ಸಿಗ್ನಲ್ ಜಂಪ್ ಮಾಡಿ ನುಗ್ಗಿದ ಕೆಎಸ್ ಆರ್ ಟಿಸಿ ಬಸ್: ಯುವಕ ಸಾವು

ಕೆಎಸ್ ಆರ್ ಟಿಸಿ ಬಸ್ ಟ್ರಾಫಿಕ್ ಸಿಗ್ನಲ್ ನ್ನು ಜಂಪ್ ಮಾಡಿ ನುಗ್ಗಿದ ಪರಿಣಾಮ ಯುವಕನೋರ್ವ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Published: 26th May 2019 12:00 PM  |   Last Updated: 26th May 2019 09:02 AM   |  A+A-


KSRTC bus jumps signal; kills youth

ಸಿಗ್ನಲ್ ಜಂಪ್ ಮಾಡಿ ನುಗ್ಗಿದ ಕೆಎಸ್ ಆರ್ ಟಿಸಿ ಬಸ್: ಯುವಕ ಸಾವು

Posted By : SBV SBV
Source : Online Desk
ಬೆಂಗಳೂರು: ಕೆಎಸ್ ಆರ್ ಟಿಸಿ ಬಸ್ ಟ್ರಾಫಿಕ್ ಸಿಗ್ನಲ್ ನ್ನು ಜಂಪ್ ಮಾಡಿ ನುಗ್ಗಿದ ಪರಿಣಾಮ ಯುವಕನೋರ್ವ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

ರಾಜಾಜಿನಗರದ ನವರಂಗ್ ಬಳಿ ಈ ಘಟನೆ ನಡೆದಿದ್ದು, ಓರ್ವ ಯುವಕ ಮೃತಪಟ್ಟಿದ್ದರೆ, ಮಗು ಸೇರಿದಂತೆ ಒಟ್ಟು ಮೂವರು ಗಾಯಗೊಂಡಿದ್ದಾರೆ. ಸಿಗ್ನಲ್ ಜಂಪ್ ಮಾಡಿದ ಬಸ್ ಕಾರಿಗೆ ಡಿಕ್ಕಿ ಹೊಡೆದಿದ್ದರ ಪರಿಣಾಮ ಈ ಅಪಘಾತ ಸಂಭವಿಸಿದೆ. 

ಲಗ್ಗೆರೆ ನಿವಾಸಿ ರವಿ ಕಿರಣ್ ಮೃತ ವ್ಯಕ್ತಿಯಾಗಿದ್ದು, ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಕಾರು ಚಾಲಕ ಪುನೀತ್, ಗಂಗಾಧರ್, ವರಲಕ್ಷ್ಮಿ ಹಾಗೂ ಅವರ 3 ವರ್ಷದ ಮಗು ಸುಮಂತ್ ಅಪಘಾತದಲ್ಲಿ ಗಾಯಗೊಂಡಿದ್ದಾರೆ. 

ತೀವ್ರ ಜ್ವರದಿಂದ ಸುಮಂತ್ ನ್ನು ಆಸ್ಪತ್ರೆಗೆ ಕರೆದೊಯ್ಯಲು ಪೋಷಕರು ಕಾರು ತರಲು ಪುನೀತ್ ಸಹಾಯ ಕೇಳಿದ್ದಾರೆ.  ಆಸ್ಪತ್ರೆಗೆ ತೆರಳುತ್ತಿದ್ದ ಮಾರ್ಗದಲ್ಲಿ ಈ ಅಪಘಾತ ಸಂಭವಿಸಿದ್ದು ಬಸ್ ಚಾಲಕ ಪ್ರಕಾಶ್ ನ್ನು ಬಂಧಿಸಲಾಗಿದೆ.
Stay up to date on all the latest ರಾಜ್ಯ news with The Kannadaprabha App. Download now
facebook twitter whatsapp