ಯುವ ದಸರಾ ಉದ್ಘಾಟನೆಗೆ ಗೈರು: ಮೈಸೂರು ಜನತೆ ಬಳಿ ಕ್ಷಮೆಯಾಚಿಸಿದ ಗಾಯಕಿ ರಾನಿ ಮಂಡಲ್

ಯುವ ದಸರಾ ಉದ್ಘಾಟನೆಗೆ ಗೈರು ಹಾಜರಾಗಿದ್ದ ತೆರಿ ಮೇರಿ ಖ್ಯಾತಿ ಗಾಯಕಿ ರಾನಿ ಮಂಡಲ್ ಅವರು, ವಿಡಿಯೋ ಮೂಲಕ ಮೈಸೂರು ಜನತೆ ಬಳಿ ಕ್ಷಮೆಯಾಚಿಸಿದ್ದಾರೆ. 

Published: 02nd October 2019 01:43 PM  |   Last Updated: 03rd October 2019 07:36 PM   |  A+A-


Ranu Mondal

ರಾನು ಮಂಡಲ್

Posted By : srinivasamurthy
Source : Online Desk

ಮೈಸೂರು: ಯುವ ದಸರಾ ಉದ್ಘಾಟನೆಗೆ ಗೈರು ಹಾಜರಾಗಿದ್ದ ತೆರಿ ಮೇರಿ ಖ್ಯಾತಿ ಗಾಯಕಿ ರಾನಿ ಮಂಡಲ್ ಅವರು, ವಿಡಿಯೋ ಮೂಲಕ ಮೈಸೂರು ಜನತೆ ಬಳಿ ಕ್ಷಮೆಯಾಚಿಸಿದ್ದಾರೆ. 

ದಸರಾ ಮಹೋತ್ಸವ ಹಿನ್ನಲೆಯಲ್ಲಿ ಮಂಗಳವಾರ ಮೈಸೂರಿನಲ್ಲಿ ಯುವ ದಸರಾ ಉದ್ಘಾಟನೆಯಾಯಿತು. ಉದ್ಘಾಟನಾ ಕಾರ್ಯಕ್ರಮಕ್ಕೆ ಪಿ.ವಿ. ಸಿಂಧು ಹಾಗೂ ಬಾಲಿವುಡ್ ಹಿನ್ನೆಲೆ ಗಾಯಕಿ ರಾನಿ ಮಂಡಲ್ ಅವರಿಗೆ ಆಹ್ವಾನ ನೀಡಲಾಗಿತ್ತು. ಆದರೆ, ಕಾರ್ಯಕ್ರಮಕ್ಕೆ ರಾನು ಮಂಡಲ್ ಗೈರು ಹಾಜರಾಗಿದ್ದರು. 

ಈ ಹಿನ್ನೆಲೆಯಲ್ಲಿ ವಿಡಿಯೋ ಮೂಲಕ ಕ್ಷಮೆ ಕೇಳಿರುವ ಅವರು, ನಾನು ಅನಾರೋಗ್ಯದಿಂದ ಬಳಲುತ್ತಿದ್ದೇನೆ. ಹೀಗಾಗಿ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಿಲ್ಲ ಎಂದಿದ್ದಾರೆ.

ನಮಸ್ತೆ, ಮೈಸೂರು ದಸರಾಗೆ ನೀವು ನನಗೆ ಆಹ್ವಾನ ನೀಡಿದ್ದೀರಿ. ಆದರೆ, ಇಂದು ನನಗೆ ಬರಲು ಆಗಲಿಲ್ಲ. ಏಕೆಂದರೆ ನನಗೆ ಆರೋಗ್ಯ ಸಮಸ್ವಿಯ ಇದೆ. ಹೀಗಾಗಿ ನಾನು ಬರಲು ಆಗುತ್ತಿಲ್ಲ. ನಾನು ಬರದೇ ಇರುವುದಕ್ಕೆ ಕ್ಷಮೆ ಕೇಳುತ್ತೇನೆ. ಮುಂದಿನ ಬಾರಿ ಅವಕಾಶ ಸಿಕ್ಕರೆ, ಖಂಡಿತವಾಗಿಯೂ ಬರುತ್ತೇನೆಂದು ಹಿಂದಿಯಲ್ಲಿ ಹೇಳಿಕೊಂಡಿದ್ದಾರೆ. 

Stay up to date on all the latest ರಾಜ್ಯ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp