ನೆರೆ ಪರಿಹಾರ ವಿಳಂಬ: ಅನಂತ್ ಕುಮಾರ್ ಪುತ್ರಿಯರ ಹೇಳಿಕೆಗೆ ಬಿಜೆಪಿ ನಾಯಕರು ದಿಗ್ಭ್ರಾಂತ!

ರಾಜ್ಯ ರಾಜಕೀಯ ವಿಚಾರದಲ್ಲಿ ಎಂದಿಗೂ ಮಧ್ಯೆಪ್ರವೇಶಿಸದೇ ಇದ್ದ ದಿವಂಗತ ಬಿಜೆಪಿ ಹಿರಿಯ ನಾಯಕ ಅನಂತ್ ಕುಮಾರ್ ಅವರ ಪುತ್ರಿಯರು, ರಾಜ್ಯ ನೆರೆ ಪರಿಹಾರ ವಿಚಾರದಲ್ಲಿ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ದನಿ ಎತ್ತಿರುವುದು ಇದೀಗ ಬಿಜೆಪಿ ನಾಯಕರಲ್ಲಿ ದಿಗ್ಭ್ರಾಂತ ಮೂಡಿಸಿದೆ. 
ದಿವಂಗತ ಬಿಜೆಪಿ ಹಿರಿಯ ನಾಯಕ ಅನಂತ್ ಕುಮಾರ್
ದಿವಂಗತ ಬಿಜೆಪಿ ಹಿರಿಯ ನಾಯಕ ಅನಂತ್ ಕುಮಾರ್

ನೆರೆ ಪರಿಹಾರ ವಿಚಾರದಲ್ಲಿ ರಾಜಕೀಯ ಬೇಡ, ಮೊದಲು ಪರಿಹಾರಕ್ಕೆ ಮುಂದಾಗಿ: ಅನಂತ್ ಕುಮಾರ್ ಪುತ್ರಿಯರ ಆಗ್ರಹ

ಬೆಂಗಳೂರು: ರಾಜ್ಯ ರಾಜಕೀಯ ವಿಚಾರದಲ್ಲಿ ಎಂದಿಗೂ ಮಧ್ಯೆಪ್ರವೇಶಿಸದೇ ಇದ್ದ ದಿವಂಗತ ಬಿಜೆಪಿ ಹಿರಿಯ ನಾಯಕ ಅನಂತ್ ಕುಮಾರ್ ಅವರ ಪುತ್ರಿಯರು, ರಾಜ್ಯ ನೆರೆ ಪರಿಹಾರ ವಿಚಾರದಲ್ಲಿ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ದನಿ ಎತ್ತಿರುವುದು ಇದೀಗ ಬಿಜೆಪಿ ನಾಯಕರಲ್ಲಿ ದಿಗ್ಭ್ರಾಂತ ಮೂಡಿಸಿದೆ. 

ನೆರೆ ಪರಿಹಾರ ಬಿಡುಗಡೆ ವಿಚಾರದಲ್ಲಿ ಕೇಂದ್ರ ಸರ್ಕಾರ ನಿರ್ಲಕ್ಷ್ಯ ತೋರಿಸುತ್ತಿರುವ ಹಿನ್ನೆಲೆಯಲ್ಲಿ ಅನಂತ್ ಕುಮಾರ್ ಅವರ ಇಬ್ಬರು ಪುತ್ರಿಯರಾದ ವಿಜೇತ ಅನಂತ್ ಕುಮಾರ್ ಹಾಗೂ ಐಶ್ವರ್ಯ ಅನಂತ್ ಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ವಿಜೇತ ಅನಂತ್ ಕುಮಾರ್ ಅವರು, ಪ್ರವಾಹದಿಂದಾಗಿ ರಾಜ್ಯದ ಅರ್ಧಕ್ಕಿಂತಲೂ ಹೆಚ್ಚು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗಾಗಿ ಮಿಡಿಯಬೇಕಾಗಿರುವ ಸಮಾಜ ಇಂದು ಕಠೋರವಾಗಿ ಅಸೂಕ್ಷ್ಮತೆಯಿಂದ ವರ್ತಿಸುತ್ತಿದೆ. ಅವರ ಧ್ವನಿ ಕೇಳಬೇಕಾದವರು ಕಿವುಡಾಗಿದ್ದಾರೆ. ಕನ್ನಡಿಗರು ತೋರುತ್ತಿರುವ ಸಹಕಾರ ಮತ್ತು ಕರುಣೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದಾರೆ. 

ಇದರಂತೆ ಐಶ್ವರ್ಯ ಅನಂತ್ ಕುಮಾರ್ ಅವರೂ ಕೂಡ ಟ್ವೀಟ್ ಮಾಡಿದ್ದು, ರಾಜ್ಯದಲ್ಲಿ ಪ್ರವಾಹದಿಂದಾಗಿ 22 ಜಿಲ್ಲೆಗಳು, 103 ತಾಲೂಕಿನ ಜನರು ನಲುಗುತ್ತಿದ್ದಾರೆ. ಕಳೆದೆರಡು ತಿಂಗಳುಗಳಿಂದ ಪರಿಹಾರ ನಿರೀಕ್ಷೆಯಲ್ಲಿರುವ ಜನರಿಗೆ ಯಾವುದೇ ಆಸರೆ ಸಿಕ್ಕಿಲ್ಲ. ಈ ವಿಚಾರ ಕುರಿತು ರಾಜ್ಯ ನಾಯಕರು ಕೇಂದ್ರದ ಮೇಲೆ ಒತ್ತಡ ಹೇರುವಲ್ಲಿ ವಿಫಲರಾಗಿದ್ದಾರೆ. ಜೊತೆಗೆ ಕೇಂದ್ರ ಕೂಡ ರಾಜ್ಯದ ವಿಚಾರದಲ್ಲಿ ತಾರತಮ್ಯ ಮಾಡುತ್ತಾ ರಾಜಕೀಯ ನಡೆಸುತ್ತಿದೆ. ಪ್ರವಾಹ ವಿಚಾರದಲ್ಲಿ ನಮಗೆ ರಾಜಕೀಯ ಬದಲು ಪರಿಹಾರ ನೀಡಿ ಎಂದು ಹೇಳಿದ್ದಾರೆ. ಅಲ್ಲದೆ, ವಿ ಮಿಸ್ ಅನಂತ್ ಕುಮಾರ್ ಎಂದು ಹ್ಯಾಷ್ ಟ್ಯಾಗ್ ಕೂಡ ಹಾಕಿರುವ ಅವರು, ಅನಂತ್ ಕುಮಾರ್ ಇದ್ದಿದ್ದರೆ ರಾಜ್ಯದ ಪರಿಸ್ಥಿತಿ ಹೀಗಾಗುತ್ತಿರಲಿಲ್ಲ ಎಂದು ರಾಜ್ಯದ ಸಂಸದರಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. 

ಇನ್ನು ಪುತ್ರಿಯರ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿಯವರು, ರಾಜ್ಯದ ಪ್ರವಾಹ ಪರಿಸ್ಥಿತಿಯನ್ನು ಕೇಂದ್ರದ ನಾಯಕರಿಗೆ ಸೂಕ್ತ ರೀತಿಯಲ್ಲಿ ವಿವರಿಸಿಲ್ಲ. ಇದನ್ನೇ ಇಂದು ಜನರೂ ಹೇಳುತ್ತಿದ್ದಾರೆ. ಇದರಲ್ಲಿ ಯಾರನ್ನೂ ದೂರಲು ಸಾಧ್ಯವಿಲ್ಲ. 1991ರಿಂದಲು ಪ್ರಧಾನಿ ಮೋದಿಯವರೊಂದಿಗೆ ಅನಂತ್ ಕುಮಾರ್ ಇದ್ದರು. ಇದರಿಂದ ರಾಜ್ಯದ ಪರಿಸ್ಥಿತಿ ಬಗ್ಗೆ ಸೂಕ್ತ ರೀತಿಯಲ್ಲಿ ಮನವರಿಕೆ ಮಾಡಿಕೊಡುತ್ತಿದ್ದರು. ಪುತ್ರಿಯರ ಟ್ವೀಟ್'ನ್ನು ಸರಿಯಾದ ರೀತಿಯಲ್ಲಿ ಅರ್ಥೈಸಬೇಕು. ಅವರು ತಮ್ಮ ತಂದೆಯನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com