ಚಾಮರಾಜನಗರ: ಅತಿವೃಷ್ಟಿ ಪರಿಣಾಮ ಬೆಳೆ ಇಳುವರಿ ಕುಂಠಿತ, ರೈತರಲ್ಲಿ ಆತಂಕ 

ಅತಿವೃಷ್ಟಿಯಿಂದಾಗಿ ಬಾಳೆ, ಟೊಮ್ಯಾಟೊ, ಹುರುಳಿ ಹಾಗು ಹಸಿಕಡಲೆ ಬೆಳೆಗಳು ನಿರೀಕ್ಷಿತ ಮಟ್ಟದ ಇಳುವರಿ ಕೊಟ್ಟಿಲ್ಲ. ಹೀಗಾಗಿ ಗಡಿಜಿಲ್ಲೆಯ ರೈತರು ಕಂಗಾಲಾಗಿದ್ದಾರೆ.

Published: 04th November 2019 12:28 PM  |   Last Updated: 04th November 2019 12:28 PM   |  A+A-


Karnataka Floods Effect

ಸಂಗ್ರಹ ಚಿತ್ರ

Posted By : Srinivasamurthy VN
Source : RC Network

ಚಾಮರಾಜನಗರ: ಅತಿವೃಷ್ಟಿಯಿಂದಾಗಿ ಬಾಳೆ, ಟೊಮ್ಯಾಟೊ, ಹುರುಳಿ ಹಾಗು ಹಸಿಕಡಲೆ ಬೆಳೆಗಳು ನಿರೀಕ್ಷಿತ ಮಟ್ಟದ ಇಳುವರಿ ಕೊಟ್ಟಿಲ್ಲ. ಹೀಗಾಗಿ ಗಡಿಜಿಲ್ಲೆಯ ರೈತರು ಕಂಗಾಲಾಗಿದ್ದಾರೆ.

ಚಾಮರಾಜನಗರ: ಅತಿವೃಷ್ಟಿಯಿಂದ ಬಾಳೆ, ಟೊಮ್ಯಾಟೊ, ಹುರುಳಿ, ಹಸಿಕಡಲೆ ಬೆಳೆಗಳು ನಿರೀಕ್ಷಿತ ಮಟ್ಟದ ಇಳುವರಿ ತಂದಿಲ್ಲ. ಹೀಗಾಗಿ ಗಡಿ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ. ಗುಂಡ್ಲುಪೇಟೆ ಭಾಗದಲ್ಲಿ‌ ತರಕಾರಿ ಬೆಳೆಗಳಂತೂ ನೆಲಕಚ್ಚುವ ಭೀತಿ ಎದುರಾಗಿದೆ.ಅತಿವೃಷ್ಟಿ ತಂದ ಆತಂಕ: ಬೆಳೆ ಇಳುವರಿ ಕುಂಠಿತಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ 18 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಜೋಳ, ಹುರುಳಿ, ಹಸಿಕಡಲೆ ಬೆಳೆಗೆ ಕಂಟಕ ಎದುರಾಗಿದೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ನ.14 ರಿಂದ ಮಳೆ ಇಳಿಮುಖವಾಗಲಿದೆ ಎಂಬ ಮಾಹಿತಿ ರೈತರಲ್ಲಿ ಆಶಾಭಾವನೆ ಮೂಡಿಸಿದೆ. 

ಈ ಬಾರಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದ್ದು, 828.8 ಮಿಮೀ ಮಳೆಯಾಗಿದೆ. ಗುಂಡ್ಲುಪೇಟೆ ಭಾಗದಲ್ಲಿ ಹೆಚ್ಚು ಮಳೆಯಾಗಿದ್ದು ವಾಡಿಕೆಗಿಂತ ಶೇ.129 ಹೆಚ್ಚುವರಿ ಮಳೆಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕಿ ಚಂದ್ರಕಲಾ ಮಾಹಿತಿ ನೀಡಿದ್ದಾರೆ. ಕೊಳ್ಳೇಗಾಲ ಮತ್ತು ಹನೂರಿನಲ್ಲಿ ಮಣ್ಣಿನಲ್ಲಿ ತೇವಾಂಶ ಹೆಚ್ಚಾಗಿದ್ದು ರೈತರು ನೀರನ್ನು ಹೊರಹಾಕಬೇಕು ಎಂದು ಮನವರಿಕೆ ಮಾಡಿಕೊಟ್ಟಿದ್ದೇವೆ. ಹಿಂಗಾರು ಮಳೆಗೆ ಬೆಳೆ ನಷ್ಟ ಆಗುವ ಸಂಭವ ತೀರಾ ಕಡಿಮೆ ಎಂದು ತಿಳಿಸಿದರು.

-ಗೂಳಿಪುರ ನಂದೀಶ್

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp