ಕಂಬಳಿ ಕೇಳಿದರೆ ಕರ್ಚಿಫ್ ನೀಡಿದ್ದಾರೆ: ಮಧ್ಯಂತರ ಪರಿಹಾರ ಬಿಡುಗಡೆ ಕುರಿತು ಪ್ರಕಾಶ್ ರಾಜ್ ವ್ಯಂಗ್ಯ

ರಾಜ್ಯದಲ್ಲಿ ಉಂಟಾಗಿರುವ ನೆರೆ ಪರಿಹಾರಕ್ಕಾಗಿ ಕೇವಲ ರೂ.1,200 ಕೋಟಿ ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ವ್ಯಂಗ್ಯವಾಡಿದ್ದಾರೆ. 
ಪ್ರಕಾಶ್ ರಾಜ್
ಪ್ರಕಾಶ್ ರಾಜ್

ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ನೆರೆ ಪರಿಹಾರಕ್ಕಾಗಿ ಕೇವಲ ರೂ.1,200 ಕೋಟಿ ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ವ್ಯಂಗ್ಯವಾಡಿದ್ದಾರೆ. 

ಸಾಮಾಜಿಕ ಜಾಲತಾಣ ಟ್ವಟರ್ ನಲ್ಲಿ ಟ್ವೀಟ್ ಮಾಡಿರುವ ಪ್ರಕಾಶ್ ರಾಜ್, ಹೊದ್ದುಕೊಳ್ಳಲು ನಾವು ಕಂಬಳಿ ಕೇಳಿದರೆ, ಕೇವಲ ಕರ್ಚೀಫ್'ನ್ನು ಭಿಕ್ಷೆ ಕೊಟ್ಟು ಬೀಗುತ್ತಿದ್ದಾರೆಂದು ಹೇಳಿದ್ದಾರೆ. 

ಹೊದ್ದುಕೊಳ್ಳಲು ಕಂಬಳಿ ಕೇಳಿದರೆ, ಕೇವಲ ಕರ್ಚೀಫ್ ಭಿಕ್ಷೆ ಕೊಟ್ಟು ಬೀಗುತ್ತಿದ್ದಾರೆ ಉತ್ತರ ಕುಮಾರರು. ಪ್ರಜೆಗಳೇ ಮರಳಾಗದಿರಿ. ದೇಶದ ದುಡ್ಡು ನಮ್ಮದು. ಸಂಕಷ್ಟದಲ್ಲಿ ಪಕ್ಷಾತೀತರಾಗಿರಿ. ಪ್ರಶ್ನಿಸಿವುದನ್ನು ನಿಲ್ಲಿಸಬೇಡಿ. ಯಾರೇ ಆದರೂ ನಾವು ಉಗಿಯುತ್ತಿದ್ದರೆ ಮಾತ್ರ ಕೆಲಸ ಮಾಡುವುದು ಅಲ್ವಾ? ಎಂದು ಟ್ವೀಟ್ ಮಾಡಿದ್ದಾರೆ. 

ತಮ್ಮ ಜೊತೆಗಿನ ಟ್ವೀಟ್ ಜೊತೆಗೆ ಕೇಂದ್ರ ಸರ್ಕಾರದ ವಿರುದ್ಧ ವಿವಿಧ ಜನರು ಮಾಡಿರುವ ಟೀಕೆಗಳನ್ನು ಪ್ರಕಾಶ್ ಹಂಚಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com