ಮಂಗಳೂರು: ಗೋಡ್ಸೆ ಜನ್ಮದಿನ ಆಚರಿಸಿದ ಓರ್ವ ಅರೆಸ್ಟ್

ಮಹಾತ್ಮಾ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಜನ್ಮದಿನ ಆಚರಿಸಿದ್ದ ಅಖಿಲ ಬಾರತ ಹಿಂದೂ ಮಹಾಸಭಾದ ಮುಖಂಡನೊಬ್ಬನನ್ನು ಮಂಗಳೂರು ಉಳ್ಲಾಲ ಪೋಲೀಸರು ಬಂಧಿಸಿದ್ದಾರೆ.

Published: 22nd May 2019 12:00 PM  |   Last Updated: 22nd May 2019 04:39 AM   |  A+A-


Man r arrested at Mangaluru after celebrating Nathuram Godse birthday

ಮಂಗಳೂರು: ಗೋಡ್ಸೆ ಜನ್ಮದಿನ ಆಚರಿಸಿದ ಓರ್ವ ಅರೆಸ್ಟ್

Posted By : RHN RHN
Source : Online Desk
ಮಂಗಳೂರು: ಮಹಾತ್ಮಾ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಜನ್ಮದಿನ ಆಚರಿಸಿದ್ದ ಅಖಿಲ ಬಾರತ ಹಿಂದೂ ಮಹಾಸಭಾದ ಮುಖಂಡನೊಬ್ಬನನ್ನು ಮಂಗಳೂರು ಉಳ್ಲಾಲ ಪೋಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ರಾಜೇಶ್ ಪೂಜಾರಿ ಎಂದು ಗುರುತಿಸಲಾಗಿದ್ದು ಮಾದ್ಯಮದ ವರದಿಯ ಆಧಾರಾದ ಮೇಲೆ ಉಳ್ಲಾಲ ಪೋಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿ ತನಿಖೆ ನಡೆಸಿದ್ದಾರೆ.

ಮೇ 21ರಂದು ಹಿಂದೂ ಮಹಾಸಭಾ ನಾಥೂರಾಮ್ ಗೋಡ್ಸೆಯ ಜಯಂತಿ ಆಚರಿಸಿ ಅವರ ಭಾವಚಿತ್ರಕ್ಕೆ ಪುಷ್ಪಗುಚ್ಚವಿಟ್ಟು ಸ್ಮರಿಸಿತ್ತು. ಇದರಲ್ಲಿ ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ಎಲ್.ಕೆ.ಸುವರ್ಣ ಕೂಡ ಭಾಗಿಯಾಗಿದ್ದರು. 

ಆದರೆ ಕಾರ್ಯಕ್ರಮದ ವಿರುದ್ಧ ಸಾಮಾಜಿಕ ತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ಆಯೋಜಕರ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಉಳ್ಳಾಲ ಪೋಲೀಸರು ಆರೋಪಿಗಳ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.

ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ಎಲ್.ಕೆ.ಸುವರ್ಣ, ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ, ಕಾರ್ಯಕರ್ತ ವಿಶ್ವನಾಥ್ ಲೋಕೇಶ್ ಸೇರಿ ಐವರ ವಿರುದ್ಧ ದೂರು ದಾಖಲಿಸಿಕೊಂಡ ಪೋಲೀಸರು ರಾಜೇಶ್ ನನ್ನು ಬಂಧಿಸಿದ್ದಾರೆ.

ಉಳಿದ ಆರೋಪಿಗಳ ಪತ್ತೆಗೆ ಶೋಧ ಕಾರ್ಯಾಚರಣೆ ನಡೆದಿದೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp