದಿಗೆ ಪ್ರಸಾದ ಸಮರ್ಪಿಸಿ ಪಟಾಕಿಗಳನ್ನು ಸಿಡಿಸಿದ ಬಳಿಕ ಈ ವಿಶೇಷ ಮೀನು ಹಿಡಿಯುವ ಉತ್ಸವಕ್ಕೆ ಚಾಲನೆ ದೊರಕುತ್ತದೆ.ಈ ಉತ್ಸವದ ಕಾರಣದಿಂದ ಇಡೀ ವರ್ಷ ಬೇರೆ ದಿನಗಳಲ್ಲಿ ಈ ಭಾಗದಲ್ಲಿ ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ.ಹೀಗಾಗಿ ಹಬ್ಬದ ದಿನ ಪ್ರತಿಯೊಬ್ಬರಿಗೆ ಮಿನು ಸಿಗುತ್ತವೆ.ಉತ್ತಮ ಮೀನುಗಳ ನಿರೀಕ್ಷೆ ಇರುವ ಜನರು ವಿಭಿನ್ನ ಗಾತ್ರದ ಬಲೆಗಳೊಡನೆ ನದಿಗಿಳಿಯುತ್ತಾರೆ."ಕೆಲವರು ಇದೇ ಹಬ್ಬಕ್ಕೆಂದು ಹೊಸ ಬಲೆಗಳನ್ನು ಸಹ ಖರೀದಿಸುತ್ತಾರೆ.ಕುಟುಂಬ, ಸ್ನೇಹಿತರೊಡನೆ ಕೂಡಿ ಮೀನು ಹಿಡಿಯಲು ಮುಂದಾಗುತ್ತಾರೆ. ಬಳಿಕ ತಾವು ಹಿಡಿದ ಮೀನುಗಳನ್ನು ತಿನ್ನುತ್ತಾರೆ" ಹಬ್ಬದಲ್ಲಿ ಪಾಲ್ಗೊಂಡ ಓರ್ವ ಭಕ್ತ ಸಂತೋಷ್ ಹೇಳಿದ್ದಾರೆ.
ಮೀನು ಹಿಡಿಯುವ ಉತ್ಸವ ಎಲ್ಲಾ ಸಮುದಾಯಗಳಿಗೆ ಮುಕ್ತವಾಗಿದೆ ಎಂದು ದೈವಸ್ಥಾನ ಅಧಿಕಾರಿ ಆದಿತ್ಯ ಮುಕಲ್ದಿ ಹೇಳಿದ್ದಾರೆ. "ಇದು ನಮ್ಮ ಸಂಪ್ರದಾಯ, ಅಂದಿನ ಕಾಲದಲ್ಲಿ ವಾಹನಗಳಿಲ್ಲದ ವೇಳೆ ಜನ ನಡೆದುಕೊಂಡೇ ದೈವಸ್ಥಾನಕ್ಕೆ ಆಗಮಿಸುತ್ತಿದ್ದರು. ಕೆಲವರು ಎರಡು ದಿನಗಳ ಕಾಲ ನಡೆಯುತ್ತಿದ್ದರು. ಆಹಾರವನ್ನೂ ಜತೆಗೆ ತರುತ್ತಿದ್ದರು" ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com