ನಮ್ಮ ಮೆಟ್ರೋ ಕಾಮಗಾರಿ ಹಿನ್ನೆಲೆ: ಗ್ರೀನ್ ಲೈನ್ ಮಾರ್ಗದಲ್ಲಿ 4 ದಿನ ರೈಲು ಸಂಚಾರ ಸ್ಥಗಿತ

ನಮ್ಮ ಮೆಟ್ರೋ ಹಸಿರು ಮಾರ್ಗ (ಗ್ರೀನ್ ಲೈನ್)  ಬಳಸುವ ಪ್ರಯಾಣಿಕರು ಈ ಸುದ್ದಿಯನ್ನು ಅಗತ್ಯವಾಗಿ ಗಮನಿಸಿ! ಮುಂದಿನ ವಾರ ಈ ಮಾರ್ಗದ ಆರ್.ವಿ. ರಸ್ತೆ-ಯೆಲಚೇನಹಳ್ಳಿ ನಡುವಿನ ಮೆಟ್ರೋ ಸಂಚಾರ ನಾಲ್ಕು ದಿನಗಳ ಕಾಲ ರದ್ದಾಗಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಮ್ಮ ಮೆಟ್ರೋ ಹಸಿರು ಮಾರ್ಗ (ಗ್ರೀನ್ ಲೈನ್)  ಬಳಸುವ ಪ್ರಯಾಣಿಕರು ಈ ಸುದ್ದಿಯನ್ನು ಅಗತ್ಯವಾಗಿ ಗಮನಿಸಿ! ಮುಂದಿನ ವಾರ ಈ ಮಾರ್ಗದ ಆರ್.ವಿ. ರಸ್ತೆ-ಯೆಲಚೇನಹಳ್ಳಿ ನಡುವಿನ ಮೆಟ್ರೋ ಸಂಚಾರ ನಾಲ್ಕು ದಿನಗಳ ಕಾಲ ರದ್ದಾಗಲಿದೆ.

ನವೆಂಬರ್ 14 ರಿಂದ ನವೆಂಬರ್ 17 ರವರೆಗೆ  ಆರ್.ವಿ. ರಸ್ತೆ-ಯೆಲಚೇನಹಳ್ಳಿ ಮಾರ್ಗದಲ್ಲಿ ಮೆಟ್ರೋ ಸಂಚಾರ ತಾತ್ಕಾಲಿಕವಾಗಿ ರದ್ದಾಗಲಿದೆ. ಗುರುವಾರ ಬೆಳಿಗ್ಗೆ 5 ಗಂಟೆಯಿಂದ ಭಾನುವಾರ ರಾತ್ರಿಯವರೆಗೆ ಪ್ರಯಾಣಿಕರು ತಮ್ಮ ಸ್ಥಳಗಳನ್ನು ತಲುಪಲು ಪರ್ಯಾಯ ಸಾರಿಗೆಯನ್ನು ಬಳಸಬೇಕಾಗುವುದು. 

ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಶನ್ ಲಿಮಿಟೆಡ್ (ಬಿಎಂಆರ್ಸಿಎಲ್) ಆರ್.ವಿ. ರಸ್ತೆಯಿಂದ ಎಲೆಕ್ಟ್ರಾನಿಕ್ಸ್ ಸಿಟಿಗೆ ನಿರ್ಮಾಣ ಕಾರ್ಯಗಳನ್ನು ಕೈಗೆತ್ತಿಕೊಂಡ ಪರಿಣಾಮ ಈ ಪರಿಸ್ಥಿತಿ ಎದುರಾಗಿದೆ/“ಆರ್‌ವಿ ರೋಡ್ ಮೆಟ್ರೋ ನಿಲ್ದಾಣದ ದಕ್ಷಿಣ ಭಾಗದಲ್ಲಿ, ಕಾರ್ಯಾಚರಣೆಯ ಗ್ರೀನ್ ಲೈನ್‌ನಾದ್ಯಂತ ವಯಾಡಕ್ಟ್ ಸೂಪರ್‌ಸ್ಟ್ರಕ್ಚರ್‌ಗಳನ್ನು ಪ್ರಾರಂಭಿಸುವ ಕೆಲಸವನ್ನು ಬಿಎಂಆರ್‌ಸಿಎಲ್ ಕೈಗೆತ್ತಿಕೊಳ್ಳುತ್ತಿದೆ. ಈ ಕಾರ್ಯವು ಪ್ರಸ್ತುತ ಗ್ರೀನ್ ಲೈನ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಮೆಟ್ರೋ ಕಾರಿಡಾರ್ ನಡುವಿನ ಸಂಪರ್ಕಕ್ಕಾಗಿ ಮಾಡಲಾಗುತ್ತಿದ್ದು ಇದು ಆರ್.ವಿ. ರಸ್ತೆಯ ಮೆಟ್ರೋ ನಿಲ್ದಾಣದ ಅಭಿವೃದ್ಧಿ ಭಾಗವಾಗಿದೆ.

"ಆರ್.ವಿ. ರಸ್ತೆ ಮೆಟ್ರೋ ನಿಲ್ದಾಣದಿಂದಬೆಳಿಗ್ಗೆ 5.30 ರಿಂದ ರಾತ್ರಿ 11.45 ರವರೆಗೆ ಮತ್ತು ನವೆಂಬರ್ 14, 15 ಮತ್ತು 16 ರಂದು ಯಲಚೇನಹಳ್ಳಿ ಮೆಟ್ರೋ ನಿಲ್ದಾಣದಿಂದ ಬೆಳಿಗ್ಗೆ 4.45 ರಿಂದ ರಾತ್ರಿ 10.30 ವರೆಗೆ ಮೆಟ್ರೋ ಫೀಡರ್ ಬಸ್ಸುಗಳು ಲಭ್ಯವಾಗಿರಲಿದೆ.ಆದಾಗ್ಯೂ, ನವೆಂಬರ್ 17 ರಂದು ಬಸ್ ಸೇವೆಗಳು ಯಲಚೇನಹಳ್ಳಿಯಿಂದ ಬೆಳಿಗ್ಗೆ 6.30 ಕ್ಕೆ ಮತ್ತು ಆರ್‌ವಿ ರಸ್ತೆಯಿಂದ ಬೆಳಿಗ್ಗೆ 7.15 ಕ್ಕೆ ಪ್ರಾರಂಭಿಸಿ. ಈ ಬಸ್ಸುಗಳು ಮಧ್ಯಂತರ ಮೆಟ್ರೋ ನಿಲ್ದಾಣಗಳಾದ ಬನಶಂಕರಿ ಮತ್ತು ಜೆಪಿ ನಗರಗಳಿಗೆ ಸಂಪರ್ಕಿಸುತ್ತದೆ"ಬಿಎಂಆರ್‌ಸಿಎಲ್‌ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿ.ಎಲ್.ಯಶವಂತ್ ಚವಾಣ್ ಅವರು ಬಿಡುಗಡೆ ಮಾಡಿದ ಹೇಳಿಕೆ ವಿವರಿಸಿದೆ.

ನವೆಂಬರ್ 18 ಬೆಳಿಗ್ಗೆ 5 ಗಂಟೆಗೆ ನಾಗಸಂದ್ರದಿಂದ ಯೆಲಚೇನಹಳ್ಳಿಯ ನಡುವೆ ನಿಯಮಿತ ರೈಲು ಸೇವೆಗಳು ಪುನರಾರಂಭಗೊಳ್ಳಲಿವೆ.ನಾಯಂಡನಹಳ್ಳಿಯಿಂದ ಬೈಯಪ್ಪನಹಳ್ಳಿಗೆಸಾಗುವ ನೇರಳೆ ಮಾರ್ಗ (ಪರ್ಪಲ್ ಲೈನ್)  ಸೇವೆಗಳಲ್ಲಿ ಯಾವ ವ್ಯತ್ಯಾಸಗಳಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com