ಬಿಬಿಎಂಪಿ ಪಾಲಿಕೆ ಸಭೆಯಲ್ಲಿ ಮೋದಿ ಮುಖವಾಡ ಧರಿಸಿದ ಬಿಜೆಪಿ ಸದಸ್ಯರು: ಕಾಂಗ್ರೆಸ್ ಆಕ್ಷೇಪ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಾಸಿಕ ಸಭೆಯಲ್ಲಿ ಬಿಜೆಪಿ ಸದಸ್ಯರು ಮೋದಿಯ ಮುಖವಾಡ ಧರಿಸಿ ಕಲಾಪದಲ್ಲಿ ಪಾಲ್ಗೊಂಡಿದ್ದು ವಿವಾದಕ್ಕೆ ಕಾರಣವಾಯಿತು.
ಬಿಬಿಎಂಪಿ ಕಚೇರಿ
ಬಿಬಿಎಂಪಿ ಕಚೇರಿ
ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಐತಿಹಾಸಿಕ ಗೆಲುವಿನ ಸಂಭ್ರಮಾಚರಣೆಯ ಅಂಗವಾಗಿ ಇಂದು ನಡೆದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಾಸಿಕ ಸಭೆಯಲ್ಲಿ ಬಿಜೆಪಿ ಸದಸ್ಯರು ಮೋದಿಯ ಮುಖವಾಡ ಧರಿಸಿ ಕಲಾಪದಲ್ಲಿ ಪಾಲ್ಗೊಂಡಿದ್ದು ವಿವಾದಕ್ಕೆ ಕಾರಣವಾಯಿತು.
ಸಭೆ ಆರಂಭಗೊಂಡ ನಂತರ, ಮೋದಿ ಮುಖವಾಡ ಧರಿಸಿದ ಬಿಜೆಪಿ ಸದಸ್ಯರು 'ಮೋದಿ, ಮೋದಿ' ಎಂದು ಕೂಗಿದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಬಿಜೆಪಿ ನಡೆ ಖಂಡಿಸಿದ ಆಡಳಿತ ಪಕ್ಷದ ಅಬ್ದುಲ್ ವಾಜಿದ್, ಭಾರತೀಯ ಜನತಾ ಪಕ್ಷವನ್ನು ಮೋದಿ ಜನತಾ ಪಕ್ಷ ಇಲ್ಲವೇ ಇವಿಎಂ ಪಕ್ಷ ಎಂದು ಬದಲಾಯಿಸಿಕೊಳ್ಳಿ ಎಂದು ಕಿಡಿಕಾರಿದರು.
ಇದಕ್ಕೆ ತಿರುಗೇಟು ನೀಡಿದ ವಿಪಕ್ಷ ನಾಯಕ ಪದ್ಮನಾಭರೆಡ್ಡಿ, ಮೋದಿ ಎಂದರೆ ಕಾಂಗ್ರೆಸ್ ಅವರಿಗೆ ನಡುಕ ಆರಂಭವಾಗುತ್ತದೆ ಎಂದು ವ್ಯಂಗ್ಯವಾಡಿದರು.ಕೆಲ ಸಮಯದ ನಂತರ ಬಿಜೆಪಿ ಸದಸ್ಯರು ಮುಖವಾಡ ತೆಗೆದಿರಿಸಿದ್ದರಿಂದ ಕಲಾಪ ಮುಂದುವರಿಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com