ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ: ರಾಜ್ಯ ಕ್ರಿಕೆಟ್ ಸಂಸ್ಥೆಗೆ ನೋಟಿಸ್

ಕೆಪಿಎಲ್ ಬೆಟ್ಟಿಂಗ್ ಮತ್ತು ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಹಾಗೂ ಎಲ್ಲಾ ಕೆಪಿಎಲ್ ತಂಡದ ಮಾಲೀಕರು, ಕೆಲ ಆಟಗಾರರು ಹಾಗೂ ಮ್ಯಾನೇಜರ್ ಗಳಿಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ಜಾರಿ ಮಾಡಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೆಪಿಎಲ್ ಬೆಟ್ಟಿಂಗ್ ಮತ್ತು ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಹಾಗೂ ಎಲ್ಲಾ ಕೆಪಿಎಲ್ ತಂಡದ ಮಾಲೀಕರು, ಕೆಲ ಆಟಗಾರರು ಹಾಗೂ ಮ್ಯಾನೇಜರ್ ಗಳಿಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ಜಾರಿ ಮಾಡಿದೆ. 

ಪ್ರಕರಣ ಸಂಬಂಧ ನಾಲ್ವರು ಆಟಗಾರರು ಸೇರಿದಂತೆ ಒಟ್ಟು 87 ಮಂದಿ ಬಂಧನಕ್ಕೊಳಗಾಗಿದ್ದು, ತಲೆಮರೆಸಿಕೊಂಡಿರುವ ಬಳ್ಳಾರಿ ತಂಡದ ಮಾಲೀಕನಿಗಾಗಿ ಲುಕ್ಔಟ್ ನೋಟಿಸ್ ಕೂಡ ಜಾರಿಯಾಗಿದೆ. 

ಇನ್ನು ಬೆಟ್ಟಿಂಗ್ ಜಾಲದ ಶೋದ ಮುಂದುವರೆಸಿರುವ ಪೊಲೀಸರು, ವಿಚಾರಣೆಗೆ ಬರುವಂತೆ ಕೆಲ ಆಟಗಾರರಿಗೆ ನೋಟಿಸ್ ನೀಡಿದ್ದಾರೆ. 

ಕೆಪಿಎಲ್ ನಿರ್ವಹಣೆ ಕುರಿತು ಮಾಹಿತಿ ಪಡೆಯಲು ರಾಜ್ಯ ಕ್ರಿಕೆಟ್ ಸಂಸ್ಥೆ, ಕೆಪಿಎಲ್ ತಂಡಗಳ ಮಾಲೀಕರು ಹಾಗೂ ವ್ಯವಸ್ಥಾಪಕರಿಗೆ ವಿಚಾರಣೆಗೆ ಬರುವಂತೆ ಸಿಸಿಬಿ ಅಧಿಕಾರಿಗಳು ಸೂಚಿಸಿದ್ದಾರೆ. ಇದರಲ್ಲಿ ಪ್ರಮುಖವಾಗಿ 18 ಅಂಶಗಳನ್ನು ಉಲ್ಲೇಖಿಸಿರುವ ಸಿಸಿಬಿ, ಇವುಗಳಿಗೆ ಲಿಖಿತವಾಗಿ ಉತ್ತರ ನೀಡುವಂತೆ ಕೂಡ ಕೆಎಸ್'ಸಿಎ ಮತ್ತು ಕೆಪಿಎಲ್ ತಂಡದ ಮಾಲೀಕರಿಗೆ ನೋಟಿಸ್ ನಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ. 

ವಿಚಾರಣೆ ಬಳಿಕ ಮ್ಯಾಚ್ ಫಿಕ್ಸಿಂಗ್ ಕೃತ್ಯಕ್ಕೆ ಮತ್ತಷ್ಟು ಮಹತ್ವದ ವಿಚಾರಗಳು ಬಹಿರಂಗೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com